ಪುನೀತ್ ರಾಜ್ಕುಮಾರ್ ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಂಡ ಯೂಟ್ಯೂಬ್ ಸಂಸ್ಥೆ
ಪುನೀತ್ ರಾಜ್ಕುಮಾರ್ ಅವರು ‘ಫುಡ್ ಲವರ್ಸ್ ಟಿವಿ’ ಯೂಟ್ಯೂಬ್ ಚಾನೆಲ್ಗೆ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಅವರು ಒಂದು ವಿಶೇಷ ಸಾಲುಗಳನ್ನು ಹೇಳಿದ್ದರು. ಇದರ ಸ್ಕ್ರೀನ್ಶಾಟ್ಅನ್ನು ಯೂಟ್ಯೂಬ್ ಹಂಚಿಕೊಂಡಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಮ್ಮನ್ನು ಅಗಲಿ ಮೂರು ತಿಂಗಳು ಕಳೆಯುತ್ತಾ ಬಂದಿದೆ. ಅವರಿಲ್ಲ ಎಂಬ ಸತ್ಯದ ಜತೆ ಸಾಗೋದು ಎಲ್ಲರಿಗೂ ಕಷ್ಟವಾಗುತ್ತದೆ. ಪುನೀತ್ ಅವರು ಏಕಾಏಕಿ ಮೃತಪಡುತ್ತಾರೆ ಎಂದು ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಇದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಲೇ ಇಲ್ಲ. ಈ ಮಧ್ಯೆ ಪುನೀತ್ ರಾಜ್ಕುಮಾರ್ ಅವರನ್ನು ನೆನಪಿಸಿಕೊಳ್ಳುವ ಕೆಲಸ ಎಲ್ಲರಿಂದಲೂ ಆಗುತ್ತಿದೆ. ಪುನೀತ್ ಮಾಡಿದ ಸಾಧನೆ, ಪುನೀತ್ ಮಾಡಿದ ಸಮಾಜ ಸೇವೆ, ಅಪ್ಪು ಅವರ ಸಿನಿಮಾಗಳು, ಅವರು ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಈಗ ಯೂಟ್ಯೂಬ್ ಇಂಡಿಯಾ (YouTube India) ಕೂಡ ಪುನೀತ್ ಅವರು ಈ ಮೊದಲು ಹೇಳಿದ ಸಾಲುಗಳನ್ನು ನೆನಪಿಸಿಕೊಂಡಿದೆ. ಈ ಬಗ್ಗೆ ಟ್ವೀಟ್ ಒಂದನ್ನು ಮಾಡಿದೆ.
ಪುನೀತ್ ರಾಜ್ಕುಮಾರ್ ಅವರು ‘ಫುಡ್ ಲವರ್ಸ್ ಟಿವಿ’ ಯೂಟ್ಯೂಬ್ ಚಾನೆಲ್ಗೆ ಸಂದರ್ಶನವೊಂದನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಅವರು ಒಂದು ವಿಶೇಷ ಸಾಲುಗಳನ್ನು ಹೇಳಿದ್ದರು. ಇದರ ಸ್ಕ್ರೀನ್ಶಾಟ್ಅನ್ನು ಯೂಟ್ಯೂಬ್ ಹಂಚಿಕೊಂಡಿದೆ. ಇದನ್ನು ಸಾಕಷ್ಟು ಮಂದಿ ರೀಟ್ವೀಟ್ ಮಾಡಿಕೊಂಡಿದ್ದಾರೆ. ಹಾಗಾದರೆ, ಪುನೀತ್ ಹೇಳಿದ ಆ ವಿಶೇಷ ಮಾತುಗಳು ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
a legend once said pic.twitter.com/2WuqN0C2E2
— YouTube India (@YouTubeIndia) January 17, 2022
‘ಮುಂದಿನ ಬೇಂಚ್ನಲ್ಲಿ ಕುಳಿತರೆ ನಿಮಗೆ ಬೋರ್ಡ್ ಮಾತ್ರ ಕಾಣುತ್ತದೆ. ಆದರೆ, ಬ್ಯಾಕ್ ಬೇಂಚ್ನಲ್ಲಿ ಕುಳಿತರೆ ಇಡೀ ಜಗತ್ತೇ ಕಾಣುತ್ತದೆ’ ಎಂದು ಪುನೀತ್ ಹೇಳಿದ್ದರು. ಇದನ್ನು ಪೋಸ್ಟ್ ಮಾಡಿರುವ ಯೂಟ್ಯೂಬ್, ‘ಲೆಜೆಂಡ್ ಒಮ್ಮೆ ಹೀಗೆ’ ಹೇಳಿದ್ದರು ಎಂದು ಬರೆದುಕೊಂಡಿದೆ.
‘ಯುವರತ್ನ’ ಕ್ಕೆ ಸಿಕ್ಕಿತ್ತು ಅದ್ದೂರಿ ಸ್ವಾಗತ
ಪುನೀತ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಅವರ ಕಟೌಟ್ಗೆ ಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡುತ್ತಿದ್ದರು. ‘ಯುವರತ್ನ’ ಸಿನಿಮಾವನ್ನು ಕಿರುತೆರೆ ಪ್ರೇಕ್ಷಕರು ಹೀಗೆಯೇ ಸ್ವಾಗತಿಸಿದ್ದಾರೆ.
‘ಯುವರತ್ನ’ ಸಿನಿಮಾ ಪ್ರಸಾರವಾಗುತ್ತಿದ್ದಂತೆ ಅವರ ಅಭಿಮಾನಿಗಳು ಟಿವಿಗೆ ಹಾರ ಹಾಕಿ ಪೂಜೆ ಮಾಡಿದ್ದಾರೆ. ಈ ಮೂಲಕ ಪುನೀತ್ ಸತ್ತಿಲ್ಲ ಎನ್ನುವ ಭಾವನೆಯನ್ನು ಮನದಲ್ಲಿ ಇಟ್ಟುಕೊಂಡಿದ್ದಾರೆ. ಈ ರೀತಿ ಮಾಡಿರುವುದು ಕೇವಲ ಒಬ್ಬಿಬ್ಬರಲ್ಲ. ಅನೇಕರು ಇದೇ ರೀತಿ ‘ಯುವರತ್ನ’ನನ್ನು ಸ್ವಾಗತಿಸಿದ್ದಾರೆ. ಸದ್ಯ, ವಿಡಿಯೋ ವೈರಲ್ ಆಗುತ್ತಿದೆ. ಇದು ಪುನೀತ್ ಮೇಲಿನ ಅಭಿಮಾನಕ್ಕೆ ಸಾಕ್ಷಿ ಆಗಿದೆ.
ಇದನ್ನೂ ಓದಿ: ಸಂಕ್ರಾಂತಿ ಹಬ್ಬದಲ್ಲಿ ಪುನೀತ್ ರಾಜ್ಕುಮಾರ್ ನೆನಪು; ಫ್ಯಾನ್ಸ್ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ
ಪುನೀತ್ ರಾಜ್ಕುಮಾರ್ ಕುರಿತು ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಲೇಡಿ ಬಾಡಿ ಬಿಲ್ಡರ್ ಮಮತಾ
Published On - 3:53 pm, Tue, 18 January 22