ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ; ಗೊಂದಲದಲ್ಲಿವೆ ಚಿತ್ರಮಂದಿರಗಳು

Vaccination Certificates: ಇತ್ತೀಚೆಗೆ ಕೇಂದ್ರ ಸರ್ಕಾರ ಲಸಿಕೆ ಪ್ರಮಾಣಪತ್ರ ಕಡ್ಡಾಯ ಎಂದು ತಿಳಿಸಿಲ್ಲ ಎಂದು ಸುಪ್ರೀಂಗೆ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರೂಪಿಸಿದ್ದ ಲಸಿಕೆ ಪ್ರಮಾಣಪತ್ರ ಕಡ್ಡಾಯ ಎಂಬ ನಿಯಮ ಗೊಂದಲ ಹುಟ್ಟುಹಾಕಿದೆ.

ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ; ಗೊಂದಲದಲ್ಲಿವೆ ಚಿತ್ರಮಂದಿರಗಳು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Jan 18, 2022 | 2:57 PM

ಕರ್ನಾಟಕದಲ್ಲಿ ಪ್ರಸ್ತುತ ಜನವರಿ 4ರಂದು ಸರ್ಕಾರ ಘೋಷಿಸಿದ್ದ ಕೊರೊನಾ ಮಾರ್ಗಸೂಚಿಗಳು ಮುಂದುವರಿಕೆಯಾಗುತ್ತಿವೆ. ಇದರ ಅನ್ವಯ ಮಾಲ್, ಚಿತ್ರಮಂದಿರಗಳು 50:50 ಪ್ರತಿಶತ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ಇಲ್ಲಿಗೆ ಭೇಟಿ ನೀಡುವವರು ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂದು ಸರ್ಕಾರ ತಿಳಿಸಿದೆ. ಆದರೆ ಸರ್ಕಾರದ ಈ ನಿಯಮ ಸದ್ಯ ಎಲ್ಲರಲ್ಲೂ ಗೊಂದಲ ಹುಟ್ಟುಹಾಕಿದೆ. ಕಾರಣ, ಕೇಂದ್ರ ಸರ್ಕಾರ ಇತ್ತೀಚೆಗೆ ಸುಪ್ರೀಂ ಕೋರ್ಟ್​ನಲ್ಲಿ ಕೊರೊನಾ ಲಸಿಕೆ ಪ್ರಮಾಣಪತ್ರ ಕಡ್ಡಾಯವಲ್ಲ ಎಂದು ಹೇಳಿಕೆ ನೀಡಿತ್ತು. ಸುಪ್ರೀಂನಲ್ಲಿ ಕೇಂದ್ರದ ಈ ಹೇಳಿಕೆ ಜನರನ್ನು ಗೊಂದಲಕ್ಕೆ ತಳ್ಳಿದೆ. ಅಲ್ಲದೇ ಚಿತ್ರ ಪ್ರದರ್ಶಕರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.

ಕೇಂದ್ರದ ಹೇಳಿಕೆಯಿಂದ ಆಗುವ ಸಮಸ್ಯೆಯೇನು? ಕೇಂದ್ರದ ಈ ಹೇಳಿಕೆಯಿಂದ ಜನರಿಗೆ ಹಾಗೂ ಚಿತ್ರ ಪ್ರದರ್ಶಕರಿಗೆ ಗೊಂದಲ ಉಂಟಾಗಿದೆ. ಕಾರಣ, ಜನರು ಪ್ರವೇಶ ಪಡೆಯಲು ಈಗ ಇರುವ ಮಾರ್ಗಸೂಚಿಗಳ ಪ್ರಕಾರ ಲಸಿಕೆ ಪಡೆದ ಪ್ರಮಾಣಪತ್ರ ತೋರಸಬೇಕು. ಆದರೆ ಅದನ್ನು ಕಡ್ಡಾಯಗೊಳಿಸಿಲ್ಲ ಎಂದು ಕೇಂದ್ರ ಸುಪ್ರೀಂನಲ್ಲಿ ತಿಳಿಸಿದೆ. ಇದರಿಂದ ಜನರು ಚಿತ್ರಮಂದಿರದ ಒಳಗೆ ತೆರಳುವಾಗ ಪ್ರಮಾಣಪತ್ರ ತೋರಿಸಲು ಹಿಂದೇಟು ಹಾಕಬಹುದು ಎನ್ನುವುದು ಪ್ರದರ್ಶಕರ ಅಭಿಪ್ರಾಯ.

ಈಗಾಗಲೇ ಲಸಿಕಾ ಪ್ರಮಾಣಪತ್ರದ ನಿಬಂಧನೆಗಳನ್ನು ಪಾಲಿಸುವಾಗ ಕಷ್ಟ ಆಗುತ್ತಿತ್ತು. ಪ್ರಸ್ತುತ, ಕೇಂದ್ರ ಸರ್ಕಾರದ ಈ ಹೇಳಿಕೆಯಿಂದ ಇನ್ನು ಮುಂದೆ ಪ್ರೇಕ್ಷಕರು ಪ್ರಮಾಣ ಪತ್ರ ತೋರಿಸಲು ಹಿಂದೇಟು ಹಾಕಿ ಪ್ರದರ್ಶಕರನ್ನೇ ಪ್ರಶ್ನಿಸಬಹುದು. ಆದ್ದರಿಂದ ಸರ್ಕಾರದ ಈ ಭಿನ್ನ ನಿಲುವಿನ ಬಗ್ಗೆ ಗೊಂದಲವುಂಟಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳ ಸ್ಪಷ್ಟೀಕರಣ ಬೇಕಾಗಿದೆ ಎಂದು ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಹೇಳಿದೆ.

ಇದನ್ನೂ ಓದಿ:

ಚಿತ್ರರಂಗಕ್ಕೆ ಕೊರೊನಾ ಹೊಡೆತ; ಕೇವಲ ಬಾಲಿವುಡ್​ಗೇ ಸಾವಿರಾರು ಕೋಟಿ ನಷ್ಟ: ಇಲ್ಲಿದೆ ಪೂರ್ಣ ಲೆಕ್ಕಾಚಾರ

ಚಿತ್ರಮಂದಿರ, ಮಾಲ್, ಬಾರ್, ಪಬ್​ಗಳಿಗೆ 50:50 ನಿಯಮ ಜಾರಿ; ಕೊರೊನಾ ಮಾರ್ಗಸೂಚಿಯ ವಿವರ ಇಲ್ಲಿದೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ