AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿಗೆ ಮಾಲೆ ಹಾಕಿ, ಆರತಿ ಎತ್ತಿ ‘ಯುವರತ್ನ’ನನ್ನು​ ಸ್ವಾಗತಿಸಿದ ಕಿರುತೆರೆ ವೀಕ್ಷಕರು; ಪುನೀತ್​ ಮೇಲಿನ ಅಭಿಮಾನಕ್ಕೆ ಇಲ್ಲ ಮಿತಿ

ಪುನೀತ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್​ ಆಗುತ್ತಿದೆ ಎಂದರೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು.

ಟಿವಿಗೆ ಮಾಲೆ ಹಾಕಿ, ಆರತಿ ಎತ್ತಿ ‘ಯುವರತ್ನ’ನನ್ನು​ ಸ್ವಾಗತಿಸಿದ ಕಿರುತೆರೆ ವೀಕ್ಷಕರು; ಪುನೀತ್​ ಮೇಲಿನ ಅಭಿಮಾನಕ್ಕೆ ಇಲ್ಲ ಮಿತಿ
ಪುನೀತ್​ ರಾಜ್​ಕುಮಾರ್​ಗೆ ಸ್ವಾಗತ ಕೋರಿದ ಪರಿ
TV9 Web
| Edited By: |

Updated on: Jan 16, 2022 | 6:11 PM

Share

ಪುನೀತ್​ ರಾಜ್​ಕುಮಾರ್​ ನಟನೆಯ ‘ಯುವರತ್ನ’ ಸಿನಿಮಾ ಕಳೆದ ವರ್ಷ ಏಪ್ರಿಲ್​ ತಿಂಗಳಲ್ಲಿ ತೆರೆಕಂಡಿತ್ತು. ಅವರು ಬದುಕಿದ್ದಾಗ ತೆರೆಕಂಡ ಕೊನೆಯ ಚಿತ್ರ ಇದು. ಈಗ ಅವರ ನಟನೆಯ ‘ಜೇಮ್ಸ್​’, ಅತಿಥಿ ಪಾತ್ರ ಮಾಡಿರುವ ‘ಲಕ್ಕಿ ಮ್ಯಾನ್​’ ಸಿನಿಮಾಗಳು ರಿಲೀಸ್​ ಆಗಬೇಕಿವೆ. ಆದರೆ, ಅಭಿಮಾನಿಗಳ ಜತೆ ಕುಳಿತು ಸಿನಿಮಾ ನೋಡೋಕೆ ಅವರಿಲ್ಲ. ಈಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜನವರಿ 15ರಂದು ಉದಯ ಟಿವಿಯಲ್ಲಿ ‘ಯುವರತ್ನ’ ಸಿನಿಮಾ ಪ್ರಸಾರವಾಗಿದೆ. ಈ ಚಿತ್ರವನ್ನು ಅಭಿಮಾನಿಗಳು ಸ್ವಾಗತ ಮಾಡಿಕೊಂಡ ರೀತಿ ಕಣ್ತುಂಬಿ ಬರುವಂತಿತ್ತು. ಈ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿವೆ.

ಪುನೀತ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್​ ಆಗುತ್ತಿದೆ ಎಂದರೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಅವರ ಕಟೌಟ್​ಗೆ ಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡುತ್ತಿದ್ದರು. ‘ಯುವರತ್ನ’ ಸಿನಿಮಾವನ್ನು ಕಿರುತೆರೆ ಪ್ರೇಕ್ಷಕರು ಹೀಗೆಯೇ ಸ್ವಾಗತಿಸಿದ್ದಾರೆ.

‘ಯುವರತ್ನ’ ಸಿನಿಮಾ ಪ್ರಸಾರವಾಗುತ್ತಿದ್ದಂತೆ ಅವರ ಅಭಿಮಾನಿಗಳು ಟಿವಿಗೆ ಹಾರ ಹಾಕಿ ಪೂಜೆ ಮಾಡಿದ್ದಾರೆ. ಈ ಮೂಲಕ ಪುನೀತ್​ ಸತ್ತಿಲ್ಲ ಎನ್ನುವ ಭಾವನೆಯನ್ನು ಮನದಲ್ಲಿ ಇಟ್ಟುಕೊಂಡಿದ್ದಾರೆ. ಈ ರೀತಿ ಮಾಡಿರುವುದು ಕೇವಲ ಒಬ್ಬಿಬ್ಬರಲ್ಲ. ಅನೇಕರು ಇದೇ ರೀತಿ ‘ಯುವರತ್ನ’ನನ್ನು​ ಸ್ವಾಗತಿಸಿದ್ದಾರೆ. ಸದ್ಯ, ವಿಡಿಯೋ ವೈರಲ್​ ಆಗುತ್ತಿದೆ. ಇದು ಪುನೀತ್​ ಮೇಲಿನ ಅಭಿಮಾನಕ್ಕೆ ಸಾಕ್ಷಿ ಆಗಿದೆ.

‘ಯುವರತ್ನ’ ಚಿತ್ರಕ್ಕೆ ಸಂತೋಷ್​ ಆನಂದ್​ರಾಮ್​ ನಿರ್ದೇಶನ ಮಾಡಿದ್ದು, ಸಾಯೆಶಾ ಸೈಗಲ್ ನಾಯಕಿಯಾಗಿ ನಟಿಸಿದ್ದಾರೆ. ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ‘ಯುವರತ್ನ’ ಸಿನಿಮಾ ನಿರ್ಮಾಣ ಆಗಿದೆ. 2021ರ ಏಪ್ರಿಲ್​ 1ರಂದು ಚಿತ್ರಮಂದಿರಗಳಲ್ಲಿ ಈ ಚಿತ್ರ ಬಿಡುಗಡೆ ಆಗಿತ್ತು. ಆ ಸಂದರ್ಭದಲ್ಲಿ ಕೊರೊನಾ 2ನೇ ಅಲೆಯ ಹಾವಳಿ ಇದ್ದಿದ್ದರಿಂದ ಚಿತ್ರಮಂದಿರದಲ್ಲಿ ಶೇ.50 ಆಸನ ಮಿತಿ ನಿಯಮವನ್ನು ಜಾರಿ ಮಾಡಲಾಯಿತು. ಇದರಿಂದ ಚಿತ್ರದ ಕಲೆಕ್ಷನ್​ಗೆ ಹೊಡೆತಬಿದ್ದಿತ್ತು. ಅಲ್ಲದೇ ಬಹುಪಾಲು ಪ್ರೇಕ್ಷಕರಿಗೆ ಈ ಚಿತ್ರವನ್ನು ನೋಡಲು ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: ಪುನೀತ್ ಯುವರತ್ನ, ಶಿವರಾಂ ಭಕ್ತಿರತ್ನ; ತಿಂಗಳಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ: ನಿರ್ದೇಶಕ ಭಗವಾನ್ ಕಂಬನಿ

ಉದಯ ಟಿವಿಯಲ್ಲಿ ಪ್ರಸಾರ ಆಗಲಿದೆ ‘ಯುವರತ್ನ’ ಚಿತ್ರ; ದಿನಾಂಕ, ಸಮಯದ ಬಗ್ಗೆ ಇಲ್ಲಿದೆ ವಿವರ

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ