ತಮಿಳು ಸಿನಿಮಾದಲ್ಲಿ ರಾಗಿಣಿ ದ್ವಿವೇದಿ; ತುಪ್ಪದ ಬೆಡಗಿಯ ಹೊಸ ಚಿತ್ರಕ್ಕೆ ಶೂಟಿಂಗ್ ಶುರು

ರಾಗಿಣಿ ದ್ವಿವೇದಿ ಅವರು ಬಹುದಿನಗಳ ಬಳಿಕ ಒಂದು ಕಾಲಿವುಡ್​ ಸಿನಿಮಾಗೆ ಸಹಿ ಮಾಡಿದ್ದಾರೆ. ‘ಒನ್​ 2 ಒನ್​’ ಎಂಬುದು ಈ ಚಿತ್ರದ ಟೈಟಲ್​.

TV9kannada Web Team

| Edited By: Madan Kumar

Jan 17, 2022 | 1:33 PM

ಚಿತ್ರರಂಗದಲ್ಲಿ ನಟಿ ರಾಗಿಣಿ ದ್ವಿವೇದಿ (Ragini Dwivedi) ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಹಲವು ಬಗೆಯ ಪಾತ್ರಗಳನ್ನು ಮಾಡುವ ಮೂಲಕ ಅವರು ಸೈ ಎನಿಸಿಕೊಂಡಿದ್ದಾರೆ. ಕನ್ನಡದ ‘ಕೆಂಪೇಗೌಡ’, ‘ವೀರ ಮದಕರಿ’ ಸಿನಿಮಾಗಳು (Ragini Dwivedi Movies) ರಾಗಿಣಿಗೆ ಸಖತ್​ ಖ್ಯಾತಿ ತಂದುಕೊಟ್ಟವು. ಪರಭಾಷೆಯ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಬೇರೆ ಬೇರೆ ರೀತಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಬಹುದಿನಗಳ ಬಳಿಕ ಅವರು ಒಂದು ಕಾಲಿವುಡ್​ ಸಿನಿಮಾಗೆ ಸಹಿ ಮಾಡಿದ್ದಾರೆ. ‘ಒನ್​ 2 ಒನ್​’ (One 2 One Movie) ಎಂಬುದು ಈ ಚಿತ್ರದ ಟೈಟಲ್​. ಸಂಕ್ರಾಂತಿ ಹಬ್ಬದ ಪ್ರಯುಕ್ತ ಮುಹೂರ್ತ ನೆರವೇರಿಸಲಾಯಿತು. ಈಗ ಶೂಟಿಂಗ್​ ಕೂಡ ಆರಂಭ ಆಗಿದೆ. ಫ್ಯಾಮಿಲಿ ಡ್ರಾಮಾ ಜೊತೆ ಸಸ್ಪೆನ್ಸ್ ಕಥೆ ಈ ಸಿನಿಮಾದಲ್ಲಿ ಇರಲಿದೆ. ಹೋಮ್ಲಿ ಲುಕ್​ನಲ್ಲಿ ರಾಗಿಣಿ ದ್ವಿವೇದಿ ಕಾಣಿಸಿಕೊಳ್ಳಲಿದ್ದಾರೆ. ತಿರುಜ್ಞಾನಮ್​ ನಿರ್ದೇಶನ ಮಾಡುತ್ತಿರುವ ‘ಒನ್​ 2 ಒನ್​’ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ರಾಗಿಣಿ ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ:

‘ರಾಣ’ ಚಿತ್ರದಲ್ಲಿ ರಾಗಿಣಿ ಸಖತ್​ ಡ್ಯಾನ್ಸ್​; ಕಮಾಲ್​ ಮಾಡಲು ಸಜ್ಜಾದ ‘ತುಪ್ಪದ ಬೆಡಗಿ’

ನಟಿ ರಾಗಿಣಿ ಲಾಕ್‌ಡೌನ್ ಹಿನ್ನೆಲೆ ಬಡವರಿಗೆ ಊಟ ವಿತರಣೆ

Follow us on

Click on your DTH Provider to Add TV9 Kannada