ಯೋಗದ ಬಗ್ಗೆ ಜಾಗೃತಿ ಮೂಡಿಸಲು ಮೈಸೂರಿನ ಯೋಗ ಶಿಕ್ಷಕ 2,030 ಕಿಮೀ ದೂರದ ಕಾಶಿವರೆಗೆ ಪಾದಯಾತ್ರೆ ಮಾಡಿದರು!
ಕೃಷ್ಣ ಅವರ ದ್ಯೇಯ ಮತ್ತು ಸಂಕಲ್ಪದಿಂದ ಪ್ರಭಾವಿತರಾದ ಅನೇಕರು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಅವರು ಹೇಳಿದ ಆಧ್ಯಾತ್ಮಿಕ ವಿಷಯಗಳನ್ನು ಕೇಳಿಸಿಕೊಂಡಿದ್ದಾರೆ. ಹಲವಾರು ಕಡೆ ಜನ ಸ್ವಯಂಪ್ರೇರಿತರಾಗಿ ಅವರೊಂದಿಗೆ ಕಿಮೀಗಟ್ಟಲೆ ಹೆಜ್ಜೆ ಹಾಕಿದ್ದಾರೆ.
ಕೋವಿಡ್-19 ಪ್ರಕರಣಗಳು ಒಂದೇ ಸಮ ಏರುತ್ತಿದ್ದರೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕಾಗಿ ನಡೆಸಿದ ಪಾದಯಾತ್ರೆ ರಾಜ್ಯ ಉಚ್ಛ ನ್ಯಾಯಾಲಯ ಛೀಮಾರಿ ಹಾಕಿದ ನಂತರ 4ನೇ ದಿನಕ್ಕೆ ರಾಮನಗರಗದಲ್ಲಿ ಮೊಟಕುಗೊಂಡಿತು. ಆದರೆ, ನಿಮಗೆ ವಿಡಿಯೋನಲ್ಲಿ ಕಾಣುತ್ತಿದಾರಲ್ಲ ಯೋಗ ಶಿಕ್ಷಕ (Yoga teacher) ಕೃಷ್ಣ ನಾಯಕ್ (Krishna Naik)-ಇವರ ಪಾದಯಾತ್ರೆ 2 ತಿಂಗಳ ಕಾಲ ಅವಿರತವಾಗಿ ನಡೆಯಿತು. ಈ ಅವಧಿಯಲ್ಲಿ ಕೃಷ್ಣ ನಾಯಕ್ ಅವರು ಮೈಸೂರಿನಿಂದ ಕಾಶಿವರೆಗಿನ ಅಂತರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದರು. ನವೆಂಬರ್ 15, 2021ರಂದು ಅವರು ಮೈಸೂರಿನ (Mysuru) ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಿಸಿ ಅಲ್ಲಿಂದ 2,030 ಕಿಮೀ ದೂರದಲ್ಲಿರುವ ಕಾಶಿಯನ್ನು (Kashi) ಸರಿಯಾಗಿ ಎರಡು ತಿಂಗಳ ನಂತರ ತಲುಪಿದರು.
ಕೃಷ್ಣ ನಾಯಕ್ ಪಾದಯಾತ್ರೆಯ ಉದ್ದೇಶ ಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿತ್ತು. ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದ ನಿವಾಸಿಯಾಗಿರುವ 28 ರ ಪ್ರಾಯದ ಕೃಷ್ಣ ವೃತ್ತಿಯಲ್ಲಿ ಯೋಗ ಶಿಕ್ಷಕರಾಗಿದ್ದಾರೆ. ಪಾದಯಾತ್ರೆ ನಡೆಸುವಾಗ ಅವರು ಅನೇಕ ಕಡೆಗಳಲ್ಲಿ ಆಧ್ಯಾತ್ಮಿಕ ಮತ್ತು ಯೋಗ ಶಿಬಿರಗಳನ್ನು ನಡೆಸಿ ವಿದ್ಯಾರ್ಥಿ ಮತ್ತು ಸಾರ್ವಜನಿಕರಿಗೆ ಯೋಗದ ಮಹತ್ವವನ್ನು ವಿವರಿಸುತ್ತಾ ಯೋಗಾಸನಗಳನ್ನು ಹೇಳಿಕೊಟ್ಟಿದ್ದಾರೆ.
ಇವರ ದ್ಯೇಯ ಮತ್ತು ಸಂಕಲ್ಪದಿಂದ ಪ್ರಭಾವಿತರಾದ ಅನೇಕರು ಶಿಬಿರಗಳಲ್ಲಿ ಭಾಗವಹಿಸಿದ್ದಾರೆ. ಕೃಷ್ಣ ಅವರು ಹೇಳಿದ ಆಧ್ಯಾತ್ಮಿಕ ವಿಷಯಗಳನ್ನು ಕೇಳಿಸಿಕೊಂಡಿದ್ದಾರೆ. ಹಲವಾರು ಕಡೆ ಜನ ಸ್ವಯಂಪ್ರೇರಿತರಾಗಿ ಅವರೊಂದಿಗೆ ಕಿಮೀಗಟ್ಟಲೆ ಹೆಜ್ಜೆ ಹಾಕಿದ್ದಾರೆ.
ಕನ್ನಡ ನಾಡಿನ ಯೋಗ ಶಿಕ್ಷಕ ಕ್ರಮಿಸಿದ ದಾರಿಯಲ್ಲೆಲ್ಲ ಕನ್ನಡದ ಕಂಪನ್ನು ಪಸರಿಸಿದ್ದಾರೆ ಅಂತ ಬೇರೆ ಹೇಳಬೇಕಿಲ್ಲ.
ಇದನ್ನೂ ಓದಿ: ಸರಕು ಸಾಗಣೆ ರೈಲಿನಿಂದಲೇ ವಸ್ತುಗಳನ್ನು ಲೂಟಿ ಮಾಡುವ ಕಳ್ಳರು; ಕಸದ ತೊಟ್ಟಿಯಾದ ರೈಲ್ವೆ ನಿಲ್ದಾಣ! ವಿಡಿಯೋ ಇಲ್ಲಿದೆ