ಸರಕು ಸಾಗಣೆ ರೈಲಿನಿಂದಲೇ ವಸ್ತುಗಳನ್ನು ಲೂಟಿ ಮಾಡುವ ಕಳ್ಳರು; ಕಸದ ತೊಟ್ಟಿಯಾದ ರೈಲ್ವೆ ನಿಲ್ದಾಣ! ವಿಡಿಯೋ ಇಲ್ಲಿದೆ

Los Angeles: ಲಾಸ್ ಏಂಜಲೀಸ್​ನಲ್ಲಿ ಕಳ್ಳರ ಹಾವಳಿ ಜೋರಾಗಿದೆ. ಸರಕು ಸಾಗಣೆ ರೈಲು ನಿಲ್ದಾಣದಲ್ಲಿ ನಿಂತಾಗ ಅವುಗಳಿಂದ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ. ಉತ್ಪನ್ನಗಳ ಕವರ್​ಗಳನ್ನು ರೈಲ್ವೆ ಟ್ರಾಕ್​ನಲ್ಲಿ ಬಿಸಾಡಿ ಹೋಗುತ್ತಿರುವ ಕಾರಣ, ನಿಲ್ದಾಣ ಕಸದ ತೊಟ್ಟಿಯಂತಾಗಿದೆ.

ಸರಕು ಸಾಗಣೆ ರೈಲಿನಿಂದಲೇ ವಸ್ತುಗಳನ್ನು ಲೂಟಿ ಮಾಡುವ ಕಳ್ಳರು; ಕಸದ ತೊಟ್ಟಿಯಾದ ರೈಲ್ವೆ ನಿಲ್ದಾಣ! ವಿಡಿಯೋ ಇಲ್ಲಿದೆ
ರೈಲ್ವೆ ನಿಲ್ದಾಣದಲ್ಲಿ ಕಳ್ಳರು ಬಿಸಾಡಿದ ಕವರ್​ಗಳು
Follow us
TV9 Web
| Updated By: shivaprasad.hs

Updated on: Jan 15, 2022 | 4:30 PM

ಲಾಸ್​​ಏಂಜಲೀಸ್​ನಲ್ಲಿ (Los Angeles) ಕಳ್ಳರ ಕೈ ಚಳಕ ಜೋರಾಗಿದೆ. ಅರ್ಥಾತ್ ಅಮೆಜಾನ್, ಫೆಡ್​ಎಕ್ಸ್, ಟಾರ್ಗೆಟ್ ಮೊದಲಾದ ತಾಣಗಳಿಂದ ಖರೀದಿಸಿದ ವಸ್ತುಗಳು ಗ್ರಾಹಕರನ್ನು ತಲುಪುವ ಮುನ್ನವೇ ಕಳ್ಳರ ಪಾಲಾಗುತ್ತಿವೆ. ಸರಕನ್ನು ಸಾಗಿಸುವ ರೈಲು ನಿಲ್ದಾಣಗಳಲ್ಲಿ (Train Station) ನಿಂತಿರುವಾಗ ಕಳ್ಳತನ ನಡೆಸಲಾಗುತ್ತದೆ. ಈ ಕುರಿತು ಎಎಫ್​ಪಿ ವರದಿ ಮಾಡಿದ್ದು, ರೈಲ್ವೆ ನಿಲ್ದಾಣಕ್ಕೆ ಸಮೀಪ ಹಲವು ದಾರಿಗಳಿವೆ. ಅವುಗಳಿಂದ ಅತ್ಯಂತ ಸುಲಭವಾಗಿ ಸರಕು ಸಾಗಣೆ ರೈಲನ್ನು ತಲುಪಬಹುದಿತ್ತು. ಇದರ ಲಾಭ ಪಡೆದಿರುವ ಕಳ್ಳರು ಅಮೆಜಾನ್ (Amazon), ಟಾರ್ಗೆಟ್, ಯುಪಿಎಸ್ ಮತ್ತು ಫೆಡ್​​ಎಕ್ಸ್​ಗಳ (FedEx) ವಸ್ತುಗಳನ್ನು ಗ್ರಾಹಕರಿಗೆ ತಲುಪುವ ಮುನ್ನವೇ ಕದ್ದಿದ್ದಾರೆ. ಇತ್ತೀಚೆಗೆ ಈ ಮಾದರಿಯ ಕಳ್ಳತನ ಜೋರಾಗಿದ್ದು, ರೈಲ್ವೆ ಟ್ರಾಕ್ ಬಳಿ ಸರಕುಗಳ ಹೊರಗಿನ ಕವರ್​ಗಳು ಬಿದ್ದಿರುವ ಚಿತ್ರಗಳು ವೈರಲ್ ಆಗಿವೆ.

ಕಳ್ಳತನ ಹೇಗೆ ನಡೆಯುತ್ತದೆ? ಉದ್ದದ ಸರಕು ರೈಲುಗಳು ನಿಲ್ಲುವವರೆಗೆ ಕಳ್ಳರು ಕಾಯುತ್ತಾರೆ. ನಂತರ ಸರಕುಗಳ ಕಂಟೇನರ್‌ಗಳ ಮೇಲೆ ಏರಿ, ಅವುಗಳ ಬೀಗಗಳನ್ನು ಕಟರ್​​ಗಳಿಂದ ಒಡೆಯುತ್ತಾರೆ.  ಕೊಂಡೊಯ್ಯಲು ಅಥವಾ ಮರು-ಮಾರಾಟ ಮಾಡಲು ಕಷ್ಟಕರವಾದ ಕೋವಿಡ್ 19 ಪರೀಕ್ಷಾ ಕಿಟ್‌ಗಳು, ಪೀಠೋಪಕರಣಗಳು ಅಥವಾ ಔಷಧಿಗಳಂತಹ ತುಂಬಾ ಅಗ್ಗವಾಗಿರುವ ಯಾವುದೇ ಉತ್ಪನ್ನಗಳನ್ನು ಕಳ್ಳರು ಹೊರಹಾಕುತ್ತಾರೆ. ಅಲ್ಲದೇ ವಸ್ತುಗಳ ಕವರ್​ಗಳನ್ನೂ ಅಲ್ಲೇ ಬಿಸುಟು ತೆರಳುತ್ತಾರೆ. ಇದರಿಂದ ರೈಲ್ವೆ ಹಳಿ ಹಾಗೂ ನಿಲ್ದಾಣದ ಪ್ರದೇಶ ದೊಡ್ಡ ಕಸದ ತೊಟ್ಟಿಯಂತೆ ಕಾಣುತ್ತದೆ.

ಕಳ್ಳತನ ನಡೆದ ನಂತರ ಸ್ಥಳ ಹೇಗಾಗಿದೆ ಎಂಬುದರ ಕುರಿತು ಎಎಫ್​ಪಿ ಹಾಗೂ ಪತ್ರಕರ್ತರೊಬ್ಬರು ಹಂಚಿಕೊಂಡಿರುವ ಚಿತ್ರಗಳು ಹಾಗೂ ವಿಡಿಯೋಗಳು ಇಲ್ಲಿವೆ:

ಕಳ್ಳತನ ಪ್ರಮಾಣದಲ್ಲಿ ಭಾರಿ ಏರಿಕೆ: ರೈಲ್ ಆಪರೇಟರ್ ಯೂನಿಯನ್​ ಪೆಸಿಫಿಕ್ ಕಳೆದ ಡಿಸೆಂಬರ್ 2020 ರಿಂದ ಲಾಸ್ ಏಂಜಲೀಸ್ ಕೌಂಟಿಯಲ್ಲಿ ಶೇ.160ರಷ್ಟು ಕಳ್ಳತನ ಏರಿಕೆಯಾಗಿದ್ದಕ್ಕೆ ಸಾಕ್ಷಿಯಾಗಿದೆ. ಅದರಲ್ಲೂ ‘ಅಕ್ಟೋಬರ್ 2021 ರಲ್ಲಿ- ಅಕ್ಟೋಬರ್ 2020 ಕ್ಕೆ ಹೋಲಿಸಿದರೆ ಶೇಕಡಾ 356 ಹೆಚ್ಚಳವಾಗಿದೆ’ ಎಂದು ಯೂನಿಯನ್ ಸ್ಥಳೀಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಇರುವುದನ್ನು ಎಎಫ್‌ಪಿ ಉಲ್ಲೇಖಿಸಿದೆ.

ಕಳ್ಳತನದ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಬಳಸಿದ್ದು ಹಾಗೂ ನೌಕರರ ಮೇಲಿನ ಹಲ್ಲೆ ಪ್ರಕರಣಗಳೂ ವರದಿಯಾಗಿವೆ. ಕ್ರಿಸ್​ಮಸ್ ಸಂದರ್ಭದಲ್ಲಿ ಶಾಪಿಂಗ್ ಜೋರಾಗಿ ನಡೆಯುತ್ತದೆ. ಇದೇ ವೇಳೆ ಕಳ್ಳತನ ಪ್ರಮಾಣದಲ್ಲೂ ಏರಿಕೆಯಾಗಿದೆ. ವರದಿಗಳ ಪ್ರಕಾರ 2021 ರ ಕೊನೆಯ ತ್ರೈಮಾಸಿಕದಲ್ಲಿ ಲಾಸ್ ಏಂಜಲೀಸ್ ಕೌಂಟಿಯಲ್ಲಿ ಪ್ರತಿದಿನ ಸರಾಸರಿ 90 ಕ್ಕೂ ಹೆಚ್ಚು ಕಂಟೇನರ್‌ಗಳನ್ನು ಧ್ವಂಸಗೊಳಿಸಿ ಕಳ್ಳತನ ನಡೆಸಲಾಗಿದೆ.

Thieves Raid Amazon, FedEx Train Cargo

ರೈಲ್ವೆ ನಿಲ್ದಾಣದಲ್ಲಿ ಕಳ್ಳರು ಬಿಸಾಡಿದ ಕವರ್​ಗಳು

ಕಳ್ಳತನ ಎದುರಿಸಲು ಭದ್ರತೆ ಹೆಚ್ಚಳ: ಕಳ್ಳತನ ಹಾಗೂ ಲೂಟಿಯನ್ನು ಎದುರಿಸಲು ಡ್ರೋನ್‌ಗಳು ಮತ್ತು ಇತರ ಪತ್ತೆ ವ್ಯವಸ್ಥೆಗಳನ್ನು ಒಳಗೊಂಡಂತೆ ಕಣ್ಗಾವಲು ಕ್ರಮಗಳನ್ನು ಬಲಪಡಿಸಲಾಗಿದೆ. ಹಾಗೆಯೇ ರೈಲ್ವೆ ಹಳಿಗಳು ಮತ್ತು ಬೆಂಗಾವಲುಗಳಿಗಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ ಎಂದು ಯೂನಿಯನ್ ಪೆಸಿಫಿಕ್ ಹೇಳಿದೆ. ಇಲ್ಲಿಯವರೆಗೆ ಲೂಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ 2021ರ ಕೊನೆಯ ಮೂರು ತಿಂಗಳಲ್ಲಿ ಸುಮಾರು 100ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ.

ಆದರೆ ಬಂಧಿಸಲಾದ ಕಳ್ಳರು 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಮತ್ತೆ ಮೊದಲಿನಂತೆ ತಿರುಗಾಡುತ್ತಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಕಾರಣ ಬಂಧಿತರ ವಿರುದ್ಧ ದುಷ್ಕೃತ್ಯ ಅಥವಾ ಸಣ್ಣ ಅಪರಾಧದ ಆರೋಪಗಳನ್ನು ಹೊರಿಸಲಾಗುತ್ತದೆ. ಅದರ ಅನ್ವಯ ಕಡಿಮೆ ಮೊತ್ತದ ದಂಡ ವಿಧಿಸಲಾಗುತ್ತದೆ. ಅದನ್ನು ಕಟ್ಟಿದ ವ್ಯಕ್ತಿ ದಿನದ ಅವಧಿಯೊಳಗೆ ಬಿಡುಗಡೆ ಹೊಂದುತ್ತಾನೆ. ಇದರಿಂದ ತಪ್ಪಿತಸ್ಥರಿಗೆ ಭಾರಿ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Thieves Raid Amazon, FedEx Train Cargo (3)

ಕಸ ತುಂಬಿರುವ ರೈಲ್ವೆ ನಿಲ್ದಾಣದ ಪಕ್ಷಿ ನೋಟ (Credits: AFP- Patrick T Fallon/ Twitter)

ಈ ಕುರಿತು ಯೂನಿಯನ್ ಪೆಸಿಫಿಕ್ ಡಿಸೆಂಬರ್ ಅಂತ್ಯದಲ್ಲಿ ಲಾಸ್ ಏಂಜಲೀಸ್ ಕೌಂಟಿಯ ಅಟಾರ್ನಿ ಕಚೇರಿಗೆ ಪತ್ರ ಬರೆದಿದ್ದು, ಅಂತಹ ಅಪರಾಧಗಳಿಗಾಗಿ 2020 ರ ಕೊನೆಯಲ್ಲಿ ಪರಿಚಯಿಸಲಾದ ವಿನಯ ನೀತಿಯನ್ನು ಮರುಪರಿಶೀಲಿಸುವಂತೆ ಕೇಳಿಕೊಂಡಿದೆ. 2021 ರಲ್ಲಿ ಇಂತಹ ಕಳ್ಳತನಗಳಿಂದ ಸುಮಾರು 5 ಮಿಲಿಯನ್ ಡಾಲರ್​​ನಷ್ಟು ನಷ್ಟವಾಗಿದೆ ಎಂದು ನಿರ್ವಾಹಕರು ಅಂದಾಜಿಸಿದ್ದಾರೆ. ಅಲ್ಲದೇ ಈ ನಷ್ಟದಲ್ಲಿ ಫೆಸಿಫಿಕ್ ಯೂನಿಯನ್​ನ ನಷ್ಟ ಹಾಗೂ ಸಿಬ್ಬಂದಿಗಳಿಗೆ ಆದ ನಷ್ಟವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:

4ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮತ್ತೆ ಶಕ್ತಿ ಕೊಟ್ಟ ಕೊವಿಡ್​ 19 ಲಸಿಕೆ; ವ್ಯಾಕ್ಸಿನ್​ ಪಡೆದ ಮರುದಿನವೇ ಮಾತೂ ಬಂತು !

ಭೂಮಿಯ ಮೇಲೆ ನಡೆದಾಡುತ್ತಿರುವ ಜಗತ್ತಿನ ಹಿರಿಯಣ್ಣ ಈ ಜೋನಾಥನ್! 190 ವರ್ಷದ ಅವನ ಕುತೂಹಲಕಾರಿ ಪರಿಚಯ ಇಲ್ಲಿದೆ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ