ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್​ನಲ್ಲಿ ಯಾತ್ರೆ ಹೋಗುತ್ತಿದ್ದ ಯುವಕರಿಂದ ಈ ಬಾರಿ ಪುನೀತ್ ಸಮಾಧಿಗೆ ಯಾತ್ರೆ

Hospet: ನಟ ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ದೇಶದ ವಿವಿದೆಡೆಯಿಂದ ಅಭಿಮಾನಿಗಳು ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದಾರೆ. ಇದೀಗ ಹೊಸಪೇಟೆಯ 13 ಯುವಕರು ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.

TV9kannada Web Team

| Edited By: shivaprasad.hs

Jan 17, 2022 | 7:13 PM

ಹೊಸಪೇಟೆ: ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಸೈಕಲ್ ಮೂಲಕ ಯಾತ್ರೆ ತೆರಳುತ್ತಿದ್ದವರು ಈ ಬಾರಿ ಅಪ್ಪು ಸಮಾಧಿಗೆ ಭೇಟಿ ನೀಡಿ ದರ್ಶನ ಪಡೆಯುವ ನಿರ್ಧಾರ ಕೈಗೊಂಡಿದ್ದಾರೆ. ಹೌದು. ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಹೊಸಪೇಟೆಯ (Hospet) ಅಭಿಮಾನಿಗಳು ಅಪ್ಪು ಸಮಾಧಿಗೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಪ್ರತಿ ಬಾರಿ ಶ್ರೀಶೈಲ, ಧರ್ಮಸ್ಥಳಕ್ಕೆ ಯಾತ್ರೆ ತೆರಳುತ್ತಿದ್ದವರು ಈ ಬಾರಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಯಾತ್ರೆ ಕೈಗೊಂಡಿದ್ದಾರೆ. ಹೊಸಪೇಟೆಯ 13 ಯುವಕರು ‘ಪುನೀತ್​ ರಾಜ್​ಕುಮಾರ್ ಸರ್ಕಲ್’​ನಿಂದ ಪ್ರಯಾಣ ಆರಂಭಿಸಿದ್ದಾರೆ. ಪುನೀತ್ ಮೇಲಿನ ಅಭಿಮಾನ ಹಾಗೂ ಪ್ರೇಮಕ್ಕೆ ಅವರು ಯಾತ್ರೆ ಕೈಗೊಂಡಿದ್ದಾರೆ. ಸ್ಥಳೀಯರು ಯುವಕರ ಪ್ರಯಾಣಕ್ಕೆ ಆಗಮಿಸಿ ಶುಭಕೋರಿದ್ದಾರೆ.

ಇದನ್ನೂ ಓದಿ:

ಟಿವಿಗೆ ಮಾಲೆ ಹಾಕಿ, ಆರತಿ ಎತ್ತಿ ‘ಯುವರತ್ನ’ನನ್ನು​ ಸ್ವಾಗತಿಸಿದ ಕಿರುತೆರೆ ವೀಕ್ಷಕರು; ಪುನೀತ್​ ಮೇಲಿನ ಅಭಿಮಾನಕ್ಕೆ ಇಲ್ಲ ಮಿತಿ

ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ

Follow us on

Click on your DTH Provider to Add TV9 Kannada