ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ

ಕಪಿಲ್ ಶರ್ಮಾ ಪ್ರಪೋಸ್ ಮಾಡಿದ್ದು ಹೇಗೆ? ಗಿನ್ನಿ ಒಪ್ಪಿಕೊಂಡಿದ್ದು ಏಕೆ? ಇಲ್ಲಿದೆ ಮಜವಾದ ಕತೆ
ಕಪಿಲ್ ಶರ್ಮಾ ಮತ್ತು ಗಿನ್ನಿ ಚತ್ರತ್

Kapil Sharma | Ginni Chatrath: ನಿರೂಪಕ ಕಪಿಲ್ ಶರ್ಮಾ ತಮ್ಮ ಪತ್ನಿ ಗಿನ್ನಿ ಚತ್ರತ್​ಗೆ ಹೇಗೆ ಪ್ರಪೋಸ್ ಮಾಡಿದ್ದೆ ಎನ್ನುವುದನ್ನು ವಿವರಿಸಿದ್ದಾರೆ. ಪ್ರತಿಯಾಗಿ ಗಿನ್ನಿ ಏಕೆ ‘ಸ್ಕೂಟರ್ ಓಡಿಸುವ ಬಡ ಹುಡುಗ ಕಪಿಲ್​’ರನ್ನು ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Jan 17, 2022 | 5:41 PM

ಹಿಂದಿ ಕಿರುತೆರೆ ನಿರೂಪಕ ಕಪಿಲ್ ಶರ್ಮಾ ತಮ್ಮ ಕಾಮಿಡಿ ಟೈಮಿಂಗ್​ನಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಅವರ ಕಪಿಲ್ ಶರ್ಮಾ ಶೋಗೆ ಅಪಾರ ಅಭಿಮಾನಿ ಬಳಗವಿದೆ. ಇಷ್ಟೆಲ್ಲಾ ಖ್ಯಾತಿ, ಸಾರ್ವಜನಿಕ ಜೀವನದಲ್ಲಿದ್ದರೂ ಕೂಡ ಕಪಿಲ್ ಇದುವರೆಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಎಂದೂ ಬಹಿರಂಗವಾಗಿ ಹೇಳಿಕೊಂಡವರಲ್ಲ. ಆದ್ದರಿಂದಲೇ ಅಭಿಮಾನಿಗಳಿಗೆ ಕಪಿಲ್ ಪತ್ನಿ ಗಿನ್ನಿ ಚತ್ರತ್ ಹಾಗೂ ಅವರ ಮಕ್ಕಳ ಪರಿಚಯವಷ್ಟೇ ಇದೆ. ಆದರೆ ಗಿನ್ನಿ ಹಾಗೂ ಕಪಿಲ್ ಪ್ರೇಮದ ಬಗ್ಗೆ ತಿಳಿದಿಲ್ಲ. ಇತ್ತೀಚೆಗೆ ಕಪಿಲ್ ತಮ್ಮ ವೈಯಕ್ತಿಕ ಜೀವನದ ಕುರಿತು ಮಾತನಾಡಿದ್ದು, ಹಲವು ಗುಟ್ಟುಗಳನ್ನು ಬಿಟ್ಟುಕೊಟ್ಟಿದ್ದಾರೆ. ಗಿನ್ನಿ ಚತ್ರತ್ ವೃತ್ತಿಯಲ್ಲಿ ನಟಿ. ಈ ಮೊದಲು ಕಪಿಲ್ ಹಾಗೂ ಗಿನ್ನಿ ಜತೆಯಾಗಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೇ ರಂಗಭೂಮಿಯಲ್ಲೂ ಈ ಜೋಡಿ ಒಟ್ಟಾಗಿ ಕೆಲಸ ಮಾಡಿದ್ದರು. ಇದೀಗ ಹೊಸ ವಿಡಿಯೋವೊಂದರಲ್ಲಿ ಕಪಿಲ್ ಶರ್ಮಾ, ಗಿನ್ನಿಗೆ ಪ್ರಪೋಸ್ ಮಾಡುವ ಮೊದಲು ಹೇಗೆ ಧೈರ್ಯ ತಂದುಕೊಂಡೆ ಎನ್ನುವುದನ್ನು ಮಜವಾಗಿ ವಿವರಿಸಿದ್ದಾರೆ.

ನೆಟ್​ಫ್ಲಿಕ್ಸ್ ವಿಶೇಷ ಶೋನಲ್ಲಿ ಕಪಿಲ್ ಶರ್ಮಾ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ‘ಕಪಿಲ್ ಶರ್ಮಾ: ಐ ಆಮ್ ನಾಟ್ ಡನ್ ಯೆಟ್’ ಎಂದು ಹೆಸರಿಡಲಾಗಿದೆ. ಅದರ ಪ್ರೋಮೋವನ್ನು ನೆಟ್​ಫ್ಲಿಕ್ಸ್ ಬಿಡುಗಡೆ ಮಾಡಿದೆ. ಅದರಲ್ಲಿ ಕಪಿಲ್ ಹಾಗೂ ಗಿನ್ನಿ ನಡುವಿನ ರಿಲೇಶನ್​ಶಿಪ್ ಕುರಿತು ಮಜವಾದ ಸಂಗತಿಗಳು ಹೊರಬಿದ್ದಿವೆ.

ಗಿನ್ನಿ ಚತ್ರತ್​ಗೆ ಪ್ರಪೋಸ್ ಮಾಡುವಾಗ ಕಪಿಲ್ ಶರ್ಮಾ ಕುಡಿದಿದ್ದರಂತೆ. ‘‘ಒಂದು ದಿನ ಗಿನ್ನಿ ನನಗೆ ಫೋನ್ ಮಾಡುವಾಗ ನಾನು ಆಫೀಸರ್ಸ್ ಚಾಯ್ಸ್ (ಒಂದು ವಿಸ್ಕಿ ಬ್ರಾಂಡ್) ಕುಡಿದು, ಏನೇನೋ ಯೋಚನೆಗಳಲ್ಲಿ ತೇಲಾಡುತ್ತಿದ್ದೆ. ಫೋನ್ ಎತ್ತಿದ ತಕ್ಷಣವೇ ‘ನೀನು ನನ್ನನ್ನು ಪ್ರೀತಿಸುತ್ತೀಯಾ?’ ಎಂದು ಕೇಳಿದೆ. ಅವಳಿಗೆ ಶಾಕ್ ಆಗಿ, ‘‘ನಿನಗೆ ಇಷ್ಟೆಲ್ಲಾ ಧೈರ್ಯ ಹೇಗೆ ಬಂತು?’’ ಎಂದು ಪ್ರಶ್ನಿಸಿದ್ದಳು’’ ಎಂದು ನೆನಪಿಸಿಕೊಂಡಿದ್ದಾರೆ ಕಪಿಲ್ ಶರ್ಮಾ.

ಇಷ್ಟೇ ಅಲ್ಲ, ಅಲ್ಲೂ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಒಂದು ವೇಳೆ ಟಾಡಿಯನ್ನು ನಾನು ಆ ದಿನ ಕುಡಿದಿದ್ದರೆ, ‘‘ಗಿನ್ನಿ, ನಿಮ್ಮಪ್ಪನ ಕಾರಿಗೆ ಟ್ರೈವರ್ ಬೇಕೆ?’’ ಎಂದು ಕೇಳುತ್ತಿದ್ದೆ ಎಂದು ತಮಾಷೆ ಮಾಡಿದ್ದಾರೆ.

ಕಪಿಲ್​ಗೆ ಮಸ್ತ್ ಕೌಂಟರ್​ ಕೊಟ್ಟ ಗಿನ್ನಿ ಚತ್ರತ್: ಶೋನಲ್ಲಿ ಕಪಿಲ್ ಶರ್ಮಾ ಪತ್ನಿಗೆ ತಮ್ಮ ಪ್ರೀತಿ ಒಪ್ಪಿದ್ದರ ಕುರಿತು ಒಂದು ಪ್ರಶ್ನೆ ಮುಂದಿಟ್ಟಿದ್ದಾರೆ. ‘‘ಅಷ್ಟೆಲ್ಲಾ ದುಡ್ಡಿದ್ದರೂ ಕೂಡ ಒಬ್ಬ ಸ್ಕೂಟರ್ ಓಡಿಸುವ ಹುಡುಗನೊಂದಿಗೆ ನೀನು ಪ್ರೀತಿಯಲ್ಲಿ ಬಿದ್ದಿದ್ದೇಕೆ?’’ ಎಂದು ಕಪಿಲ್ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಿನ್ನಿ, ‘‘ಹೌದು, ಎಲ್ಲರಿಗೂ ಶ್ರೀಮಂತ ಹುಡುಗ ಇಷ್ಟ. ನಾನು ಒಬ್ಬ ಬಡ ಹುಡುಗನಿಗೆ ಸ್ವಲ್ಪ ದಾನ ಮಾಡೋಣ ಎಂದು ನಿನ್ನನ್ನು ಒಪ್ಪಿಕೊಂಡೆ’’ ಎಂದು ತಮಾಷೆ ಮಾಡಿದ್ದಾರೆ. ಇದು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.

View this post on Instagram

A post shared by Netflix India (@netflix_in)

ಕಪಿಲ್ ಶರ್ಮಾ ಅವರ ಈ ಹೊಸ ಶೋ ನೆಟ್​ಫ್ಲಿಕ್ಸ್​​ನಲ್ಲಿ ಜನವರಿ 28ರಿಂದ ಬಿತ್ತರವಾಗಲಿದೆ. ಇತ್ತೀಚೆಗಷ್ಟೇ ಕಪಿಲ್ ಅವರ ಜೀವನ ಆಧರಿಸಿ ಸಿನಿಮಾವೊಂದು ಘೋಷಣೆಯಾಗಿತ್ತು. ಅದಕ್ಕೆ ‘ಫನ್​ಕಾರ್’ ಎಂದು ಹೆಸರಿಡಲಾಗಿದ್ದು, ಮೃಗ್​ದೀಪ್ ಸಿಂಗ್ ಲಂಬಾ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ:

ರಾಗಿಣಿ ದ್ವಿವೇದಿ ಹೊಸ ಚಿತ್ರ ‘ಒನ್​ 2 ಒನ್​’

ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹಬ್ಬಿದೆ ಸುಳ್ಳು ಸುದ್ದಿ; ಐಸಿಯುನಲ್ಲಿರುವ ಅವರ ಸ್ಥಿತಿ ನಿಜಕ್ಕೂ ಹೇಗಿದೆ?

Follow us on

Related Stories

Most Read Stories

Click on your DTH Provider to Add TV9 Kannada