ರ‍್ಯಾಗಿಂಗ್‌ ಮಾಡುತ್ತಿದ್ದ ಹುಡುಗರಿಗೆ ಬೆಂಡೆತ್ತಿದ ಪ್ರಿಯಾಂಕಾ ಉಪೇಂದ್ರ; ಭರದಿಂದ ಸಾಗುತ್ತಿದೆ ‘ಉಗ್ರಾವತಾರ’ ಚಿತ್ರೀಕರಣ

Priyanka Upendra | Ugravatara Movie: ಸ್ಯಾಂಡಲ್​ವುಡ್ ನಟಿ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Jan 17, 2022 | 9:48 PM

ಪ್ರಿಯಾಂಕಾ ಉಪೇಂದ್ರ ರ‍್ಯಾಗಿಂಗ್‌ ಮಾಡುತ್ತಿದ್ದ ಹುಡುಗರಿಗೆ ಲಾಠಿ ರುಚಿ ತೋರಿಸಿದ್ದಾರೆ. ಪ್ರಿಯಾಂಕಾ (Priyanka Upendra) ಕಾನೂನು ಕೈಗೆತ್ತಿಕೊಂಡರಾ ಎಂದು ಯೋಚಿಸಬೇಡಿ. ಅಸಲಿಗೆ ಅವರು ಕಾನೂನು ಪಾಲಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು. ಉಗ್ರಾವತಾರ ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಖಡಕ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಅದರ ಚಿತ್ರೀಕರಣ ನಡೆಯುತ್ತಿದೆ. ರ‍್ಯಾಗಿಂಗ್‌ ಮಾಡೋ ಹುಡುಗರಿಗೆ ಲಾಠಿ ಬೀಸುವ ದೃಶ್ಯದ ಚಿತ್ರೀಕರಣ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಲಾಠಿ ಹಿಡಿದಿದ್ದಾರೆ.

ಚಿತ್ರಕ್ಕೆ ಗುರುಮೂರ್ತಿ ನಿರ್ದೇಶನ ಮಾಡಿದ್ದು, ತಾರಾಗಣದಲ್ಲಿ ಸುಮನ್, ಪವಿತ್ರಾ ಲೋಕೇಶ್, ಶೋಭ, ನಟರಾಜ್ ಮೊದಲಾದವರು ಕಾಣಿಸಿಕೊಂದಿದ್ದಾರೆ. ನಂದಕುಮಾರ್ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದು, ಕಿನ್ನಾಳ್‌ರಾಜ್ ಸಾಹಿತ್ಯ ಮತ್ತು ಸಂಭಾಷಣೆ, ವಿನೋಧ್-ಮಾಸ್‌ ಮಾದ- ಅಶೋಕ್ ಸಾಹಸ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ. ಸಿನಿಮಾದ ಬಹುತೇಕ ಶೂಟಿಂಗ್​ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಸಿನಿಮಾ ರಿಲೀಸ್​ ಮಾಡೋ ಪ್ಲಾನ್​ನಲ್ಲಿದೆ ಚಿತ್ರತಂಡ.

ಇದನ್ನೂ ಓದಿ:

ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ಕ್ಕೆ ಗಿರಿಜಾ ಸಿದ್ದಿ ಸಾತ್​; ಬರುತ್ತಿದೆ ಮತ್ತೊಂದು ಕೊಂಕಣಿ ಸಾಂಗ್

Priyanka Upendra: ಪ್ರಿಯಾಂಕಾ ಅವರ ನಿಜವಾದ ಕೋಪವನ್ನು ಉಪೇಂದ್ರ ನೋಡಿದ್ದಾರಂತೆ!; ಕುತೂಹಲಕರ ಮಾಹಿತಿ ಇಲ್ಲಿದೆ

Follow us on

Click on your DTH Provider to Add TV9 Kannada