Priyanka Upendra: ಪ್ರಿಯಾಂಕಾ ಅವರ ನಿಜವಾದ ಕೋಪವನ್ನು ಉಪೇಂದ್ರ ನೋಡಿದ್ದಾರಂತೆ!; ಕುತೂಹಲಕರ ಮಾಹಿತಿ ಇಲ್ಲಿದೆ

Ugravathara teaser launch: ಸ್ಯಾಂಡಲ್​ವುಡ್ ನಟಿ ಪ್ರಿಯಾಂಕಾ ಉಪೇಂದ್ರ ಮಾಸ್ ನಾಯಕಿಯ ಅವತಾರ ತಾಳಿದ್ದಾರೆ. ಉಗ್ರಾವತಾರ ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದು, ಇಂದು ಅದರ ಟೀಸರ್ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಕೆಲವು ಕುತೂಹಲಕರ ವಿಚಾರಗಳನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್ ನಟಿ ಪ್ರಿಯಾಂಕಾ ಉಪೇಂದ್ರ ‘ಉಗ್ರಾವತಾರ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದು ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಅದ್ದೂರಿಯಾಗಿ ಟೀಸರ್ ಬಿಡುಗಡೆ ಮಾಡಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ರಿಯಲ್ ಸ್ಟಾರ್ ಉಪೇಂದ್ರ ತಮಾಷೆಯಾಗಿ, ಪ್ರಿಯಾಂಕಾ ಅವರ ನಿಜವಾದ ಉಗ್ರಾವತಾರವನ್ನು ನಾನು ಮನೆಯಲ್ಲಿ ನೋಡಿದ್ದೇನೆ. ಚಿತ್ರದಲ್ಲಿ ಬೇರೆ ರೀತಿಯ ಉಗ್ರಾವತಾರ ಇದೆ, ನೋಡಿ ಎಂದಿದ್ದಾರೆ. ಈ ಕುರಿತಂತೆ ನಂತರ ಮಾತನಾಡಿರುವ ಪ್ರಿಯಾಂಕಾ ಹಲವು ಕುತೂಹಲಕರ ವಿಚಾರಗಳನ್ನು ತೆರೆದಿಟ್ಟಿದ್ದಾರೆ. ‘ನನ್ನ ಕೋಪವನ್ನು ಉಪೇಂದ್ರ ಅವರು ನೋಡಿದ್ದಾರೆ. ಎಲ್ಲಾ ಹೆಂಗಸರಿಗೂ ಅವರ ಗಂಡಂದಿರ ಕುರಿತು ಕೋಪ ಇರತ್ತಲ್ವಾ’ ಎಂದು ನಕ್ಕಿದ್ದಾರೆ. ಎಲ್ಲರಿಗೂ ಕೋಪ ಇರುತ್ತದಲ್ವಾ, ಅದನ್ನು ನಾವು ಸರಿಯಾಗಿ ನಿರ್ವಹಿಸಬೇಕಷ್ಟೇ ಎಂದು ಅವರು ಕಿವಿಮಾತನ್ನೂ ಹೇಳಿದ್ದಾರೆ. ಪ್ರಿಯಾಂಕಾ ಮತ್ತು ಉಪ್ಪಿಯ ಮಧ್ಯೆ ಕೊನೆಗೆ ಯಾರು ಕಾಂಪ್ರಮೈಸ್ ಆಗುತ್ತಾರೆ ಎಂಬ ಪ್ರಶ್ನೆಗೆ ಯಾರು ತಪ್ಪು ಮಾಡಿರುತ್ತಾರೋ ಅವರೇ ಕ್ಷಮೆ ಕೇಳುತ್ತಾರೆ ಎಂದು ಅವರು ಹೇಳಿದ್ದಾರೆ.

ಪಕ್ಕಾ ಆಕ್ಷನ್ ಚಿತ್ರವಾಗಿರುವ ‘ಉಗ್ರಾವತಾರ’ದಲ್ಲಿ ಮಾಸ್ ನಾಯಕಿಯಾಗಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಮಾಲಾಶ್ರೀ, ವಿಜಯಶಾಂತಿ ಸೇರಿದಂತೆ ಬಾಲಿವುಡ್ ಹಾಗೂ ಹಾಲಿವುಡ್ ನಟಿಯರು ತಮಗೆ ಪ್ರೇರಣೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:

Swara Bhasker: ನಿಮಗಿಂತ ನಮ್ಮ ಮನೆ ಕೆಲಸದಾಕೆ ಚೆನ್ನಾಗಿದ್ದಾಳೆ ಎಂದು ಕೀಳು ದರ್ಜೆಯ ಕಾಮೆಂಟ್ ಮಾಡಿದವನಿಗೆ ಖಡಕ್ ಉತ್ತರ ನೀಡಿದ ನಟಿ

‘ಪುನೀತ್​ ನಮನ’ ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ? ಇಲ್ಲಿದೆ ಸುದ್ದಿಗೋಷ್ಠಿ ಮಾಹಿತಿ

Click on your DTH Provider to Add TV9 Kannada