ಪೋಷಕರೇ ನಿಮಗೊಂದು ಹಿತಕರವಲ್ಲದ ಸುದ್ದಿಯಿದೆ, ಪಬ್ಜಿ ನ್ಯೂ ಸ್ಟೇಟ್ ಭಾರತದಲ್ಲಿ ರಿಲೀಸ್ ಆಗಿದೆ!

ಗೇಮಿಗೆ ಸಂಬಂಧಪಟ್ಟ ಎಲ್ಲ ತಾಂತ್ರಿಕ ಆಂಶಗಳನ್ನು ಕ್ರಾಫ್ಟನ್ ಪರಿಶೀಲಿಸಿದ ನಂತರವೇ ಅದನ್ನು ಲಾಂಚ್ ಮಾಡಲಾಗಿದೆ. ಕೊನೇ ಘಳಿಗೆಯ ದೋಶಗಳೇನಾದರೂ ಇದ್ದರೆ ಕ್ರಾಫ್ಟನ್ ಸರಿಪಡಿಸುತ್ತದೆ.

ನೀವು ಬೆಳೆಯುವ ಮಕ್ಕಳ ಪೋಷಕರಾಗಿದ್ದರೆ, ಈ ಸುದ್ದಿ ಖಂಡಿತವಾಗಿಯೂ ರುಚಿಸದು. ಭಾರತದಲ್ಲಿ ಬ್ಯಾನ್ ಆಗಿದ್ದ ಪಬ್ ಜಿ ಹೊಸ ಅವತಾರದೊಂದಿಗೆ ಪುನಃ ಲಾಂಚ್ ಆಗಿದೆ. ಪಬ್ ಜಿ ನ್ಯೂ ಸ್ಟೇಟ್ ಇನ್ನು ಮಕ್ಕಳ ಮೊಬೈಲ್ ಪೋನಿನ ಪ್ರಮುಖ ಫೀಚರ್ ಆಗಲಿದೆ. ಹೊಸ ಯುದ್ಧಭೂಮಿಗಳನ್ನು ಗೇಎ ಸೆಟ್ ಮಾಡಲಾಗಿದೆ. 2051 ನೇ ಇಸವಿ ಯುದ್ಧದ ಗೇಮನ್ನು ಆಳವಡಿಸಲಾಗಿದ್ದು ಇದು ಕೆಲ ಕುತೂಹಲಕಾರಿ ಫೀಚರ್ಗಳನ್ನು ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಜನ ಹೊಸ ಗೇಮಿನ ಬಗ್ಗೆ ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಹಾಗೆ ನೋಡಿದರೆ ಭಾರತದಲ್ಲಿ ಹೊಸ ಗೇಮಿನ ಪ್ರೀ-ಆರ್ಡರಿಂಗ್ ಕೆಲ ವಾರಗಳ ಹಿಂದೆಯೇ ಆರಂಭವಾಗಿತ್ತು.

ಗೇಮಿಗೆ ಸಂಬಂಧಪಟ್ಟ ಎಲ್ಲ ತಾಂತ್ರಿಕ ಆಂಶಗಳನ್ನು ಕ್ರಾಫ್ಟನ್ ಪರಿಶೀಲಿಸಿದ ನಂತರವೇ ಅದನ್ನು ಲಾಂಚ್ ಮಾಡಲಾಗಿದೆ. ಕೊನೇ ಘಳಿಗೆಯ ದೋಶಗಳೇನಾದರೂ ಇದ್ದರೆ ಕ್ರಾಫ್ಟನ್ ಸರಿಪಡಿಸುತ್ತದೆ. ಯೂಸರ್ಸ್ಗೆ ಯಾವುದೇ ಸಮಸ್ಯೆಯಾಗಬಾರದು ಅನ್ನುವ ಕಾರಣಕ್ಕೆ ಈ ಪರಿಶೀಲನೆ ನಡೆಸಲಾಗುತ್ತದೆ.

‘ಕೊನೆ ಹಂತದ ನ್ಯೂನತೆಗಳನ್ನು ಸರಿಪಡಿಸುವ ಕಾರ್ಯವನ್ನು ನಾವು ಕೈಗೆತ್ತಿಕೊಂಡಿದ್ದೇವೆ, ಹೊಸ ತಲೆಮಾರಿನ ಪಬ್ ಜಿ: ನ್ಯೂ ಸ್ಟೇಟ್ ಯುದ್ಧದ ಗೇಮ್ ನೀವು ಆಡಲಾರಂಭಿಸಿದನ್ನು ನೋಡಲು ನಾವು ಕಾತುರರಾಗಿದ್ದೇವೆ,’ ಎಂದು ಗುರುವಾರ ತಾನು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಕ್ರಾಫ್ಟನ್ ಹೇಳಿತ್ತು.

ನೀವೆಲ್ಲ ಹೊಸ ಪಬ್ ಜಿ ಆಡಲು ಕಾತುರರಾಗಿರುತ್ತೀರಿ ಅನ್ನೋದು ನಮಗೆ ಗೊತ್ತಿದೆ. ಗೇಮನ್ನು ನೀವಿನ್ನೂ ಡೌನ್ ಲೋಡ್ ಮಾಡಿಕೊಂಡಿಲ್ಲವಾದರೆ, ಕೆಲ ಸಂಗತಿಗಳು ನಿಮ್ಮ ಗಮನದಲ್ಲಿ ಇರಬೇಕು. ಡೌನ್ ಲೋಡ್ ಮಾಡಿಕೊಳ್ಳುವ ಮೊದಲು ನಿಮ್ಮ ಫೋನ್ ಅದನ್ನು ಸಪೋರ್ಟ್ ಮಾಡುತ್ತದೆಯೋ ಇಲ್ಲವೋ ಅಂತ ಖಾತ್ರಿ ಪಡಿಸಿಕೊಳ್ಳಿ. ಅದನ್ನ ಹಾಕಿಕೊಳ್ಳಬೇಕಾದರೆ ಅಗತ್ಯವಿರುವ ಕನಿಷ್ಟ ಸಂಗತಿಗಳನ್ನು ಕ್ರಾಫ್ಟನ್ ಪಟ್ಟಿ ಮಾಡಿದೆ.

ನಿಮ್ಮ ಫೋನ್ ಆಂಡ್ರಾಯ್ಡ್ 6.0 ಮಾರ್ಷಮ್ಯಾಲ್ಲೋ ಅಥವಾ ಆದಕ್ಕಿಂತ ಜಾಸ್ತಿ ಮತ್ತು ಒಂದು 64-ಬಿಟ್ ಪ್ರೊಸೆಸರ್ (ಕ್ವಾಲ್ಕಾಮ್, ಮಿಡಿಯಾಟೆಕ್, ಎಕ್ಸಿನೋಸ್ ಅಥವಾ ಯುನಿಸಾಕ್ ಮೊದಲಾದ ಯಾವುದೇ ಹೊಸ ತಲೆಮಾರಿನದ್ದು) ಹಾಗೂ ಕನಿಷ್ಟ 2 ಜಿಬಿ ಱಮ್ ಹೊಂದಿದ್ದರೆ ಅದು ಪಬ್ ಜಿ: ನ್ಯೂ ಸ್ಟೇಟ್ ಗೇಮನ್ನು ಸಪೋರ್ಟ್ ಮಾಡುತ್ತದೆ.

ಇದನ್ನೂ ಓದಿ:  Alia Bhatt: ಕರಣ್​ ಜೋಹರ್​ ಕೇಳಿದ ಸಿಂಪಲ್​ ಪ್ರಶ್ನೆಗಳಿಗೆ ಉತ್ತರಿಸಲು ತಡವರಿಸಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

Click on your DTH Provider to Add TV9 Kannada