Sign In

By signing in or creating an account, you agree with Associated Broadcasting Company's Terms & Conditions and Privacy Policy.

Premam Poojyam: ಚಳಿ, ಮಳೆಯನ್ನೂ ಲೆಕ್ಕಿಸದೇ ‘ಪ್ರೇಮಂ ಪೂಜ್ಯಂ’ ಸಿನಿಮಾ ನೋಡಲು ಬಂದ ಪ್ರೇಕ್ಷಕರು

Premam Poojyam: ಚಳಿ, ಮಳೆಯನ್ನೂ ಲೆಕ್ಕಿಸದೇ ‘ಪ್ರೇಮಂ ಪೂಜ್ಯಂ’ ಸಿನಿಮಾ ನೋಡಲು ಬಂದ ಪ್ರೇಕ್ಷಕರು

TV9 Web
| Updated By: ಮದನ್​ ಕುಮಾರ್​

Updated on: Nov 12, 2021 | 1:25 PM

ಇದು ‘ಲವ್ಲೀ ಸ್ಟಾರ್​’ ಪ್ರೇಮ್​ ಅಭಿನಯದ 25ನೇ ಸಿನಿಮಾ ಎಂಬುದು ವಿಶೇಷ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪ್ರೇಮಂ ಪೂಜ್ಯಂ’ ಬಿಡುಗಡೆ ಆಗಿದೆ.

ರಾಜ್ಯದ ಹಲವೆಡೆ ತಾಪಮಾನ ಕುಸಿದಿದೆ. ಬೆಂಗಳೂರಿನಲ್ಲಿ ಚಳಿಯ ವಾತಾವರಣ ಇದೆ. ಚಿಟಪಟ ಮಳೆ ಸುರಿಯುತ್ತಲೇ ಇದೆ. ಅದರ ನಡುವೆಯೂ ಜನರು ಚಿತ್ರಮಂದಿರದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಇಂದು (ನ.12) ಬಿಡುಗಡೆ ಆಗಿರುವ ‘ಪ್ರೇಮಂ ಪೂಜ್ಯಂ’ (Premam Poojyam) ಚಿತ್ರವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಇದು ‘ಲವ್ಲೀ ಸ್ಟಾರ್​’ ಪ್ರೇಮ್​ (Nenapirali Prem) ಅಭಿನಯದ 25ನೇ ಸಿನಿಮಾ ಎಂಬುದು ವಿಶೇಷ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ‘ಪ್ರೇಮಂ ಪೂಜ್ಯಂ’ ಬಿಡುಗಡೆ ಆಗಿದೆ. ಬೆಂಗಳೂರಿನ ‘ತ್ರಿವೇಣಿ’ ಥಿಯೇಟರ್​ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಮೊದಲ ಶೋ ನೋಡಲು ಪ್ರೇಮ್​ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಬೃಂದಾ ಆಚಾರ್ಯ (Brinda Acharya), ಐಂದ್ರಿತಾ ರೇ (Aindrita Ray), ಸಾಧುಕೋಕಿಲ ಮುಂತಾದವರು ಇದರಲ್ಲಿ ಅಭಿನಯಿಸಿದ್ದಾರೆ. ಡಾ. ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ.

ಶರಣ್​ ಅವರಿಗೆ ಈ ಚಿತ್ರ ಸಖತ್​ ಇಷ್ಟವಾಗಿದೆ. ‘ಪ್ರೇಮಂ ಎಂಬ ಹೆಸರಿನ ರೀತಿಯೇ ಈ ಚಿತ್ರತಂಡಕ್ಕೆ ಸಿನಿಮಾ ಮೇಲೆ ಇರುವ ಪ್ರೇಮವು ಪ್ರತಿ ಫ್ರೇಮ್​ನಲ್ಲಿ ಕಾಣಿಸುತ್ತದೆ. ನಿರ್ದೇಶಕರ ಕನಸು ತುಂಬ ಕಲರ್​ಫುಲ್​ ಆಗಿ ಮೂಡಿಬಂದಿದೆ. ಡಾ. ರಾಘವೇಂದ್ರ ಅವರು ಮೊದಲ ನಿರ್ದೇಶನದ ಪ್ರಯತ್ನದಲ್ಲೇ ಗಮನ ಸೆಳೆದಿದ್ದಾರೆ. ಪ್ರೇಮ್​ ಅವರನ್ನು ಇನ್ನಷ್ಟು ಚೆನ್ನಾಗಿ ತೋರಿಸಲಾಗಿದೆ. ಇಡೀ ತಂಡದವರು ಮನಪೂರ್ವಕವಾಗಿ ಕೆಲಸ ಮಾಡಿದ್ದಾರೆ’ ಎಂದು ಶರಣ್​ ಹೊಗಳಿದ್ದಾರೆ. ಖ್ಯಾತ ನಿರ್ದೇಶಕ ತರುಣ್​ ಸುಧೀರ್​, ‘ದಿಯಾ’ ಸಿನಿಮಾ ನಟಿ ಖುಷಿ ರವಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಕೂಡ ‘ಪ್ರೇಮಂ ಪೂಜ್ಯಂ’ ನೋಡಿ ಮೆಚ್ಚಿಕೊಂಡಿದ್ದಾರೆ.

ಇದನ್ನೂ ಓದಿ:

‘ಜಿಮ್​ಗೆ ಹೋಗೋದ್ರಿಂದ ಸಾವು ಸಂಭವಿಸುತ್ತೆ ಅನ್ನೋದು ತಪ್ಪು’: ನಟ ನೆನಪಿರಲಿ ಪ್ರೇಮ್​

‘ನೆನಪಿರಲಿ’ ಪ್ರೇಮ್​ ಮುಂದಿನ ಚಿತ್ರಕ್ಕೆ 400 ಕೋಟಿ ರೂ. ಬಜೆಟ್​; ಹಾಲಿವುಡ್​ ಹಾದಿಯತ್ತ ‘ಲವ್ಲಿ ಸ್ಟಾರ್​’