ಪುನೀತ್ ರಾಜಕುಮಾರ್ ಜೊತೆ ನಟಿಸುವಾಸೆ ಈಡೇರದೆ ಹೋಗಿದ್ದಕ್ಕೆ ಆಶಿಕಾ ಪರಿತಪಿಸುತ್ತಾ ಆತ್ತುಬಿಟ್ಟರು
ಆಶಿಕಾ ಇತ್ತೀಚಿಗಷ್ಟೇ ‘ದ್ವಿತ್ವ’ ಚಿತ್ರಕ್ಕೆ ಸಹಿ ಹಾಕಿದ್ದರು ಮತ್ತು ಅಪ್ಪು ಜೊತೆ ನಟಿಸುವ ಕುರಿತು ಬಹಳ ಉತ್ಸುಕರಾಗಿದ್ದರು. ತನ್ನಾಸೆ ಈಡೇರಲಿಲ್ಲ, ತುಂಬಾ ನತದೃಷ್ಟೆ ಅಂತ ಆಶಿಕಾ ವೇದನೆಯಿಂದ ಹೇಳಿದರು.
ಇನ್ನಿಲ್ಲದಂತೆ ಕಾಡುತ್ತಿದೆ. ಸ್ಯಾಂಡಲ್ವುಡ್ ಒಂದರ್ಥದಲ್ಲಿ ಸ್ತಭ್ಧಗೊಂಡಿದೆ. ಉದ್ಯಮದಲ್ಲಿ ಚಟುವಟಿಕೆಗಳು ಎಂದಿನಂತೆ ಆರಂಭಗೊಳ್ಳಲು ಸಮಯ ಹಿಡಿಯುತ್ತದೆ. ಅಪ್ಪು ಅವರ ಸಹೋದ್ಯೋಗಿಗಳಿಗೆ ಶಾಕ್ನಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟಿವಿ9 ಸಿನಿಮಾ ವರದಿಗಾರ ಮಾಲ್ತೇಶ್ ಜಗ್ಗಿನ್ ಗುರುವಾರದಂದು ನಟಿ ಆಶಿಕಾ ಅವರೊಂದಿಗೆ ಮಾತಾಡಿದರು. ಪುನೀತ್ ಸರ್ ಅಂತ ಹೇಳುವಾಗಲೇ ಗದ್ಗದಿತರಾದ ಆಶಿಕಾ ಬಳಿಕ ತಮ್ಮ ಕಣ್ಣೀರು ತಡೆಯದಾದರು. ಅಳುತ್ತಲೇ ಮಾತಾಡಿ ಅಪ್ಪು ಸರ್ ಅವರೊಂದಿಗೆ ನಟಿಸುವ ಆಸೆ ಈಡೇರದೇ ಹೋಗಿದ್ದಕ್ಕೆ ಪರಿತಪಿಸಿದರು.
ಅಪ್ಪು ಸರ್ ಏನು ಹೇಳಬೇಕೆಂದು ತನಗೆ ಗೊತ್ತಾಗುತ್ತಿಲ್ಲ, ಅವರ ಪೋಟೋ ನೋಡಿದಾಕ್ಷಣ ದುಃಖದ ಕಟ್ಟೆ ಒಡೆದುಬಿಡುತ್ತದೆ. ಅವರಿಗೆ ತಮ್ಮ ಡ್ಯಾನ್ಸ್ ತುಂಬಾ ಇಷ್ಟವಾಗಿತ್ತು, ಎಂದು ಹೇಳಿದ ಆಶಿಕಾ ಒಬ್ಬ ನುರಿತ ಡ್ಯಾನ್ಸರ್ ಅಗಿದ್ದಾರೆ. ಜೊತೆಯಾಗಿ ಕೆಲಸ ಮಾಡೋಣ ಅಂತ ಅಪ್ಪು ಅವರಿಗೆ ಹೇಳಿದ್ದರಂತೆ.
ಆಶಿಕಾ ಇತ್ತೀಚಿಗಷ್ಟೇ ‘ದ್ವಿತ್ವ’ ಚಿತ್ರಕ್ಕೆ ಸಹಿ ಹಾಕಿದ್ದರು ಮತ್ತು ಅಪ್ಪು ಜೊತೆ ನಟಿಸುವ ಕುರಿತು ಬಹಳ ಉತ್ಸುಕರಾಗಿದ್ದರು. ತನ್ನಾಸೆ ಈಡೇರಲಿಲ್ಲ, ತುಂಬಾ ನತದೃಷ್ಟೆ ಅಂತ ಆಶಿಕಾ ವೇದನೆಯಿಂದ ಹೇಳಿದರು.
2016 ರಲ್ಲಿ ‘ಕ್ರೇಜಿ ಬಾಯ್’ ಚಿತ್ರದೊಂದಿಗೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಆಶಿಕಾ ತಮ್ಮ ಎರಡನೇ ಚಿತ್ರದಲ್ಲೇ ಶಿವರಾಜಕುಮಾರ್ ಅವರ ‘ಮಾಸ್ ಲೀಡರ್’ ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಪಡೆದರು. ಈ ಚಿತ್ರದಲ್ಲಿ ಅವರು ನಾಯಕಿ ಅಲ್ಲವಾದರೂ ಅದು ದೊಡ್ಡ ಬ್ಯಾನರಿನ ಚಿತ್ರವಾಗಿತ್ತು. ಇತ್ತೀಚಿಗೆ ಬಿಡುಗಡೆಯಾದ ‘ಕೋಟಿಗೊಬ್ಬ 3’ ಚಿತ್ರದ ಹಾಡೊಂದರಲ್ಲಿ ಅವರು ಕಾಣಿಸಿಕೊಂಡಿದ್ದರು.
25 ವರ್ಷ ವಯಸ್ಸಿನ ಆಶಿಕಾ ಇದುವರೆಗೆ 16 ಚಿತ್ರಗಳಲ್ಲಿ ನಟಿಸಿದ್ದು ಅದರಲ್ಲಿ ಕೆಲವು ಇನ್ನೂ ಬಿಡುಗಡೆಯಾಗಬೇಕಿದೆ.
ಇದನ್ನೂ ಓದಿ: Shocking Video: ಬೈಕ್ಗಳಿಗೆ ಡಿಕ್ಕಿ ಹೊಡೆದು, ರಸ್ತೆಯ ಪಕ್ಕದವರ ಮೇಲೆ ಹರಿದ ಐಷಾರಾಮಿ ಕಾರು; ಶಾಕಿಂಗ್ ವಿಡಿಯೋ ವೈರಲ್