ಮಾನವನ ಅಸ್ತಿತ್ವ ಇರದೆ ಹೋಗಿದ್ದರೆ ನಾವೀಗ ವಾಸ ಮಾಡುತ್ತಿರುವ ಭೂಮಿ ಹೇಗಿರುತಿತ್ತು ಅಂತ ಯೋಚಿಸಿದ್ದೀರಾ?

ಆಸ್ಟ್ರೇಲಿಯಾದ ವಿಜ್ಞಾನಿಗಳು ವಿಷಯಕ್ಕೆ ಸಂಬಂಧಿಸಿದ ಹಾಗೆ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಮಾನವನಿರದ ಭೂಮಿ ಹೇಗಿರುತಿತ್ತು ಎನ್ನುವ ಚಿತ್ರಣ ನೀಡಲು ಪ್ರಯತ್ನಿಸುತ್ತಿದ್ದಾರೆ.

ಭೂಮಿ ಹೇಗೆ ಸೃಷ್ಟಿಯಾಯಿತು ಅನ್ನುವುದಕ್ಕೆ ಹಲವಾರು ವಾದಗಳಿವೆ. ಪ್ರತಿಯೊಂದು ಧರ್ಮದಲ್ಲಿ ಸೃಷ್ಟಿ ಕುರಿತು ವ್ಯಾಖ್ಯಾನಗಳಿವೆ. ಅದನ್ನು ನಾವು ಚರ್ಚಿಸಿವುದು ಬೇಡ. ನಾವು ಕೇವಲ ವೈಜ್ಞಾನಿಕ ದೃಷ್ಟಿಕೋನದಿಂದ ಸಂಗತಿಗಳನ್ನು ಗಮನಿಸುವ. ನಮಗೆಲ್ಲ ಗೊತ್ತಿರುವ ಹಾಗೆ ಸೃಷ್ಟಿಯ ಮೇಲೆ ಮಾನವನ ಛಾಪು ದಟ್ಟವಾಗಿ ಮೂಡಿದೆ. ನಾಗರಿಕತೆಗಿಂತ ಮುಂಚಿನ ಪಿರಾಮಿಡ್ ಗಳು, ಪ್ರಾಚೀನ ಸ್ಮಾರಕಗಳು ಅಥವಾ ಈಗಿನ ಗಗನಚುಂಬಿ ಕಟ್ಟಡಗಳು, ಎಲ್ಲವೂ ಮಾನವ ನಿರ್ಮಿತ. ಬಯಲು ಪ್ರದೇಶವೊಂದರಲ್ಲಿ ನೀವು ವಿಶಾಲವಾದ ಹುಲ್ಲುಗಾವಲು ನೋಡಿದರೆ ಅದರಲ್ಲೂ ನಮ್ಮ ಛಾಪು ಕಾಣುತ್ತದೆ. ಸೃಷ್ಟಿಯಲ್ಲಿ ನಮ್ಮ ಅಂದರೆ ಮನಕುಲದ ಹಸ್ತಕ್ಷೇಪ ಬರಿಗಣ್ಣಿಗೆ ಕಾಣಿಸುತ್ತದೆ. ಅದೆಲ್ಲ ಸರಿ, ಭೂಮಿ ಮೇಲೆ ಮನುಷ್ಯನ ಅಸ್ತಿತ್ವವೇ ಇರದಿದ್ದರೆ ಭೂಮಿ ಹೇಗಿರುತ್ತಿತ್ತು ಅಂತ ನೀವು ಯೋಚನೆ ಮಾಡಿದ್ದೀರಾ?

ಆಸ್ಟ್ರೇಲಿಯಾದ ವಿಜ್ಞಾನಿಗಳು ವಿಷಯಕ್ಕೆ ಸಂಬಂಧಿಸಿದ ಹಾಗೆ ಸಂಶೋಧನೆಯನ್ನು ಮಾಡುತ್ತಿದ್ದಾರೆ. ಮಾನವನಿರದ ಭೂಮಿ ಹೇಗಿರುತಿತ್ತು ಎನ್ನುವ ಚಿತ್ರಣ ನೀಡಲು ಪ್ರಯತ್ನಿಸುತ್ತಿದ್ದಾರೆ. ಅವರು ಹೇಳುವ ಹಾಗೆ, ಮಾನವನಿಲ್ಲದ ಭುವಿಯು, ನಿಷ್ಕಲ್ಮಶವಾಗಿ, ಸುಂದರವಾಗಿ ಸ್ಫಟಿಕದಂತೆ ಹೊಳೆಯುತಿತ್ತು. ಎಲ್ಲೆಡೆ ಹಚ್ಚ ಹಸಿರು ಹುಲ್ಲುಗಾವಲು ಮತ್ತು ಸಮೃದ್ಧ ಸಸ್ಯರಾಶಿ, ನಿರ್ಬಿಢೆ ಮತ್ತು ಸ್ವೇಚ್ಛೆಯಿಂದ ಓಡಾಡುವ ಪ್ರಾಣಿ ಸಂಕುಲ, ಕಂಡಲೆಲ್ಲ ಹಾಲಿನಂತೆ ಹರಿಯುವ ನೀರಿನ ಝರಿ ಮತ್ತು ಬುಗ್ಗೆಗಳು ಇರುತ್ತಿದ್ದವು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ನಮಗೆ ಗೊತ್ತ್ತಿರುವ ಹಾಗೂ ಗೊತ್ತಿರದ ನಾನಾ ಬಗೆಯ ಪ್ರಾಣಿಗಳು ಭೂಮಿಯ ಮೇಲೆ ವಾಸವಾಗಿರುತ್ತಿದ್ದವು ಮತ್ತು ಎಲ್ಲ ಪಶುಪಕ್ಷಿಗಳ ಗಾತ್ರ ನಮಗೆ ಈಗ ಕಾಣುವ ಗಾತ್ರಕ್ಕಿಂತ ದೊಡ್ಡದಾಗಿರುತಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸೃಷ್ಟಿಯಲ್ಲಿ ಆಧುನಿಕ ಮಾನವನ ಹಸ್ತಕ್ಷೇಪ ಇರದೆ ಹೋಗಿದ್ದರೆ, ನಮ್ಮ ಪೂರ್ವಜರು ಸಹ ಪ್ರಾಯಶಃ ಬದುಕಿರುತ್ತಿದ್ದರು ಅಂತ ಅವರು ಹೇಳುತ್ತಾರೆ. ಅವರು ಸಹ ಭೂಮಿಯ ಚಿತ್ರಣವನ್ನು ಬದಲಾಯಿಸಿರುತ್ತಿದ್ದರು ಎನ್ನುವುದು ಅವರ ಅಭಿಮತ.

ಇದನ್ನೂ ಓದಿ:   Shocking Video: 22 ಅಂತಸ್ತಿನ‌‌ ಕಟ್ಟಡದ ಮೇಲೆ ಮಕ್ಕಳ ಹುಡುಗಾಟ; ಪೋಷಕರನ್ನು ಬೆಚ್ಚಿಬೀಳಿಸಿರುವ ವಿಡಿಯೋ ಇಲ್ಲಿದೆ  

Click on your DTH Provider to Add TV9 Kannada