ಆಕ್ಟೇವಿಯಾನೊಂದಿಗೆ ಹೋಲುವ ಸ್ಕೋಡಾ ಕಂಪನಿಯ ಸ್ಲಾವಿಯಾ ನವೆಂಬರ್ 18 ಕ್ಕೆ ಲಾಂಚ್ ಆಗುತ್ತಿದೆ
ಹೊಂಡಾ ಸಿಟಿ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಸ್ಲಾವಿಯಾ ತಕ್ಕ ಪ್ರತಿಸ್ಪರ್ಧಿಯಾಗಲಿದೆ ಎಂದು ಇಂಡಸ್ಟ್ರೀಯಲ್ಲಿ ಮಾತು ಕೇಳಿಬರುತ್ತಿದೆ.
ನವೆಂಬರ್ ಆರಂಭವಾಗಿದೆ ಮತ್ತು ಕಾರು ಉತ್ಪಾದಿಸುವ ಕಂಪನಿಗಳು ಪೈಪೋಟಿಗೆ ಬಿದ್ದಂತೆ ತಮ್ಮ ಹೊಸ ಮಾಡೆಲ್ ಗಳನ್ನು ಮಾರ್ಕೆಟ್ ಗೆ ಲಾಂಚ್ ಮಾಡುತ್ತಿವೆ. ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಸ್ಕೋಡಾ ಕಂಪನಿಯು ತನ್ನ ಸ್ಲಾವಿಯಾ ಕಾರನ್ನು ನವೆಂಬರ್ 18 ರಂದು ಜಾಗತಿಕವಾಗಿ ಲಾಂಚ್ ಮಾಡಲಿದೆ. ಈ ಕಾರಿನ ಆಂತರಿಕ ವಿನ್ಯಾಸವನ್ನು ಗಮನಿಸಿದರೆ ಅದು ಫೇಬಿಯ ಹ್ಯಾಚ್ ಬ್ಯಾಕ್ನೊಂದಿಗೆ ಹೋಲುತ್ತದೆ. ಕ್ಯಾಬಿನಲ್ಲಿ ಲೇಯರ್ ಗಳಿರುವ ಸೊಗಸಾದ ಡ್ಯಾಶ್ ಬೋರ್ಡ್ ಅನ್ನು ಅಳವಡಿಸಲಾಗಿದೆ. ಸಂಪೂರ್ಣವಾಗಿ ಡಿಜಿಟಲೀಗೊಂಡಿರುವ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎರಡು-ಸ್ಪೋಕ್ ಸ್ಟೀರಿಂಗ್ ವ್ಹೀಲ್ ಮತ್ತು ದೊಡ್ಡದಾದ ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ಕಾರಿನ ಇತರ ಪ್ರಮುಖ ಫೀಚರ್ಗಳಲ್ಲಿ ಸೇರಿವೆ.
ಮಾಹಿತಿಯ ಪ್ರಕಾರ ಸನ್ರೂಫ್, ವೈರ್ ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹಾಗೂ 6 ಏರ್ ಬ್ಯಾಗ್ಗಳನ್ನು ಸ್ಲಾವಿಯಾ ಹೊಂದಿದೆ. ಈ ಕಾರು ಕುಷಾಕ್ ನ 115 ಪಿಎಸ್ 1-ಲೀಟರ್ ಮತ್ತು 150 ಪಿಎಸ್ 1.5 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನಗಳೊಂದಿಗೆ ಚಲಿಸಲ್ಪಡುತ್ತದೆ.
ಸ್ಲಾವಿಯಾ ಕಾರಿನ ಮತ್ತಷ್ಟು ಸ್ಪೆಸಿಫಿಕೇಶನ್ ಗಳನ್ನು ನೋಡುವುದಾದರೆ, ಇದು ಎಂದಿನ 3-ಬಾಕ್ಸ್ ಸೆಡಾನ್ ಲೇಔಟ್ ಹೊಂದಿದೆ. ಕಾರಿನ ಮುಂದಿನ ಗ್ರಿಲ್ ಕುಶಾಕ್, ಆಕ್ಟೇವಿಯಾ ಮತ್ತು ಸೂಪರ್ಬ್ ಕಾರುಗಳ ಗ್ರಿಲ್ಗಳೊಂದಿಗೆ ಹೋಲುತ್ತದೆ. ಹಾಗೆ ನೋಡಿದರೆ, ಸ್ಲಾವಿಯಾ ಮತ್ತು ಆಕ್ಟೇವಿಯಾ ನಡುವೆ ಸಾಕಷ್ಟು ಸಾಮ್ಯತೆಗಳಿವೆ.
ಹೊಂಡಾ ಸಿಟಿ ಮತ್ತು ಹ್ಯುಂಡೈ ವರ್ನಾ ಕಾರುಗಳಿಗೆ ಸ್ಲಾವಿಯಾ ತಕ್ಕ ಪ್ರತಿಸ್ಪರ್ಧಿಯಾಗಲಿದೆ ಎಂದು ಇಂಡಸ್ಟ್ರೀಯಲ್ಲಿ ಮಾತು ಕೇಳಿಬರುತ್ತಿದೆ. ಕಾರಿನ ಬೆಲೆ ರೂ.10 ಲಕ್ಷಗಳಿಂದ ರೂ.16 ಲಕ್ಷಗಳವರೆಗೆ ಇರಲಿದೆ ಅಂತ ಅಂದಾಜಿಸಲಾಗಿದೆ.