ಹಾವಿಗೆ ಮುಂಗುಸಿ ಕಂಡರೆ ಆಗುವುದಿಲ್ಲ ಇವೆರಡು ಆಜನ್ಮ ವೈರಿಗಳು. ಇವರೆಡರ ಕಾದಾಟದಲ್ಲಿ ಸಾಮಾನ್ಯವಾಗಿ ಮುಂಗುಸಿಯೇ (Mongoose) ಗೆಲ್ಲೋದು ಅಂತ ಹೇಳುತ್ತಾರೆ. ಕಾದಾಟ ನಡೆಯುವಾಗ ಮುಂಗುಸಿ ಹಾವಿನಿಂದ ಕಚ್ಚಿಸಿಕೊಂಡರೂ ಸಾಯುವುದಿಲ್ಲ. ಹಾವನ್ನು ಕೊಂದ ನಂತರ ಮುಂಗುಸಿಯು ಕಾಡುಗಳಲ್ಲಿ ಯಥೇಚ್ಛವಾಗಿ ಬೆಳೆಯವ ಯಾವುದೋ ಒಂದು ಮರದ ಎಲೆಯನ್ನು ತಿನ್ನುತ್ತದೆ ಹಾಗಾಗಿ ಅದರ ದೇಹದಲ್ಲಿ ವಿಷ ಹಬ್ಬುವುದಿಲ್ಲ್ಲ ಎಂದು ಗ್ರಾಮೀಣ ಭಾಗಗಳಲ್ಲಿ ಜನ ಹೇಳುತ್ತಾರೆ. ವೈಜ್ಞಾನಿಕವಾಗಿ ಹೇಳುವುದಾದರೆ ಮುಂಗುಸಿಗಳು ರೂಪಾಂತರಿತ ಕೋಶಗಳನ್ನು ಹೊಂದಿರುತ್ತವೆ, ಅವು ಮಂಬಾಸ್‌ನ ನ್ಯೂರೋಟಾಕ್ಸಿನ್‌ಗಳನ್ನು (Neurotoxin) ತಮ್ಮ ರಕ್ತವಾಹಿನಿಗೆ (bloodstream) ಪ್ರವೇಶಿಸುವುದನ್ನು ತಡೆಯುತ್ತವೆ. ಹಾಗಾಗಿ ವಿಷಕಾರಿ (venomous) ಹಾವು ಮಾರಣಾಂತಿಕವಾಗಿ ಕಚ್ಚಿದರೂ ಬದುಕುಳಿಯುವ ಸಾಮರ್ಥ್ಯ ಮುಂಗುಸಿ ಪಡೆದಿರುತ್ತದೆ. ಆದರೆ, ಇವೆರಡರ ನಡುವೆ ನಡೆಯವ ಕಾಳಗ ಮಾತ್ರ ಭೀಕರವಾಗಿರುತ್ತದೆ. ಮುಂಗುಸಿಯನ್ನು ನೋಡಿದ ಕೂಡಲೇ ಹಾವು ಹೆದರುತ್ತಾದರೂ ತಪ್ಪಿಸಿಕೊಳ್ಳಲಾಗದ ಸಂದರ್ಭದಲ್ಲಿ ಪ್ರಾಣ ಹೋಗುವವರೆಗೆ ಹೋರಾಡುತ್ತದೆ.
ಹಾಗಂತ ಕೇವಲ ಮುಂಗುಸಿಗಳು ಮಾತ್ರ ಹಾವಿನ ಮೇಲೆ ಹಲ್ಲೆ ಮಾಡುವುದಿಲ್ಲ. ನಮ್ಮ ಸಾಕು ಪ್ರಾಣಿಗಳಾದ ನಾಯಿ ಮತ್ತು ಬೆಕ್ಕು ಸಹ ಹಾವುಗಳ ಮೇಲೆ ಹಲ್ಲೆ ಮಾಡುತ್ತವೆ. ನಿಮ್ಮ ಹಿತ್ತಲಲ್ಲಿ ಬೆಕ್ಕು ಮತ್ತು ಮನೆಯಂಗಳದಲ್ಲಿ ನಾಯಿ ಹಾವಿನ ಮೇಲೆ ನಡೆಸಿರಬಹುದಾದ ಹಲ್ಲೆಗಳನ್ನು ನೀವು ನೋಡಿರಬಹುದು. ಬೆಕ್ಕು ಅಥವಾ ನಾಯಿ ಹಾವಿನಿಂದ ಕಚ್ಚಿಸಿಕೊಳ್ಳದಷ್ಟು ಜಾಗ್ರತೆ ವಹಿಸುತ್ತವೆ.
ಈ ವಿಡಿಯೋ ನಮಗೆ ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲ್ಲೂಕಿನ ಬಲಕುಂದಿ ಗ್ರಾಮದಿಂದ ಲಭ್ಯವಾಗಿದೆ. ಊರಿನ ಬಯಲು ಪ್ರದೇಶವೊಂದರಲ್ಲಿ ಒಂದು ಪಾಪದ ನಾಗರ ಹಾವಿನ ಮೇಲೆ ಒಂದಲ್ಲ, ಎರಡಲ್ಲ ಮೂರು ನಾಯಿಗಳು ಆಕ್ರಮಣ ನಡೆಸಿವೆ. ಶ್ವಾನಗಳ ದಾಳಿಯಿಂದ ಹಾವು ಕಂಗಾಲಾಗಿದೆಯಾದರೂ ಪ್ರಾಣವುಳಿಸಿಕೊಳ್ಳಲು ಹೋರಾಡುತ್ತಿದೆ. ನಾಯಿಗಳು ಅದನ್ನು ಎಳೆದಾಡುತ್ತಿವೆ ಅದರೆ ಕಚ್ಚಲು ಮಾತ್ರ ಬಿಡುತ್ತಿಲ್ಲ.
ಹಾವಿನ ಗತಿ ಏನಾಯ್ತು ಅಂತ ನಮಗೆ ಗೊತ್ತಿಲ್ಲ ಅದರೆ, ಒಂದು ಪಕ್ಷ ನಾಯಿಗಳು ಅದನ್ನು ಕಚ್ಚಿದ್ದರೆ, ಅದು ಸಾಯುತ್ತದೆ. ಕಚ್ಚಿದ ಭಾಗಕ್ಕೆ ಇರುವೆ, ಬೇರೆ ಕ್ರಿಮಿಗಳು ಮುತ್ತಿ ಹಾವನ್ನು ಕೊಂದು ಬಿಡುತ್ತವೆ.
ಇದನ್ನೂ ಓದಿ: Shocking Video: ನೋಡನೋಡುತ್ತಿದ್ದಂತೆ ಮೆಟ್ರೋ ರೈಲ್ವೆ ಹಳಿ ಮೇಲೆ ಮಹಿಳೆಯನ್ನು ತಳ್ಳಿದ ಯುವಕ; ಶಾಕಿಂಗ್ ವಿಡಿಯೋ ಇಲ್ಲಿದೆ