ಅತ್ಯಂತ ಮಹತ್ವದ ಸಭೆಗೆ ಮುನ್ನ ಆರೋಗ್ಯ ತಪಾಸಣೆಗೆ ತೆರಳಿದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿಗಳು ಇಂದು ನಡೆಸಲಿರುವ ಸಭೆಗೆ ಬಹಳ ಮಹತ್ವವಿದೆ. ಸೋಂಕಿನ ಪ್ರಕರಣಗಳಂತೂ ದಿನೇದಿನೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜನೆವರಿ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಆದರೆ, ವಾರಾಂತ್ಯದ ಕರ್ಫ್ಯೂನಿಂದ ಪೀಡೆಯ ಹಬ್ಬುವಿಕೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಕೊರೋನಾ ಸೋಂಕಿಗೊಳಗಾಗಿದ್ದು ರಾಜ್ಯದ ಜನತೆಗೆ ಗೊತ್ತಿರುವ ಸಂಗತಿ. ಸೋಂಕಿನ ಕಾರಣ ಅವರು ಕಳೆದ ವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಅವರಿಗೆ ತಾಕಿದ ಕೋವಿಡ್-19 (Covid-19) ಸೋಂಕು ಸೌಮ್ಯ ಸ್ವರೂಪದ್ದಾಗಿತ್ತು ಮತ್ತು ಮುಖ್ಯಮಂತ್ರಿಗಳು ಕೋವಿಡ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡಿದ್ದಾರೆ. ರಾಜ್ಯ ಮತ್ತು ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣಗಳು ಹದ್ದುಮೀರಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೊಮ್ಮಾಯಿ ಅವರು ಸಾಯಂಕಾಲ 4 ಗಂಟೆಗೆ ಮಹತ್ವದ ಸಭೆ (crucial meeting) ನಡೆಸಲಿದ್ದಾರೆ. ಅವರು ಸೋಂಕಿಗೊಳಗಾಗಿರುವುದರಿಂದ ಪ್ರಾಯಶಃ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಅವರ ಸಭೆ ನಡೆಸಬಹುದು ಅಂತ ಎಣಿಸಲಾಗಿತ್ತು. ಆದರೆ, ಮುಖ್ಯಮಂತ್ರಿಗಳು ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದರೂ, ಅವರು ಯಾವುದೇ ಚಾನ್ಸ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಹಾಗಾಗಿ, ಮೀಟಿಂಗ್ ಗೆ ಮೊದಲು ತಪಾಸಣೆ ಮಾಡಿಸಿಕೊಳ್ಳಲು ತಮ್ಮ ಆರ್ ಟಿ ನಗರದ ನಿವಾಸದಿಂದ ಮಣಿಪಾಲ್ ಆಸ್ಪತ್ರೆಗೆ ತೆರಳಿದರು.
ಮುಖ್ಯಮಂತ್ರಿಗಳು ಇಂದು ನಡೆಸಲಿರುವ ಸಭೆಗೆ ಬಹಳ ಮಹತ್ವವಿದೆ. ಸೋಂಕಿನ ಪ್ರಕರಣಗಳಂತೂ ದಿನೇದಿನೆ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜನೆವರಿ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಆದರೆ, ವಾರಾಂತ್ಯದ ಕರ್ಫ್ಯೂನಿಂದ ಪೀಡೆಯ ಹಬ್ಬುವಿಕೆ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಸಭೆಯಲ್ಲಿ ಸಂಪುಟದ ಹಿರಿಯ ಸಚಿವರಲ್ಲದೆ, ತಜ್ಞರು, ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ.
ರಾಜ್ಯಾದ್ಯಂತ ಮತ್ತೊಮ್ಮೆ ಲಾಕ್ಡೌನ್ ಹೇರುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡರೂ ಆಶ್ಚರ್ಯಪಡಬೇಕಿಲ್ಲ. ಎರಡನೇ ಆಲೆ ಸೃಷ್ಟಿಸಿದ ಅವಾಂತರಗಳನ್ನು ರಾಜ್ಯ ಕಂಡಿದೆ. ಲಾಕ್ಡೌನ್ ಹೇರುವ ಬಗ್ಗೆ ಬಿಜೆಪಿ ನಾಯಕರಲ್ಲಿ ಭಿನ್ನಾಭಿಪ್ರಾಯಗಳಿವೆ. ಹಾಗಾಗಿ, ರಾಜ್ಯದ ಜನತೆಯ ದೃಷ್ಟಿ ಇವತ್ತಿನ ಸಭೆಯಲ್ಲಿ ಸರ್ಕಾರ ತೆಗೆದುಕೊಳ್ಳಬಹುದಾದ ನಿರ್ಧಾರದ ಮೇಲೆ ನೆಟ್ಟಿದೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ ಹೊರತಾಗಿಯೂ ಕುಕಿಂಗ್ ವಿಡಿಯೋ ಯೂಟ್ಯೂಬ್ ಚಾನೆಲ್ ಆರಂಭಿಸಿದ ಪ್ರಿಯಾಮಣಿ