Team India Test Captain: ಈ ಆಟಗಾರನಿಗೆ ಟೆಸ್ಟ್ ನಾಯಕತ್ವ ಕೊಡಲೇ ಬೇಡಿ ಎಂದ ಭಾರತದ ಮಾಜಿ ಆಟಗಾರ

Virat Kohli: ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದೇ ತಡ ಹೊಸ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಹೀಗಿರುವಾಗ ಟೀಮ್ ಇಂಡಿಯಾದ ಮಾಜಿ ಬೌಲರ್ ಮದನ್ ಲಾಲ್ ಈ ಆಟಗಾರ ಟೆಸ್ಟ್ ನಾಯಕತ್ವ ವಹಿಸುವುದು ಬೇಡ ಎಂದು ಹೇಳಿದ್ದಾರೆ.

TV9kannada Web Team

| Edited By: Vinay Bhat

Jan 17, 2022 | 12:19 PM

ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದೇ ತಡ ಹೊಸ ನಾಯಕ ಯಾರು ಎಂಬ ಪ್ರಶ್ನೆ ಎದ್ದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಮಾಜಿ ಆಟಗಾರರು ಕೆಲ ಪ್ಲೇಯರ್​ಗಳ ಹೆಸರನ್ನು ಸೂಚಿಸುತ್ತಿದ್ದಾರೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಬೌಲರ್ ಮದನ್ ಲಾಲ್ (Madan Lal) ಈ ಆಟಗಾರ ಟೆಸ್ಟ್ ನಾಯಕತ್ವ ವಹಿಸುವುದು ಬೇಡ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಈ ಸಂದರ್ಭದಲ್ಲಿ ಟೆಸ್ಟ್ ನಾಯಕತ್ವದ ಜವಾಬ್ದಾರಿ ಹೊರಲು ರೋಹಿತ್ ಶರ್ಮಾ (Rohit Sharma) ಸೂಕ್ತವಾದ ವ್ಯಕ್ತಿ. ಇವರು ಈಗಾಗಲೇ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ರಿಷಭ್ ಪಂತ್​ಗೆ ಈಗಲೇ ನಾಯಕತ್ವ ಕೊಡಬೇಡಿ. ರಾಹುಲ್ ಹಾಗೂ ಪಂತ್ ಇನ್ನಷ್ಟು ಕಲಿಯಬೇಕಿದೆ. ಅವರಿಗೆ ನಾಯಕತ್ವದಲ್ಲಿ ಅಷ್ಟೊಂದು ಅನುಭವವಿಲ್ಲ. ಸಮಯ ಕಳೆದಂತೆ ಅವರಿಗೆ ಈ ಜವಾಬ್ದಾರಿ ನೀಡಬಹುದು,” ಎಂದು ಲಾಲ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಸೀಮಿತ ಓವರ್‌ಗಳ ನಾಯಕತ್ವದಿಂದ ಕೆಳಗಿಳಿದಿದ್ದ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ಕೂಡ ತೊರೆಯುವುದಾಗಿ ಘೋಷಿಸಿದ್ದಾರೆ. ಕೊಹ್ಲಿಯ ಈ ನಿರ್ಧಾರ ಸಾಕಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಅಲ್ಲದೆ ಟೀಮ್ ಇಂಡಿಯಾವನ್ನು ಟೆಸ್ಟ್ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಮುನ್ನಡೆಸುವ ಆಟಗಾರ ಯಾರು ಎಂಬುದು ಕೂಡ ಪ್ರಶ್ನೆಯಾಗಿದೆ. ಟೀಮ್ ಇಂಡಿಯಾವನ್ನು ಟೆಸ್ಟ್ ಮಾದರಿಯಲ್ಲಿ ಮುನ್ನಡೆಸುವವರು ಯಾರು ಎಂಬ ಬಗ್ಗೆ ಬಿಸಿಸಿಐ ಮುಂದಿನ ದಿನಗಳಲ್ಲಿ ನಿರ್ಧಾರವನ್ನು ಪ್ರಕಟಿಸಲಿದೆ. ಕನಿಷ್ಟ 15 ದಿನಗಳ ನಂತರವೇ ಟೀಮ್ ಇಂಡಿಯಾದ ಟೆಸ್ಟ್ ಮಾದರಿಗೆ ನಾಯಕನ ಘೋಷಣೆಯಾಗಬಹುದು ಎನ್ನಲಾಗಿದೆ.

Virat Kohli: ನಾಯಕನಾಗಿ ವಿದಾಯದ ಟೆಸ್ಟ್ ಪಂದ್ಯ ಆಡಿ ಎಂದ ಬಿಸಿಸಿಐಗೆ ಕೊಹ್ಲಿ ಹೇಳಿದ್ದೇನು ನೋಡಿ

South Africa vs India: ಮುಂದಿನ ತಿಂಗಳು ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದ ಹರ್ಭಜನ್ ಸಿಂಗ್

Follow us on

Click on your DTH Provider to Add TV9 Kannada