AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

South Africa vs India: ಮುಂದಿನ ತಿಂಗಳು ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದ ಹರ್ಭಜನ್ ಸಿಂಗ್

Harbhajan Singh: ಭಾರತ ಕ್ರಿಕೆಟ್ ತಂಡ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಇದು ಫೆಬ್ರವರಿ 25 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈವೇಳೆ ಟೀಮ್ ಇಂಡಿಯಾದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ ಎಂಬುದು ಹರ್ಭಜನ್ ಸಿಂಗ್ ಮಾತು.

South Africa vs India: ಮುಂದಿನ ತಿಂಗಳು ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದ ಹರ್ಭಜನ್ ಸಿಂಗ್
Team India
TV9 Web
| Updated By: Vinay Bhat|

Updated on: Jan 17, 2022 | 9:48 AM

Share

ಕಳೆದ ಒಂದೆರಡು ತಿಂಗಳುಗಳಿಂದ ಭಾರತೀಯ ಕ್ರಿಕೆಟ್ ರಂಗದಲ್ಲಿ ಬಹುದೊಡ್ಡ ಬದಲಾವಣೆಗಳಾಗುತ್ತಿವೆ. ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿಯ (Virat Kohli) ಕ್ಯಾಪ್ಟೆನ್ಸಿ ಯುಗ ಅಂತ್ಯವಾಗಿದೆ. ಅದರಲ್ಲೂ ಸದ್ದಿಲ್ಲದೆ ಟೆಸ್ಟ್ ಕ್ರಿಕೆಟ್​ ನಾಯಕತ್ವಕ್ಕೆ ಹಠಾತ್ ವಿದಾಯ ಹೇಳಿದ್ದು ದೊಡ್ಡ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಸೀಮಿತ ಓವರ್​ಗಳ ನಾಯಕನಾಗಿ ರೋಹಿತ್ ಶರ್ಮಾ ಆಯ್ಕೆಯಾಗಿದ್ದರೆ, ಟೆಸ್ಟ್ ತಂಡಕ್ಕೆ ನೂತನ ನಾಯಕನ ಹೆಸರು ಇನ್ನೂ ಘೋಷಣೆ ಆಗಿಲ್ಲ. ಈ ಪಟ್ಟಕ್ಕೆ ಕೆಎಲ್ ರಾಹುಲ್, ರೋಹಿತ್ ಶರ್ಮಾ, ರಿಷಭ್ ಪಂತ್ ಹೆಸರು ಮೇಲ್ನೋಟಕ್ಕೆ ಕೇಳಿಬರುತ್ತಿದೆ. ಹೀಗಿರುವಾಗ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಮುಂದಿನ ತಿಂಗಳು ಫೆಬ್ರವರಿಯಲ್ಲಿ ಭಾರತ ತಂಡದಲ್ಲಿ ಇನ್ನಷ್ಟು ಬದಲಾವಣೆ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಪ್ರಮುಖವಾಗಿ ಮೂವರು ಸ್ಟಾರ್ ಆಟಗಾರರು ತಂಡದಿಂದ ಹೊರಬೀಳಲಿದ್ದಾರೆ ಎಂದು ಹೇಳಿದ್ದಾರೆ.

ಭಾರತ ಕ್ರಿಕೆಟ್ ತಂಡ ತನ್ನ ಮುಂದಿನ ಟೆಸ್ಟ್ ಸರಣಿಯನ್ನು ಶ್ರೀಲಂಕಾ ವಿರುದ್ಧ ಆಡಲಿದೆ. ಇದು ಫೆಬ್ರವರಿ 25 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಈವೇಳೆ ಟೀಮ್ ಇಂಡಿಯಾದಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ ಎಂಬುದು ಹರ್ಭಜನ್ ಮಾತು. ಭಾರತ ಟೆಸ್ಟ್ ತಂಡದ ಆರಂಭಿಕ ಮಯಾಂಕ್ ಅಗರ್ವಾಲ್ ಮುಂದಿನ ಟೆಸ್ಟ್​ನಲ್ಲಿ ಸ್ಥಾನ ಪಡೆದುಕೊಳ್ಳುವುದು ಅನುಮಾನ ಎಂದು ಇವರು ಹೇಳಿದ್ದಾರೆ.

“ಮಯಾಂಕ್ ಅಗರ್ವಾಲ್ ಕಳೆದ ಆರು ಇನ್ನಿಂಗ್ಸ್​ಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ. ಇದು ಹೊಸ ಆಟಗಾರನ ಆಗಮನಕ್ಕೆ ದಾರಿಯಾಗಿದೆ. ಶುಭ್ಮನ್ ಗಿಲ್ ಅಥವಾ ಪೃಥ್ವಿ ಶಾ ಅವರನ್ನು ಮುಂದಿನ ಟೆಸ್ಟ್​ ವೇಳೆ ಮಯಾಂಕ್ ಜಾಗದಲ್ಲಿ ಕಾಣಬಹುದು. ಒಬ್ಬ ಆಟಗಾರನಿಗೆ ತನ್ನ ಸಾಮರ್ಥ್ಯ ತೋರ್ಪಡಿಸಲು 6 ಇನ್ನಿಂಗ್ಸ್​ಗಳು ಸಾಕು. ಆದರೆ, ಮಯಾಂಕ್ ಇದರಲ್ಲಿ ವಿಫಲರಾಗಿದ್ದಾರೆ,” ಎಂದು ಹರ್ಭಜನ್ ಹೇಳಿದ್ದಾರೆ. ಮಯಾಂಕ್ ಕಳೆದ 6 ಇನ್ನಿಂಗ್ಸ್​ಗಳಲ್ಲಿ ಗಳಿಸಿರುವುದು ಕೇವಲ 135 ರನ್ ಮಾತ್ರ.

ಇದೇವೇಳೆ ಹಿರಿಯ ಅನುಭವಿ ಆಟಗಾರರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯಾ ರಹಾನೆ ಬಗ್ಗೆ ಕೂಡ ಹರ್ಭಜನ್ ಮಾತನಾಡಿದ್ದು, ತಂಡದಲ್ಲಿ ಅವರು ಸ್ಥಾನ ಉಳಿಸಿಕೊಳ್ಳುವುದು ಅನುಮಾನ ಎಂದು ಹೇಳಿದ್ದಾರೆ. “ಜೊಹಾನ್ಸ್​ಬರ್ಗ್​ನಲ್ಲಿ ರಹಾನೆ-ಪೂಜಾರ 50 ರನ್​ಗಳ ಗಡಿ ತಲುಪಿರುವುದು ನಿಜ. ಆದರೆ, ಅವರ ಅನುಭವಕ್ಕೆ ಈ ರನ್ ಸಾಲದು. ಸೂರ್ಯಕುಮಾರ್ ಯಾದವ್ ಮತ್ತು ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶ್ರೇಯಸ್ ಅಯ್ಯರ್ ಇವರಿಬ್ಬರ ಸ್ಥಾನ ತುಂಬಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ನನಗನಿಸುವ ಪ್ರಕಾರ ರಹಾನೆ-ಪೂಜಾರ ಕಳಪೆ ಆಟ ಸೂಯರ್ಕುಮಾರ್-ಅಯ್ಯರ್​ಗೆ ಭಾರತ ಟೆಸ್ಟ್ ತಂಡಕ್ಕೆ  ಬಾಗಿಲು ತೆರೆದಂತೆ ಕಾಣಿಸುತ್ತದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ ಇರುವ ಭಾರತ ತಂಡ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಮೂರು ಪಂದ್ಯ ಏಕದಿನ ಸರಣಿ ಮುಗಿದ ನಂತರ ವೆಸ್ಟ್​ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಮತ್ತು ಮೂರು ಟಿ20 ಪಂದ್ಯವನ್ನು ಆಡಲಿದೆ. ಬಳಿಕ ಭಾರತ ತಂಡ ಶ್ರೀಲಂಕಾ ಎದುರು ಫೆಬ್ರವರಿ 25ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಸರಣಿಯ ಎರಡನೇ ಟೆಸ್ಟ್‌ ಮೊಹಾಲಿಯಲ್ಲಿ (ಮಾರ್ಚ್ 5ರಿಂದ) ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿ ನಡೆಯಲಿದೆ.

Virat Kohli: ಕೊಹ್ಲಿ ನಾಯಕತ್ವದಡಿಯಲ್ಲಿ ಏಕದಿನ, ಟಿ20, ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದವರು ಯಾರೆಲ್ಲ ಗೊತ್ತೇ?

PKL 8: ರೋಚಕ ಟೈನಲ್ಲಿ ಅಂತ್ಯಕಂಡ ತಮಿಳ್ ತಲೈವಾಸ್-ಜೈಪುರ್ ಪಿಂಕ್ ಪ್ಯಾಂಥರ್ಸ್ ಪಂದ್ಯ