Sign In

By signing in or creating an account, you agree with Associated Broadcasting Company's Terms & Conditions and Privacy Policy.

PKL 8: ರೋಚಕ ಟೈನಲ್ಲಿ ಅಂತ್ಯಕಂಡ ತಮಿಳ್ ತಲೈವಾಸ್-ಜೈಪುರ್ ಪಿಂಕ್ ಪ್ಯಾಂಥರ್ಸ್ ಪಂದ್ಯ

Pro Kabaddi League: ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ತಮಿಳ್ ತಲೈವಾಸ್ ತಂಡದ ಡಿಫೆಂಡರ್ ಗಳು ಭರ್ಜರಿ ಆಟವಾಡಿದ್ದರಿಂದ ಉಭಯ ತಂಡಗಳ ನಡುವಿನ ಪಂದ್ಯ 31-31 ರಿಂದ ಟೈ ಫಲಿತಾಂಶ ಕಂಡಿತು.

PKL 8: ರೋಚಕ ಟೈನಲ್ಲಿ ಅಂತ್ಯಕಂಡ ತಮಿಳ್ ತಲೈವಾಸ್-ಜೈಪುರ್ ಪಿಂಕ್ ಪ್ಯಾಂಥರ್ಸ್ ಪಂದ್ಯ
Jaipur Pink Panthers vs Tamil Thalaivas
Follow us
TV9 Web
| Updated By: Vinay Bhat

Updated on: Jan 17, 2022 | 7:22 AM

8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ (Pro Kabaddi League) ಭಾನುವಾರ ನಡೆದ ಎರಡು ಪಂದ್ಯ ರೋಚಕತೆಯಿಂದ ಕೂಡಿತ್ತು. ಮೂರು ಬಾರಿಯ ಚಾಂಪಿಯನ್ಸ್ ಪಟ್ನಾ ಪೈರೇಟ್ಸ್ ತಂಡ 38-31 ಅಂಕಗಳಿಂದ ಬೆಂಗಳೂರು ಬುಲ್ಸ್ ಅನ್ನು ಸೋಲಿಸಿದರೆ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಜೈಪುರ್ ಪಿಂಕ್ ಪ್ಯಾಂಥರ್ಸ್ (Jaipur Pink Panthers vs Tamil Thalaivas) ಸಮಾನ ಅಂಕ ಹಂಚಿಕೊಂಡ ಪರಿಣಾಮ ಪಂದ್ಯ ರೋಚಕ ಟೈನಲ್ಲಿ ಅಂತ್ಯಕಂಡಿತು. ಡ್ರಾ ಮಾಡಿಕೊಂಡು ತಲಾ 3 ಅಂಕ ಗಳಿಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್ ಮತ್ತು ತಮಿಳ್ ತಲೈವಾಸ್ ತಂಡಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನಕ್ಕೆ ಏರಿವೆ. ಇತ್ತ ಬೆಂಗಳೂರು ಬುಲ್ಸ್ ಸೋಲುಂಡರೂ ಅಂಕಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡಿದೆ.

ಜೈಪುರ ಪಿಂಕ್ ಪ್ಯಾಂಥರ್ಸ್ ಹಾಗೂ ತಮಿಳ್ ತಲೈವಾಸ್ ತಂಡದ ಡಿಫೆಂಡರ್ ಗಳು ಭರ್ಜರಿ ಆಟವಾಡಿದ್ದರಿಂದ ಉಭಯ ತಂಡಗಳ ನಡುವಿನ ಪಂದ್ಯ 31-31 ರಿಂದ ಟೈ ಫಲಿತಾಂಶ ಕಂಡಿತು. ತಲೈವಾಸ್ ತಂಡದ ನಾಯಕ ಸುರ್ಜೀತ್ ಸಿಂಗ್ ಹಾಗೂ ಜೈಪುರದ ಸಂದೀಪ್ ಧುಲ್ ಪಂದ್ಯದಲ್ಲಿ ಹೈ ಫೈವ್ ಸಾಧನೆ ಮಾಡಿದರು.

ಆರಂಭದಿಂದಲೇ ಭಾರಿ ಹೋರಾಟ ನಡೆದ ಪಂದ್ಯದ ಮೊದಲಾರ್ಧದ ಮುಕ್ತಾಯದ ವೇಳೆಗೆ ಜೈಪುರ 17-13ರಿಂದ ಮುಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ 18 ಪಾಯಿಂಟ್ಸ್ ಗಳಿಸಿದ ತಲೈವಾಸ್ ತಂಡವು ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಜೈಪುರ ತಂಡದ ಪರ ರೇಡರ್‌ ಅರ್ಜುನ್ ದೇಸ್ವಾಲ್‌ ಮತ್ತು ನವೀನ್ ತಲಾ ಆರು ಪಾಯಿಂಟ್ಸ್ ಕಲೆಹಾಕಿ ಮಿಂಚಿದರು. ಡಿಫೆಂಡರ್‌ ಸಂದೀಪ್ ಧುಳ್ ಕೂಡ ಐದು ಪಾಯಿಂಟ್ಸ್ ಗಳಿಸಿದರು. ಜೈಪುರಕ್ಕೆ ಇದು ಮೊದಲ ಟೈ ಫ‌ಲಿತಾಂಶವಾದರೆ, ತಲೈವಾಸ್‌ಗೆ ಐದನೆಯದು. ತಮಿಳ್‌ ಕೊನೆಯ ಹಂತದಲ್ಲಿ 2 ಅಂಕಗಳ ಮುನ್ನಡೆಯಲ್ಲಿತ್ತು. ಅಂತಿಮ ಡು ಆರ್‌ ಡೈನಲ್ಲಿ ರೈಡ್‌ ಮಾಡಿದ ಮನ್‌ಜಿàತ್‌ ಸೂಪರ್‌ ಟ್ಯಾಕಲ್‌ಗೆ ಸಿಲುಕಿದ್ದರಿಂದ ಜೈಪುರಕ್ಕೆ 2 ಅಂಕ ಸಿಕ್ಕಿತು. ಪಂದ್ಯ ಸಮಬಲಗೊಂಡಿತು.

ತಮಿಳ್ ತಲೈವಾಸ್ ತಂಡದ ಡಿಫೆಂಡಿಂಗ್ ಜೋಡಿ ಸುರ್ಜೀತ್ ಸಿಂಗ್ ಹಾಗೂ ಸಾಗರ್ ಬಲಾಢ್ಯವಾಗಿ ಕಂಡಿದ್ದರಿಂದ ಜೈಪುರದ ರೈಡರ್ ಅರ್ಜುನ್ ದೇಶ್ವಾಲ್, ಅಂಕ ಸಂಪಾದನೆ ಮಾಡುವ ಅವಕಾಶವನ್ನೇ ಪಡೆದಿರಲಿಲ್ಲ. ಇನ್ನೊಂದೆಡೆ ಜೈಪುರ ಪಿಂಕ್ ಪ್ಯಾಂಥರ್ಸ್ ಕೂಡ ಸಂದೀಪ್ ಧುಲ್ ಹಾಗೂ ಸಾಹುಲ್ ಕುಮಾರ್ ಸಾರಥ್ಯದಲ್ಲಿ ಅದ್ಭುತ ರಕ್ಷಣಾ ಕೋಟೆಯನ್ನು ರಚಿಸಿತ್ತು. ಆದರೆ, 7ನೇ ನಿಮಿಷದಲ್ಲಿ ಅನುಭವಿ ರೈಡರ್ ಕೆ. ಪ್ರಪಂಜನ್ ಭುಜದ ಗಾಯಕ್ಕೆ ತುತ್ತಾದ ಬಳಿಕ ಪಂದ್ಯದ ವೇಗದಲ್ಲಿ ಬದಲಾವಣೆಯಾಯಿತು.

ಇನ್ನು ನಿನ್ನೆ ನಡೆದ ಮತ್ತೊಂದು ಪಂದ್ಯದಲ್ಲಿ ಹ್ಯಾಟ್ರಿಕ್‌ ಗೆಲುವಿನ ಇರಾದೆಯೊಂದಿಗೆ ಆಡಲಿಳಿದ ಬೆಂಗಳೂರು ಬುಲ್ಸ್‌ ಕನ್ನಡಿಗ ಪ್ರಶಾಂತ್‌ ಕುಮಾರ್‌ ರೈ ಸಾರಥ್ಯದ ಪಾಟ್ನಾ ಪೈರೇಟ್ಸ್‌ ವಿರುದ್ಧ 38-31ಅಂತರದಿಂದ ಸೋಲನುಭವಿಸಿತು. ಬೆಂಗಳೂರು ಪರ ಮಹೇಂದರ್ ಸಿಂಗ್‌ ಹಾಗೂ ಸೌರಭ್ ನಂದಾಲ್ ತಲಾ ಆರು ಪಾಯಿಂಟ್ಸ್ ಗಳಿಸಿದರು. ಪಟ್ನಾ ಮೊದಲಾರ್ಧದಲ್ಲೇ 20-16ರಿಂದ ಮುನ್ನಡೆ ಸಾಧಿಸಿತ್ತು. ಬಳಿಕವೂ ಪಾರಮ್ಯ ಮೆರೆದು ಗೆಲುವು ಒಲಿಸಿಕೊಂಡಿತು. ಪಂದ್ಯ ಸೋತರೂ ಬುಲ್ಸ್ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯಿತು. ಪಟ್ನಾ ಎರಡನೇ ಸ್ಥಾನದಲ್ಲಿದೆ.

Kapil Dev: ವಿರಾಟ್ ಅಹಂ ಬಿಟ್ಟು ಹೊಸ ನಾಯಕನ ಅಡಿಯಲ್ಲಿ ಆಡಬೇಕು! ಕೊಹ್ಲಿ ಬಗ್ಗೆ ಕಪಿಲ್ ದೇವ್ ಮಾತು

ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
ಕಾಂಗ್ರೆಸ್ ಮುಖಂಡರು ಎದುರಾದಾಗ ಮಾತಾಡದೆ ವಾಪಸ್ಸಾದ ವಿಜಯೇಂದ್ರ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ