ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ ಹೊರತಾಗಿಯೂ ಕುಕಿಂಗ್ ವಿಡಿಯೋ ಯೂಟ್ಯೂಬ್​ ಚಾನೆಲ್​ ಆರಂಭಿಸಿದ ಪ್ರಿಯಾಮಣಿ

ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ ಹೊರತಾಗಿಯೂ ಕುಕಿಂಗ್ ವಿಡಿಯೋ ಯೂಟ್ಯೂಬ್​ ಚಾನೆಲ್​ ಆರಂಭಿಸಿದ ಪ್ರಿಯಾಮಣಿ
ಪ್ರಿಯಾಮಣಿ

ರಾಜ್​ ಮತ್ತು ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸೀರಿಸ್​ ಎರಡು ಪಾರ್ಟ್​ಗಳಲ್ಲಿ ರಿಲೀಸ್​ ಆಗಿದೆ. ಇದರಲ್ಲಿ ಪ್ರಿಯಾಮಣಿ ಅವರು ಸುಚಿತ್ರಾ ಹೆಸರಿನ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ಈ ವೆಬ್​ ಸೀರಿಸ್​ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.

TV9kannada Web Team

| Edited By: Rajesh Duggumane

Jan 16, 2022 | 5:01 PM


ಆ್ಯಂಡ್ರಾಯ್ಡ್​ ಮೊಬೈಲ್​ ಬಳಕೆ ಹೆಚ್ಚಳ, ಡೇಟಾ ಕ್ರಾಂತಿ ಆದ ನಂತರದಲ್ಲಿ ಯೂಟ್ಯೂಬ್​ ಬಳಕೆ ಹೆಚ್ಚಿದೆ. ಹೀಗಾಗಿ, ಈಗ ಅನೇಕರು ಯೂಟ್ಯೂಬ್​ ಚಾನೆಲ್​ (YouTube Channel) ಹೊಂದಿದ್ದಾರೆ. ವಿವಿಧ ರೀತಿಯ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಇದರಲ್ಲಿ ಅಡುಗೆ ಯೂಟ್ಯೂಬ್ ಚಾನೆಲ್​ ಕೂಡ ತುಂಬಾನೇ ಖ್ಯಾತಿ ಪಡೆದುಕೊಂಡಿದೆ.  ಟೈಮ್​ ಪಾಸ್​ ಜತೆಗೆ ಮನೆಯಲ್ಲೇ ಇದ್ದುಕೊಂಡು ಹಣ ಮಾಡೋಕೆ ಇದು ಉತ್ತಮ ಮಾರ್ಗ. ಈಗ ಪ್ರಿಯಾಮಣಿ (Priyamani) ಅವರು ಕೂಡ ಯೂಟ್ಯೂಬ್​ ಚಾನಲ್ ಆರಂಭಿಸಿದ್ದಾರೆ. ಒಂದು ಲಕ್ಷ ಹಿಂಬಾಲಕರು ಸಿಕ್ಕರು ಎಂದು ಸಂಭ್ರಮಿಸಿದ್ದಾರೆ. ಹಾಗಾದರೆ ಏನಿದು ಸಮಾಚಾರ? ಪ್ರಿಯಾಮಣಿ ಯೂಟ್ಯೂಬ್​ ಚಾನೆಲ್​ ಆರಂಭಿಸಿದ್ದು ಏಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಜ್​ ಮತ್ತು ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್​’ ವೆಬ್​ ಸೀರಿಸ್​ ಎರಡು ಪಾರ್ಟ್​ಗಳಲ್ಲಿ ರಿಲೀಸ್​ ಆಗಿದೆ. ಇದರಲ್ಲಿ ಪ್ರಿಯಾಮಣಿ ಅವರು ಸುಚಿತ್ರಾ ಹೆಸರಿನ ಗೃಹಿಣಿಯಾಗಿ ಕಾಣಿಸಿಕೊಂಡಿದ್ದರು. ಈ ವೆಬ್​ ಸೀರಿಸ್​ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಇಷ್ಟೆಲ್ಲ ಜನಪ್ರಿಯತೆ ಸಿಕ್ಕ ಅವರು ಯೂಟ್ಯೂಬ್​ ಚಾನೆಲ್​ ಶುರು ಮಾಡಿದ್ದಾರೆ. ಹಾಗಂತ ಇದು ನಿಜ ಜೀವನದಲ್ಲಿ ಅಲ್ಲ. ಬದಲಿಗೆ ಸಿನಿಮಾದಲ್ಲಿ.

ಪ್ರಿಯಾಮಣಿ ‘ಭಾಮ ಕಲಾಪಂ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಒಟಿಟಿ ಪ್ಲಾಟ್​ಫಾರ್ಮ್​ ‘ಆಹಾ’ದಲ್ಲಿ ಈ ಚಿತ್ರ ರಿಲೀಸ್​ ಆಗುತ್ತಿದೆ. ಇದರ ಫಸ್ಟ್​ ಗ್ಲಿಂಪ್ಸ್​ ವಿಡಿಯೋವನ್ನು ರಿಲೀಸ್​ ಮಾಡಲಾಗಿದೆ. ಈ ವಿಡಿಯೋದಲ್ಲಿ ಪ್ರಿಯಾಮಣಿ ಯೂಟ್ಯೂಬರ್​ ಆಗಿ ಕಾಣಿಸಿಕೊಂಡಿದ್ದಾರೆ.

‘ಪ್ರತೀ ವಾರ ಒಂದು ಅಡುಗೆ ಮಾಡಬೇಕು. ಆದರೆ, ಈ ವಾರ ಮಾಡುತ್ತಿರುವ ಅಡುಗೆ ತುಂಬಾನೇ ಸ್ಪೆಷಲ್​. ಈ ಅಡುಗೆಯನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸ್ವಲ್ಪವೂ ನನಗೆ ಮಾಹಿತಿ ಇಲ್ಲ’ ಎಂದು ಅವರು ಫಸ್ಟ್​ ಗ್ಲಿಂಪ್ಸ್​ನಲ್ಲಿ ಹೇಳಿದ್ದಾರೆ. ಯೂಟ್ಯೂಬ್​ ಚಾನೆಲ್​ಗೆ 1 ಲಕ್ಷ ಚಂದಾದಾರರು ಆಗಿದ್ದಾರೆ ಎನ್ನುವ ಧ್ವನಿ ಬರುತ್ತದೆ. ಈ ಸಿನಿಮಾ ಕೇವಲ ಅಡುಗೆ ಬಗ್ಗೆ ಅಥವಾ ಯೂಟ್ಯೂಬ್​​ ಬಗ್ಗೆ ಮಾತ್ರವಲ್ಲ ಎನ್ನುವ ಅಭಿಪ್ರಾಯವನ್ನು ಅನೇಕರು ಹೊರಹಾಕಿದ್ದಾರೆ. ಸದ್ಯ, ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಇದನ್ನೂ ಓದಿ: Priyamani: ಸ್ಯಾಂಡಲ್​ವುಡ್​ಗೆ ಭರ್ಜರಿಯಾಗಿ ಕಮ್​ಬ್ಯಾಕ್ ಮಾಡಿದ ಪ್ರಿಯಾಮಣಿ; ಡಿಆರ್56 ಟೀಸರ್ ಇಲ್ಲಿದೆ

‘ನೀವು ಈಗಲೂ ಸೂಪರ್​ ಹಾಟ್​’; ಪ್ರಿಯಾಮಣಿ ಬಗ್ಗೆ ಅಲ್ಲು ಅರ್ಜುನ್​ ಮೆಚ್ಚುಗೆಯ ಮಾತು

Follow us on

Related Stories

Most Read Stories

Click on your DTH Provider to Add TV9 Kannada