‘ನೀವು ಈಗಲೂ ಸೂಪರ್ ಹಾಟ್’; ಪ್ರಿಯಾಮಣಿ ಬಗ್ಗೆ ಅಲ್ಲು ಅರ್ಜುನ್ ಮೆಚ್ಚುಗೆಯ ಮಾತು
ಅಲ್ಲು ಅರ್ಜುನ್ ಯಾರನ್ನು ಅಷ್ಟಾಗಿ ಹೊಗಳುವುದಿಲ್ಲ. ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು ಎಂದರೆ ಅದಕ್ಕೆ ಕಾರಣ ಇರುತ್ತದೆ. ಈಗ ಅವರು ಪ್ರಿಯಾಮಣಿಗೆ ತುಂಬಾನೇ ಹಾಟ್ ಆಗಿದ್ದೀರಿ ಎಂದು ಹೇಳಿದ್ದಾರೆ.
ನಟಿ ಪ್ರಿಯಾಮಣಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ಹಲವು ಸ್ಟಾರ್ ನಟರ ಜತೆ ನಟಿಸಿದ ಅನುಭವ ಅವರಿಗಿದೆ. ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರಿಸ್ನಲ್ಲಿ ನಟಿಸುವ ಮೂಲಕ ಅವರು ಖ್ಯಾತಿ ಹೆಚ್ಚಿಸಿಕೊಂಡರು. ಅಲ್ಲು ಅರ್ಜುನ್ ಅವರು ಪ್ರಿಯಾಮಣಿ ಬಗ್ಗೆ ಮಾಡಿದ ಕಮೆಂಟ್ ಒಂದು ಈಗ ಸಾಕಷ್ಟು ವೈರಲ್ ಆಗುತ್ತಿದೆ. ಅಷ್ಟಕ್ಕೂ ಅವರು ಹೇಳಿದ್ದೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಅಲ್ಲು ಅರ್ಜುನ್ ಯಾರನ್ನು ಅಷ್ಟಾಗಿ ಹೊಗಳುವುದಿಲ್ಲ. ಅವರು ಮೆಚ್ಚುಗೆಯ ಮಾತುಗಳನ್ನು ಆಡಿದರು ಎಂದರೆ ಅದಕ್ಕೆ ಕಾರಣ ಇರುತ್ತದೆ. ಈಗ ಅವರು ಪ್ರಿಯಾಮಣಿಗೆ ತುಂಬಾನೇ ಹಾಟ್ ಆಗಿದ್ದೀರಿ ಎಂದು ಹೇಳಿದ್ದಾರೆ. ಪ್ರಿಯಾಮಣಿ ಈಗ ತೆಳ್ಳಗಾಗಿದ್ದಾರೆ. ಈ ಕಾರಣಕ್ಕೆ ಅವರನ್ನು ಅಲ್ಲು ಅರ್ಜುನ್ ಪ್ರಶಂಸಿದ್ದಾರೆ.
ತೆಲುಗಿನಲ್ಲಿ ‘ಢೀ’ ಹೆಸರಿನ ಡ್ಯಾನ್ಸ್ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಈ ಶೋಗೆ ಪ್ರಿಯಾಮಣಿ ಹಾಗೂ ಅಲ್ಲು ಅರ್ಜುನ್ ಅತಿಥಿಗಳಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಮಣಿ, ‘ಅಲ್ಲು ಅರ್ಜುನ್ ಅವರ ಜತೆ ನನಗೆ ಕೆಲಸ ಮಾಡೋಕೆ ಸಾಧ್ಯವಾಗಿಲ್ಲ’ ಎಂದರು. ಇದಕ್ಕೆ ಬನ್ನಿ ಉತ್ತರ ನೀಡಿದ್ದಾರೆ. ‘ನಾವು ಒಟ್ಟಾಗಿ ನಟಿಸಿಲ್ಲ ಎಂದು ಹೇಳಬೇಡಿ. ಇಬ್ಬರೂ ಒಟ್ಟಾಗಿ ನಟಿಸೋಕೆ ಇನ್ನೂ ಕಾಲಾವಕಾಶ ಇದೆ. ನೀವು ತೂಕ ಇಳಿಸಿಕೊಂಡಿದ್ದೀರಿ. ಈಗಲೂ ಸೂಪರ್ ಹಾಟ್ ಆಗಿ ಕಾಣಿಸುತ್ತಿದ್ದೀರಾ. ಹೀಗಾಗಿ, ಇಬ್ಬರೂ ಒಟ್ಟಾಗಿ ನಟಿಸೋಕೆ ಇನ್ನೂ ಕಾಲಾವಕಾಶ ಇದೆ’ ಎಂದರು ಅಲ್ಲು ಅರ್ಜುನ್. ಅವರ ಕಡೆಯಿಂದ ಬಂದ ಕಮೆಂಟ್ ನೋಡಿ ಪ್ರಿಯಾಮಣಿ ಸಖತ್ ಖುಷಿಯಿಂದ ನಾಚಿದರು.
ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯ ಮೂಲಕ ಪ್ರಿಯಾಮಣಿ ಅವರು ಸಾಕಷ್ಟು ಹೆಸರು ಮಾಡಿದ್ದಾರೆ. ಈ ವೆಬ್ ಸರಣಿಯಲ್ಲಿ ಮನೋಜ್ ಭಾಜಪೇಯ್ ಮತ್ತು ಪ್ರಿಯಾಮಣಿ ಅವರು ಶ್ರೀಕಾಂತ್ ತಿವಾರಿ-ಸುಚಿತ್ರಾ ಐಯ್ಯರ್ ಎಂಬ ಗಂಡ-ಹೆಂಡತಿಯ ಪಾತ್ರ ಮಾಡಿದ್ದರು. ಸುಚಿ ತನ್ನ ಸ್ನೇಹಿತನ ಜೊತೆಗೆ ಹೊಂದಿರುವ ಆಪ್ತತೆಯ ಕಾರಣದಿಂದ ಶ್ರೀಕಾಂತ್ ತಿವಾರಿಯ ಸಂಸಾರದಲ್ಲಿ ಬಿರುಕು ಉಂಟಾಗುತ್ತದೆ. ಇದು ವೆಬ್ ಸೀರಿಸ್ ಕಥೆ. ಈ ಸರಣಿ ರಿಲೀಸ್ ಆದ ಬೆನ್ನಲ್ಲೇ ಮುಸ್ತಫಾ ರಾಜ್ ಅವರ ಜತೆಗಿನ ವೈವಾಹಿಕ ಜೀವನಕ್ಕೆ ಪ್ರಿಯಾಮಣಿ ಅಂತ್ಯ ಹಾಡಲಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದ್ದವು. ಈ ಬಗ್ಗೆ ಪ್ರಿಯಾಮಣಿ ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದ್ದರು.
ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಅಲ್ಲು ಅರ್ಜುನ್ ಸಹಾಯಕ್ಕೆ ನಿಂತ ‘ಕೆಜಿಎಫ್ 2’ ನಟಿ ರವೀನಾ ಟಂಡನ್ ಕುಟುಂಬ
ನೊಬೆಲ್ ವಿಶ್ವ ದಾಖಲೆ ಪಟ್ಟಿ ಸೇರಿದ ಅಲ್ಲು ಅರ್ಜುನ್ ಮಗಳು ಅಲ್ಲು ಅರ್ಹಾ ಸಾಧನೆ
Published On - 4:34 pm, Fri, 3 December 21