ಕೆಜಿಎಫ್ 2 ಚಿತ್ರದಲ್ಲಿ ನಾನು ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿಲ್ಲವೆಂದ ನಟಿ ರವೀನಾ ಟಂಡನ್

ಕೆಜಿಎಫ್ 2 ಚಿತ್ರದಲ್ಲಿ ನಾನು ಇಂದಿರಾ ಗಾಂಧಿ ಪಾತ್ರ ನಿರ್ವಹಿಸುತ್ತಿಲ್ಲವೆಂದ ನಟಿ ರವೀನಾ ಟಂಡನ್
ಕೆಜಿಫ್ 2 ಚಿತ್ರದಲ್ಲಿ ಪ್ರಧಾನ ಮಂತ್ರಿ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ರವೀನಾ ಟಂಡನ್

ಶೀಘ್ರದಲ್ಲೇ ಕೆಜಿಎಫ್ 2 ಚಿತ್ರದ ಮೂಲಕ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮ ಕನ್ನಡಕ್ಕೆ ಪಾದಾರ್ಪಣೆ ಮಾಡಿಲಿದ್ದಾರೆ ನಟಿ ರವೀನಾ ಟಂಡನ್.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jan 19, 2022 | 1:38 PM

ರವೀನಾ ಟಂಡನ್ ತನ್ನ ಇತ್ತೀಚಿಗೆ ನೆಟ್‌ಫ್ಲಿಕ್ರ್ಸ್​ನಲ್ಲಿ ಬಿಡುಗಡೆಯಾದ ಅರಣ್ಯಕ್‌ ವೆಬ್ ಸರಣಿಯ ಯಶಸ್ಸಿನಲ್ಲಿ ಮುಳುಗಿದ್ದಾರೆ. ಥ್ರಿಲ್ಲರ್ ಚಿತ್ರಯಿದಾಗಿದ್ದು, ಪೊಲೀಸ್ ಅಧಿಕಾರಿಯ ಪಾತ್ರವನ್ನು ನಟಿ ರವೀನಾ ಟಂಡನ್ ನಿರ್ವಹಿಸಿದ್ದಾರೆ. ಶೀಘ್ರದಲ್ಲೇ ಕೆಜಿಎಫ್ 2 ನೊಂದಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ಮತ್ತೊಮ್ಮ ಕನ್ನಡಕ್ಕೆ ಪಾದಾರ್ಪಣೆ ಮಾಡಿಲಿದ್ದಾರೆ. ಯಶ್ ಅಭಿನಯದ ಚಿತ್ರದಲ್ಲಿ ಟಂಡನ್ ಪ್ರಧಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವರ ಪಾತ್ರವು ದಿವಂಗತ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಮಾದರಿಯಲ್ಲಿದೆ ಎಂದು ಈ ಹಿಂದೆ ವರದಿಯಾಗಿತ್ತು. ಇದನ್ನು ನಿರಾಕರಿಸಿದ ರವೀನಾ ಟಂಡನ್ ಈ ಚಿತ್ರದಲ್ಲಿ ಇಂದಿರಾ ಗಾಂಧಿಜಿ ಬಗ್ಗೆ ಏನೂ ಇಲ್ಲ. ನನ್ನ ನೋಟ ಅಥವಾ ನನ್ನ ಪಾತ್ರ ಅವರಿಂದ ಸ್ಪೂರ್ತಿ ಪಡೆದಿಲ್ಲ. ನಾವು ಅಂತಹ ಯಾವುದೇ ಉಲ್ಲೇಖಗಳನ್ನು ತೆಗೆದುಕೊಂಡಿಲ್ಲ. ಈ ಚಿತ್ರವು 80 ರ ದಶಕದ ಕಥೆಯನ್ನ ಆಧಾರಿತವಾಗಿದ್ದು, ಚಿತ್ರದಲ್ಲಿ ನಾನು ಪ್ರಧಾನ ಮಂತ್ರಿಯಾಗಿ ನಟಿಸುತ್ತಿದ್ದೇನೆ. ಅದನ್ನ ಹೊರತು ಪಡಿಸಿ ನಾನು ಚಿತ್ರದಲ್ಲಿ ಇಂದಿರಾ ಗಾಂಧಿಜಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ಅನೇಕ ಊಹಾಪೋಹಗಳು ಕೇಳಿಬರುತ್ತಿವೆ ಎಂದರು.

ಕೆಜಿಎಫ್ 1 ಭಾಗವು ಯಶಸ್ಸಿನ ನಂತರ ರವೀನಾ ಟಂಡನ್ ಕೆಜಿಎಫ್ 2 ಬಿಡುಗಡೆಗಾಗಿ ಅಭಿಮಾನಿಗಳಂತೆ ಅವರು ಕೂಡ ಕಾತುರುದಿಮದ ಕಾಯುತ್ತಿದ್ದಾರಂತೆ. ನಾವು ಪ್ರಸ್ತುತ ಅತ್ಯಂತ ಅನಿರೀಕ್ಷಿತ ಪರಿಸ್ಥಿತಿಯಲ್ಲಿ ಬದುಕುತ್ತಿದ್ದೇವೆ. ಥಿಯೇಟರ್‌ಗಳು ಮತ್ತೆ ತೆರೆದಿವೆ ಮತ್ತು ಪ್ರೇಕ್ಷಕರು ಚಿತ್ರಮಂದಿರದಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಹೋಗುತ್ತಿದ್ದರು, ಆದರೆ ಹೊಸ ಅಲೆಯು ಮತ್ತೆ ಕೆಲಸಗಳನ್ನು ನಿಧಾನಗೊಳಿಸಿದೆ. ನಾನು ಕೆಜಿಎಫ್ 2 ಗಾಗಿ ಅಷ್ಟೇ ಉತ್ಸುಕಳಾಗಿದ್ದೇನೆ. ನಿರ್ದೇಶಕ ಪ್ರಶಾಂತ್ ನೀಲ್ ಅವರೊಂದಿಗೆ ಕೆಲಸ ಮಾಡುವುದು ತುಂಭಾ ಸಂತೋಷವಾಗಿದೆ. ನಟ ಯಶ್ ಉತ್ತಮ ನಟ ಮತ್ತು ಸಂಭಾವಿತ ವ್ಯಕ್ತಿ ಎಂದು ಅವರು ಹೇಳಿದರು.

ಇನ್ನೂ ಕೆಜಿಎಫ್ 2 ಚಿತ್ರದಲ್ಲಿ ನಟ ಸಂಜಯ್ ದತ್ ಕೂಡ ಇದ್ದಾರೆ. ಖಡಕ್ ಲುಕ್​ನಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ದುರದೃಷ್ಟವಶಾತ್ ಅವರೊಂದಿಗೆ ಯಾವುದೇ ದೃಶ್ಯಗಳು ಇಲ್ಲ ಎಂದು ನಟಿ ರವೀನಾ ಟಂಡನ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

ಮಾಲ್ಡೀವ್ಸ್​ ಸಮುದ್ರ ತೀರದಲ್ಲಿ ನಿಂತಿರುವ​ ಫೋಟೋ ಹಾಕಿ ಪಡ್ಡೆಗಳ ಮನಗೆದ್ದ ಪೂಜಾ ಹೆಗ್ಡೆ

Follow us on

Related Stories

Most Read Stories

Click on your DTH Provider to Add TV9 Kannada