Kannada News » Photo gallery » Salaar movie heroine Shruti Haasan new photoshoot for magazine cover page
ಶ್ರುತಿ ಹಾಸನ್ ಹೊಸ ಫೋಟೋಶೂಟ್; ಬಗೆ ಬಗೆಯಲ್ಲಿ ಪೋಸ್ ನೀಡಿದ ಕಮಲ್ ಹಾಸನ್ ಪುತ್ರಿ
Shruti Haasan Photos: ಖ್ಯಾತ ನಟಿ ಶ್ರುತಿ ಹಾಸನ್ ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಹಲವು ಬ್ರ್ಯಾಂಡ್ಗಳಿಗೆ ರೂಪದರ್ಶಿ ಆಗಿರುವ ಅವರು ಹೊಸ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.
ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಅವರು ಖಾಸಗಿ ಮ್ಯಾಗಜಿನ್ ಮುಖಪುಟಕ್ಕಾಗಿ ಪೋಸ್ ನೀಡಿದ್ದಾರೆ. ಹೊಸ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Photo Credit: Shruti Haasan instagram)
1 / 5
ಈ ಫೋಟೋಗಳು ಶ್ರುತಿ ಹಾಸನ್ ಅವರ ಅಭಿಮಾನಿಗಳ ವಲಯದಲ್ಲಿ ವೈರಲ್ ಆಗಿವೆ. ತಮ್ಮ ನೆಚ್ಚಿನ ನಟಿಯ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. (Photo Credit: Shruti Haasan instagram)
2 / 5
ಅನೇಕ ಪ್ರತಿಷ್ಠಿತ ಬ್ರ್ಯಾಂಡ್ಗಳಿಗೆ ಶ್ರುತಿ ಹಾಸನ್ ಅವರು ರಾಯಭಾರಿ ಆಗಿದ್ದಾರೆ. ಹಲವು ಜಾಹೀರಾತುಗಳಲ್ಲಿ ಅವರು ನಟಿಸುತ್ತಾರೆ. ಅದರಿಂದಲೂ ಅವರಿಗೆ ಭರ್ಜರಿ ಸಂಭಾವನೆ ಸಿಗುತ್ತದೆ. (Photo Credit: Shruti Haasan instagram)
3 / 5
ದಕ್ಷಿಣ ಭಾರತದಲ್ಲಿ ಬಹುಬೇಡಿಕೆಯ ನಟಿಯಾಗಿ ಶ್ರುತಿ ಹಾಸನ್ ಗುರುತಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಸಲಾರ್’ ಚಿತ್ರಕ್ಕೆ ಅವರು ನಾಯಕಿ. ಆ ಚಿತ್ರದ ಮೇಲೆ ಸಖತ್ ನಿರೀಕ್ಷೆ ಇದೆ. (Photo Credit: Shruti Haasan instagram)
4 / 5
ಸಿನಿಮಾ ಮಾತ್ರವಲ್ಲದೇ ಖಾಸಗಿ ಜೀವನದ ಕಾರಣದಿಂದಲೂ ಶ್ರುತಿ ಹಾಸನ್ ಆಗಾಗ ಸುದ್ದಿ ಆಗುತ್ತಾರೆ. ಪ್ರಿಯತಮ ಸಂತನು ಹಜಾರಿಕ ಜೊತೆ ಅವರು ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಪ್ರೀತಿಯ ವಿಚಾರವನ್ನು ಅವರು ಮುಚ್ಚಿಟ್ಟಿಲ್ಲ. (Photo Credit: Shruti Haasan instagram)