Coronavirus: ಕೊರೋನಾ ರೂಪಾಂತರಿ ಡೆಲ್ಟಾಗಿಂತ ಓಮಿಕ್ರಾನ್ ಎಷ್ಟು ಭಿನ್ನ? ಇಲ್ಲಿದೆ ಮಾಹಿತಿ
ಓಮಿಕ್ರಾನ್ ಈಗ ಜಗತ್ತಿನೆಲ್ಲೆಡೆ ಕಾಡುತ್ತಿದೆ. ತಜ್ಞರ ಪ್ರಕಾರ ಕೊರೋನಾ ರೂಪಾಂತರಿ ಡೆಲ್ಟಾದಷ್ಟು ಓಮಿಕ್ರಾನ್ ಅಪಾಯಕಅರಿಯಲ್ಲ. ಶ್ವಾಸಕೋಶಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲ. ಜತೆಗೆ ಸಾಮಾನ್ಯ ಶೀತ. ಕೆಮ್ಮಿನಂತಹ ಸೌಮ್ಯ ಲಕ್ಷಣಗಳನನ್ನು ಹೊಂದಿದೆ ಎಂದಿದ್ದಾರೆ.
Updated on:Jan 19, 2022 | 4:27 PM

ಕೊರೋನಾ ರೂಪಾಂತರಿ ಡೆಲ್ಟಾ ಅತ್ಯಂತ ಅಪಾಯಕಾರಿಯಾಗಿದೆ. ಆದರೆ ಓಮಿಕ್ರಾನ್ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಜತೆಗೆ ಹೆಚ್ಚು ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತವೆ ಎಂದು ಹೇಳಲಾಗಿದೆ.

ಈ 14 ಲಕ್ಷಣಗಳನ್ನು ನಿರ್ಲಕ್ಷಿಸಬೇದಿ. ಅವುಗಳೆಂದರೆ-ಸ್ರವಿಸುವ ಮೂಗು ಶೇ.73 ತಲೆನೋವು ಶೇ 68, ಆಯಾಸ ಶೇ.64 ಸೀನುವಿಕೆ ಶೇ 60, ಗಂಟಲು ನೋವು ಶೇ 60, ನಿರಂತರ ಕೆಮ್ಮು ಶೇ 44, ಒರಟಾದ ಧ್ವನಿ ಶೇ36, ಚಳಿ ಅಥವಾ ನಡುಕ ಶೇ30, ಜ್ವರ ಶೇ29, ತಲೆತಿರುಗುವಿಕೆ ಶೇ28, ಮೆದುಳಿನ ಮಂಜು ಶೇ.24, ಸ್ನಾಯು ನೋವು ಶೇ 23, ವಾಸನೆ ಇಲ್ಲಿದಿರುವುದು ಶೇ19, ಎದೆ ನೋವು19ರಷ್ಟು ಕಂಡುಬರುತ್ತದೆ.

ಸೋಂಕಿತ ವ್ಯಕ್ತಿಯಲ್ಲಿ ಸಂಪೂರ್ಣ ಓಮಿಕ್ರಾನ್ ಅಥವಾ ಕೊರೋನಾ ಲಕ್ಷಣ ಕಾನಿಸಿಕೊಳ್ಳಲು 6-14 ದಿನಗಳ ಅವಧಿ ಬೇಕು. ಹೀಗಾಗಿ ಸಣ್ಣ ಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರನ್ನು ಸಂಪರ್ಕಿಸಿ ಅಥವಾ ಪರೀಕ್ಷಿಸಿಕೊಳ್ಳಿ.

ICMR ಪ್ರಕಾರ ಕೋವಿಡ್ ತಗುಲಿದ ವ್ಯಕ್ತಿಯು ಸೌಮ್ಯ ಲಕ್ಷಣಗಳಿದ್ದರೂ 10 ದಿನಗಳ ಕಾಲ ಐಸೋಲೇಟ್ ಆಗಿರಬೇಕು.

ಓಮಿಕ್ರಾನ್ ಸೋಂಕು ಡೆಲ್ಟಾದಷ್ಟು ಅಪಾಯಕಾರಿಯಲ್ಲ. ಆದರೆ ಸಾಮಾನ್ಯ ಜ್ವರದ ಅನಾರೋಗ್ಯವನ್ನು ಉಂಟುಮಾಡಿತ್ತದೆ. ಹೀಗಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಝಿಕ ಅಂತರವನ್ನು ಮರೆಯುವಂತಿಲ್ಲ ಎನ್ನುತ್ತಾರೆ ತಜ್ಞರು
Published On - 4:17 pm, Wed, 19 January 22



















