ರಾಯಚೂರು ಮಕ್ಕಳ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ ಸಾಧನೆ; ಅಪ್ಪು ಸಮಾಧಿಗೆ ಪ್ರಮಾಣಪತ್ರ ಅರ್ಪಣೆ
4ನೇ ತರಗತಿಯ ಶಿವರಾಜ್ ಹಾಗೂ 3ನೇ ತರಗತಿಯ ಸಂಜನಾ ಈ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಪುನೀತ್ ರಾಜ್ಕುಮಾರ್ ಅವರಿಂದ ಪ್ರಮಾಣಪತ್ರ ಪಡೆಯಬೇಕು ಎಂಬುದು ಮಕ್ಕಳ ಬಯಕೆ ಆಗಿತ್ತು.
ಪುನೀತ್ ರಾಜ್ಕುಮಾರ್ ಎಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಪುಟ್ಟ ಮಕ್ಕಳು ಅವರನ್ನು ಸಖತ್ ಇಷ್ಟಪಡುತ್ತಿದ್ದರು. ಅಪ್ಪು ಅಭಿಮಾನಿಗಳಾಗಿರುವ (Puneeth Rajkumar Fans) ರಾಯಚೂರಿನ ಇಬ್ಬರು ಪ್ರತಿಭಾನ್ವಿತ ಮಕ್ಕಳು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ (India Book of Records) ದಾಖಲೆ ಮಾಡಿದ್ದಾರೆ. ಸಾಮಾನ್ಯ ಜ್ಞಾನದಲ್ಲಿ ಒಟ್ಟು 10 ಸಾವಿರ ಪ್ರಶ್ನೆಗಳಿಗೆ ಉತ್ತರಿಸಿ ಸಾಧನೆ ಮಾಡಿದ್ದಾರೆ. ರಾಯಚೂರು (Raichur) ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಮುದಗಲ್ ಪಟ್ಟಣದ ಮಕ್ಕಳಾದ 4ನೇ ತರಗತಿಯ ಶಿವರಾಜ್ ಹಾಗೂ 3ನೇ ತರಗತಿಯ ಸಂಜನಾ ಈ ಸಾಧನೆ ಮಾಡಿ ದಾಖಲೆ ಬರೆದಿದ್ದಾರೆ. ಈ ಪ್ರಮಾಣಪತ್ರವನ್ನು ಪುನೀತ್ ರಾಜ್ಕುಮಾರ್ ಅವರಿಂದ ಪಡೆಯಬೇಕು ಎಂಬುದು ಮಕ್ಕಳ ಬಯಕೆ ಆಗಿತ್ತು. ಆದರೆ ಇಂದು ಪುನೀತ್ ನಮ್ಮೊಂದಿಗೆ ಇಲ್ಲ. ಹಾಗಾಗಿ ಶಿವರಾಜ್ಕುಮಾರ್ ಅವರಿಂದ ಆಶೀರ್ವಾದ ಪಡೆಯಬೇಕು ಎಂದು ಶಿವರಾಜ್ ಮತ್ತು ಸಂಜನಾ ಕಾದಿದ್ದಾರೆ. ಅಪ್ಪು ಸಮಾಧಿಗೆ ಈ ಪ್ರಮಾಣಪತ್ರವನ್ನು ಅರ್ಪಿಸಬೇಕೆಂದು ಈ ಮಕ್ಕಳು ಬಯಕೆ ತೋಡಿಕೊಂಡಿದ್ದಾರೆ. ಇವರಿಬ್ಬರ ತಾಯಿ ಚಂದ್ರಕಲಾ ಅವರು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕ ಮಹಾಂತೇಶ್ ಮಾರ್ಗದರ್ಶನದಲ್ಲಿ ಮಕ್ಕಳು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ:
ಪುನೀತ್ಗೆ ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ಗೌರವ; ಮೊದಲ ದಿನವೇ ಅಪ್ಪು ಬಗ್ಗೆ ಮಾತು
ಪುನೀತ್ಗೆ ದೇವರ ಸ್ಥಾನ ನೀಡಿದ ಫ್ಯಾನ್ಸ್; ಅಪ್ಪು ಮೇಲಿನ ಅಪಾರ ಅಭಿಮಾನಕ್ಕೆ ಇನ್ನೊಂದು ಸಾಕ್ಷಿ