‘ಕಾಲು ಕೆರೆದುಕೊಂಡು ಬಂದ್ರೆ ತಮಿಳು ಸಿನಿಮಾ ಬ್ಯಾನ್ ಮಾಡ್ತೀವಿ’: ವಾಟಾಳ್ ನಾಗರಾಜ್ ಎಚ್ಚರಿಕೆ
‘ತಮಿಳುನಾಡು ಗಡಿ ಬಂದ್ ಮಾಡುತ್ತೇವೆ. ಒಂದು ವಾಹನವನ್ನೂ ಒಳಗಡೆ ಬಿಡೋದಿಲ್ಲ. ತಮಿಳು ಚಿತ್ರಗಳನ್ನು ಬಂದ್ ಮಾಡುತ್ತೇವೆ’ ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ನೀರಿನ ವಿಚಾರದಲ್ಲಿ ಕರ್ನಾಟಕ ಮತ್ತು ತಮಿಳುನಾಡು (Tamil Nadu) ನಡುವೆ ಇರುವ ಕಿರಿಕ್ ಇಂದು-ನಿನ್ನೆಯದಲ್ಲ. ಎಷ್ಟೇ ಹೋರಾಟ ಮಾಡಿದರೂ ಅದಕ್ಕೊಂದು ಶಾಶ್ವತ ಪರಿಹಾರ ಸಿಗುತ್ತಿಲ್ಲ. ಮೇಕೆದಾಟು (Mekedatu) ಯೋಜನೆ ಜಾರಿ ಆಗಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ತಮಿಳುನಾಡಿಗೆ ಎಚ್ಚರಿಕೆ ನೀಡಿದ್ದಾರೆ. ‘ಬರೀ ಪಾದಯಾತ್ರೆ ಮಾಡಿದ್ರೆ ಸಾಧ್ಯವಿಲ್ಲ. ತಮಿಳುನಾಡಿಗೆ ಅಂತಿಮವಾಗಿ ಎಚ್ಚರಿಕೆ ಕೊಡುತ್ತೇನೆ. ನೀವೇನಾದ್ರೂ ಮತ್ತೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ, ಇಡೀ ಕರ್ನಾಟಕದ ಉದ್ದಗಲಕ್ಕೂ ತಮಿಳುನಾಡು ಗಡಿ ಬಂದ್ ಮಾಡುತ್ತೇವೆ. ಒಂದು ವಾಹನವನ್ನೂ ಒಳಗಡೆ ಬಿಡೋದಿಲ್ಲ. ತಮಿಳು ಚಿತ್ರಗಳನ್ನು ಬಂದ್ ಮಾಡುತ್ತೇವೆ. ನಿಮ್ಮ ವಿರುದ್ಧ ಇಲ್ಲಿ ಸತ್ಯಾಗ್ರಹದ ಮೂಲಕ ಗಡಿನಾಡು ಚಳುವಳಿಯನ್ನು ಮಾಡುತ್ತಿದ್ದೇವೆ’ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇದನ್ನೂ ಓದಿ:
‘ಕಾಂಗ್ರೆಸ್ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು
‘ಈ ಜಾಥಾದ ಚಿತ್ರಕಥೆ ಸರಿಯಿಲ್ಲ; ಕಥೆಯೇ ಫ್ಲಾಪ್’: ಮೇಕೆದಾಟು ಪಾದಯಾತ್ರೆ ಬಗ್ಗೆ ನಟಿ ಶ್ರುತಿ ಖಂಡನೆ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು

