‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು

TV9 Web
| Updated By: ಮದನ್​ ಕುಮಾರ್​

Updated on: Jan 09, 2022 | 11:31 AM

‘ಮೇಕೆದಾಟು ಪಾದಯಾತ್ರೆ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಇದಕ್ಕೆ ನಮ್ಮ ಪ್ರೋತ್ಸಾಹ ಇರಬೇಕು. ಇದು ನೀರಿಗಾಗಿ ಹೋರಾಟ’ ಎಂದು ಸಾಧು ಕೋಕಿಲ ಹೇಳಿದ್ದಾರೆ.

ಮೇಕೆದಾಟು (Mekedatu) ಯೋಜನೆ ಜಾರಿಗಾಗಿ ಕಾಂಗ್ರೆಸ್​ ನೇತೃತ್ವದಲ್ಲಿ ಪಾದಯಾತ್ರೆ ಆರಂಭ ಆಗಿದೆ. ಇದರಲ್ಲಿ ಅನೇಕರು ಭಾಗವಹಿಸುತ್ತಿದ್ದಾರೆ. ಕನ್ನಡ ಚಿತ್ರರಂಗದವರು ಕೂಡ ಪಾಲ್ಗೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್​ (DK Shivakumar) ಅವರು ಆಹ್ವಾನ ನೀಡಿರುವುದರಿಂದ ಸಾಕಷ್ಟು ಸೆಲೆಬ್ರಿಟಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ನಟ ಸಾಧು ಕೋಕಿಲ (Sadhu Kokila) ಅವರು ತಮ್ಮ ಬೆಂಬಲ ನೀಡಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ (Mekedatu Padayatra) ಅವರು ಭಾಗಿಯಾಗಿದ್ದಾರೆ. ಈ ವೇಳೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ‘ಕಾವೇರಿ ನೀರು ನಮ್ಮ ಹಕ್ಕು. ನೀರಿನ ವಿಚಾರ ಬಂದಾಗ ನನಗೆ ಹುಮ್ಮಸ್ಸು. ನಾನು ಈವರೆಗೂ ಕಾಂಗ್ರೆಸ್​ ಸದಸ್ಯತ್ವ ಪಡೆದಿಲ್ಲ. ನಾವು ಕಲಾವಿದರು. ಕಲಾವಿದರು ಎಲ್ಲ ಕಡೆ ಸಲ್ಲುತ್ತಾರೆ. ಪಕ್ಷದ ಕೆಲಸ ಅವರವರಿಗೆ ಸೇರಿದ್ದು. ಆದರೆ ಈ ಪಾದಯಾತ್ರೆ ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಇದಕ್ಕೆ ನಮ್ಮ ಪ್ರೋತ್ಸಾಹ ಇರಬೇಕು. ಇದು ನೀರಿಗಾಗಿ ಹೋರಾಟ. ಮೇಕೆದಾಟು ಅಣೆಕಟ್ಟು ಕಟ್ಟುವವರೆಗೆ ಹೋರಾಟ ನಿಲ್ಲಬಾರದು’ ಎಂದು ಸಾಧು ಕೋಕಿಲ ಹೇಳಿದ್ದಾರೆ.

ಇದನ್ನೂ ಓದಿ:

ಸಾಧು ಕೋಕಿಲ ಅಂದ್ರೆ ಕಾಮಿಡಿ ಅಷ್ಟೇ ಅಲ್ಲ! ಅಪ್ರತಿಮ ಕಲಾವಿದನಿಗೆ ಇದೆ ಇನ್ನೂ 4 ಟ್ಯಾಲೆಂಟ್​ಗಳು

‘ಸಾಧು ನನ್ನ ಕೈಗೆ ಸಿಕ್ಕಿದ್ದರೆ ಒಂದೆರಡು ಏಟು ಚೆನ್ನಾಗಿ ಬಿದ್ದಿರುತ್ತಿತ್ತು’: ರವಿಚಂದ್ರನ್​