‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್ಕುಮಾರ್ ಮೊದಲು ಮುಂದೆ ಬರುತ್ತಿದ್ದರು’; ಜಯಮಾಲಾ
ಮೇಕೆದಾಟು ಯೋಜನೆ ಜಾರಿಗೆ ಬರಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಆರಂಭಿಸಿದ್ದಾರೆ. ಇದಕ್ಕೆ ಚಿತ್ರರಂಗದವರಿಗೂ ಆಹ್ವಾನ ನೀಡಲಾಗಿದೆ. ನಟ ‘ದುನಿಯಾ’ ವಿಜಯ್, ಹಾಸ್ಯ ನಟ ಸಾಧು ಕೋಕಿಲ ಅವರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಜಯಮಾಲಾ ಅವರು ಚಿತ್ರರಂಗದಲ್ಲಿ ಮಿಂಚಿದವರು. ಈಗ ಅವರು ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕಿ ಆಗಿರುವ ಅವರು ಇಂದು (ಜನವರಿ 9) ಆರಂಭವಾಗಿರುವ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಬರಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ಆರಂಭಿಸಿದ್ದಾರೆ. ಇದಕ್ಕೆ ಚಿತ್ರರಂಗದವರಿಗೂ ಆಹ್ವಾನ ನೀಡಲಾಗಿದೆ. ನಟ ‘ದುನಿಯಾ’ ವಿಜಯ್, ಹಾಸ್ಯ ನಟ ಸಾಧು ಕೋಕಿಲ ಅವರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಶಿವರಾಜ್ಕುಮಾರ್ ಅವರು ಕೂಡ ಇದರಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ನಂಬಿಕೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಈ ಬಗ್ಗೆ ಜಯಮಾಲಾ ಮಾತನಾಡಿದ್ದಾರೆ. ‘ನೆಲ,ಜಲ, ಭಾಷೆಗೆ ಧಕ್ಕೆಯಾದಾಗ ರಾಜ್ಕುಮಾರ್ ಮೊದಲು ಮುಂದೆ ಬರುತ್ತಿದ್ದರು. ಶಿವರಾಜ್ಕುಮಾರ್ ಅವರು ರಾಜ್ಕುಮಾರ್ ಮಗ. ಅವರು ಕೂಡ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಕಾಂಗ್ರೆಸ್ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು
ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಗೆ ಹಂಸಲೇಖ ಸಾಥ್; 2 ಹಾಡು ಬರೆಯಲಿರುವ ‘ನಾದಬ್ರಹ್ಮ’