Happy Birthday Sadhu Kokila: ಸಾಧು ಕೋಕಿಲ ಅಂದ್ರೆ ಕಾಮಿಡಿ ಅಷ್ಟೇ ಅಲ್ಲ! ಅಪ್ರತಿಮ ಕಲಾವಿದನಿಗೆ ಇದೆ ಇನ್ನೂ 4 ಟ್ಯಾಲೆಂಟ್​ಗಳು

Sadhu Kokila: ಖ್ಯಾತ ಹಾಸ್ಯ ನಟ ಸಾಧು ಕೋಕಿಲ ಅವರಿಗೆ ಇಂದು (ಮಾ.24) ಜನ್ಮದಿನ ಸಂಭ್ರಮ. ಅವರಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಕಾಮಿಡಿ ಹೊರತಾಗಿ ಇನ್ನೂ 4 ವಿಚಾರಗಳಲ್ಲಿ ಸಾಧು ಸೈ ಎನಿಸಿಕೊಂಡಿದ್ದಾರೆ ಎಂಬುದು ಅನೇಕರಿಗೆ ತಿಳಿದಿಲ್ಲ.

Happy Birthday Sadhu Kokila: ಸಾಧು ಕೋಕಿಲ ಅಂದ್ರೆ ಕಾಮಿಡಿ ಅಷ್ಟೇ ಅಲ್ಲ! ಅಪ್ರತಿಮ ಕಲಾವಿದನಿಗೆ ಇದೆ ಇನ್ನೂ 4 ಟ್ಯಾಲೆಂಟ್​ಗಳು
ಸಾಧು ಕೋಕಿಲ
Follow us
ಮದನ್​ ಕುಮಾರ್​
|

Updated on:Mar 24, 2021 | 12:52 PM

ಸಿನಿಮಾದಲ್ಲಿ ಸಾಧು ಕೋಕಿಲ ಕಾಣಿಸಿಕೊಂಡರೆ ಸಾಕು ಅಭಿಮಾನಿಗಳು ಬಿದ್ದ ಬಿದ್ದು ನಗುತ್ತಾರೆ. ಅವರ ಎಕ್ಸ್​ಪ್ರೆಷನ್​ಗಳಿಗೆ ಎಂಥವರೂ ನಕ್ಕು ನಗಲೇಬೇಕು. ಅಷ್ಟರಮಟ್ಟಿಗೆ ಮೋಡಿ ಮಾಡುತ್ತಾರೆ ಈ ಕಲಾವಿದ. ಆ ಕಾರಣದಿಂದಲೇ ಸಾಧು ಈಗಲೂ ಸ್ಯಾಂಡಲ್​ವುಡ್​ನಲ್ಲಿ ಬಹುಬೇಡಿಕೆಯ ಹಾಸ್ಯ ನಟನಾಗಿ ಉಳಿದುಕೊಂಡಿದ್ದಾರೆ. ಆದರೆ ಸಾಧು ಕೋಕಿಲ ಎಂದರೆ ಬರೀ ಕಾಮಿಡಿ ಮಾತ್ರವಲ್ಲ. ಸಿನಿಮಾ ಕ್ಷೇತ್ರದಲ್ಲಿ ಅವರದ್ದು ಬಹುಮುಖ ಪ್ರತಿಭೆ.

ಸ್ಯಾಂಡಲ್​ವುಡ್​ನ ಯಶಸ್ವಿ ನಿರ್ದೇಶಕ! ಬರೀ ಕಾಮಿಡಿ ಮಾಡಿಕೊಂಡು ಸಾಧು ಕೋಕಿಲ ಸುಮ್ಮನೆ ಕುಳಿತಿಲ್ಲ. ಸ್ಯಾಂಡಲ್​ವುಡ್​ನಲ್ಲಿ ಅವರು ಓರ್ವ ಯಶಸ್ವಿ ನಿರ್ದೇಶಕ ಕೂಡ ಹೌದು. ಉಪೇಂದ್ರ, ದರ್ಶನ್, ಸುದೀಪ್​, ಶಿವರಾಜ್​ಕುಮಾರ್​ ಅವರಂತಹ ಸ್ಟಾರ್​ ಕಲಾವಿದರಿಗೆ ಆ್ಯಕ್ಷನ್​-ಕಟ್​ ಹೇಳಿದ ಖ್ಯಾತಿ ಸಾಧುಗೆ ಸಲ್ಲುತ್ತದೆ. ಉಪೇಂದ್ರ ನಟನೆಯ ‘ರಕ್ತ ಕಣ್ಣೀರು’, ಶಿವರಾಜ್​ಕುಮಾರ್​ ನಟನೆಯ ‘ರಾಕ್ಷಸ’. ದರ್ಶನ್​ ಅಭಿನಯದ ‘ಸುಂಟರಗಾಳಿ’, ಶೌರ್ಯ, ಸುದೀಪ್​ ಅವರ ಮಿಸ್ಟರ್​ ತೀರ್ಥ ಮುಂತಾದವುಗಳಿಗೆ ನಿರ್ದೇಶನ ಮಾಡಿದ್ದು ಇದೇ ಸಾಧು ಕೋಕಿಲ.

ಗಾಯಕನಾಗಿಯೂ ಸಾಧು ಸೂಪರ್​ ತಮ್ಮ ವಿಭಿನ್ನವಾದ ಧ್ವನಿಯಿಂದ ಕಾಮಿಡಿ ಮಾಡುವ ಸಾಧು ಕೋಕಿಲ ಅವರು ತುಂಬ ಚೆನ್ನಾಗಿ ಹಾಡು ಹೇಳುತ್ತಾರೆ ಕೂಡ. ಗಾಯಕನಾಗಿಯೂ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ‘ಎದೆಗಾರಿಕೆ’ ಸಿನಿಮಾದ ‘ನೀನೊಂದು ಮುಗಿಯದ ಮೌನ…’ ಹಾಡನ್ನು ಕೇಳಿ ಸಿನಿ ಸಂಗೀತಪ್ರಿಯರು ತಲೆದೂಗಿದ್ದಾರೆ. ಅದಕ್ಕೆ ಧ್ವನಿ ನೀಡುವ ಮೂಲಕ ಸಾಧುಕೋಕಿಲ ಅವರು ಕೇಳುಗರ ಹೃದಯ ಕದ್ದಿದ್ದಾರೆ.

ಸಂಗೀತ ನಿರ್ದೇಶನಕ್ಕೂ ಸಾಧು ಸೈ ಸಾಧು ಕೋಕಿಲ ಅವರೊಬ್ಬ ಬಹುಬೇಡಿಕೆಯ ಸಂಗೀತ ನಿರ್ದೇಶಕ. ನಟನೆಯ ಜೊತೆಜೊತೆಗೆ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಾಧು ಫೇಮಸ್​ ಆಗಿದ್ದಾರೆ. ಇಂತಿ ನಿನ್ನ ಪ್ರೀತಿಯ, ಎಚ್​2ಒ, ಶ್​, ರಕ್ತ ಕಣ್ಣೀರು, ಲಾಲಿ ಹಾಡು ಮುಂತಾದ ಸಿನಿಮಾಗಳಿಗೆ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರಾಕ್ಷಸ ಮತ್ತು ಇಂತಿ ನಿನ್ನ ಪ್ರೀತಿಯ ಸಿನಿಮಾಗಳ ಸಂಗೀತ ನಿರ್ದೇಶನಕ್ಕೆ ಸಾಧುಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ! ಹಲವು ಚಿತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ.

ನಿರ್ಮಾಣದಲ್ಲಿಯೂ ತೊಡಗಿರುವ ಸಾಧು! ಕನ್ನಡ ಚಿತ್ರರಂಗದಲ್ಲಿ ಓರ್ವ ನಿರ್ಮಾಪಕನಾಗಿಯೂ ಸಾಧು ಕೋಕಿಲ ಗುರುತಿಸಿಕೊಂಡಿದ್ದಾರೆ. 90. ನಂ.1 ಮುಂತಾದ ಸಿನಿಮಾಗಳಿಗೆ ಅವರು ಬಂಡವಾಳ ಹೂಡಿದ್ದರು. ಈಗ ಧಾರಾವಾಹಿ ನಿರ್ಮಾಣಕ್ಕೂ ಸಾಧು ಕೋಕಿಲ ಕೈ ಹಾಕಿದ್ದಾರೆ. ಉದಯ ವಾಹಿನಿಯಲ್ಲಿ ಮಾ.15ರಿಂದ ಪ್ರಸಾರ ಆಗುತ್ತಿರುವ ‘ಗೌರಿಪುರದ ಗಯ್ಯಾಳಿಗಳು’ ಧಾರಾವಾಹಿಗೆ ಸಾಧು ಕೋಕಿಲ ನಿರ್ಮಾಪಕ. ಕೆಲವು ರಿಯಾಲಿಟಿ ಶೋಗಳಿಗೆ ಜಡ್ಡ್​ ಆಗಿಯೂ ಸಾಧು ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

Published On - 11:57 am, Wed, 24 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ