ಕೊನೆಗೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ತಾರಾ ಅನುರಾಧ

ನವೆಂಬರ್​ ತಿಂಗಳ ಮಧ್ಯದ ವೇಳೆಗೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಆಗಿತ್ತು. ಆ ಸಂದರ್ಭದಲ್ಲಿ ಕನ್ನಡದ ಹಿರಿಯ ನಟಿ ತಾರಾ ಕೂಡ ತಿರುಪತಿಯಲ್ಲೇ ಇದ್ದರು. ನಂತರ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದರು.

ಕೊನೆಗೂ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ನಟಿ ತಾರಾ ಅನುರಾಧ
ತಾರಾ ಅನುರಾಧ
TV9kannada Web Team

| Edited By: Rajesh Duggumane

Jan 21, 2022 | 2:08 PM

ಕಳೆದ ನವೆಂಬರ್ ತಿಂಗಳಲ್ಲಿ ಆಂಧ್ರಪ್ರದೇಶದಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ತಿರುಮಲ ತಿರುಪತಿಯಲ್ಲಿ‌ ( Tirumala Tirupati) ಭಾರೀ ಮಳೆಯ ಕಾರಣದಿಂದ ಎರಡು ದಿನ‌ ಭಕ್ತರಿಗೆ ದೇವರ ದರ್ಶನವನ್ನು ಪಡೆಯುವುದನ್ನು ಬಂದ್ ಮಾಡಲಾಗಿತ್ತು. ತಿರುಪತಿ ಘಾಟ್ ರಸ್ತೆ ಸಂಪೂರ್ಣ ಹಾನಿಗೆ ಒಳಗಾಗಿತ್ತು. ಬೆಟ್ಟಕ್ಕೆ ಹೋಗುವ ರಸ್ತೆಯನ್ನು ಟಿಟಿಡಿ ದುರಸ್ತಿಗೊಳಿಸಿತ್ತು. ಈ ಮಳೆಗೆ ಸಿಕ್ಕು ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆ ಆಗಿದ್ದಾರೆ. ಈ ಸಂದರ್ಭದಲ್ಲಿಯೇ ನಟಿ ತಾರಾ ಅನುರಾಧ (Tara Anuradha ) ಅವರು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗಿದ್ದರು. ಆದರೆ, ಅಪಾಯದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಅವರು ಮರಳಿ ಬೆಂಗಳೂರಿಗೆ ಆಗಮಿಸಿದ್ದರು. ಎರಡು ತಿಂಗಳ ಬಳಿಕ ತಿರುಪತಿಗೆ ತೆರಳಿರುವ ಅವರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.  

ನವೆಂಬರ್​ ತಿಂಗಳ ಮಧ್ಯದ ವೇಳೆಗೆ ಆಂಧ್ರ ಪ್ರದೇಶದಲ್ಲಿ ಭಾರೀ ಮಳೆ ಆಗಿತ್ತು. ಆ ಸಂದರ್ಭದಲ್ಲಿ ಕನ್ನಡದ ಹಿರಿಯ ನಟಿ ತಾರಾ ಕೂಡ ತಿರುಪತಿಯಲ್ಲೇ ಇದ್ದರು. ನಂತರ ಅವರು ಕ್ಷೇಮವಾಗಿ ಬೆಂಗಳೂರಿಗೆ ಮರಳಿದ್ದರು. ಆ ಬಳಿಕ ಅವರು ರಿಯಾಲಿಟಿ ಶೋಗಳ ಕೆಲಸಗಳಲ್ಲಿ ಬ್ಯುಸಿ ಆದರು. ಹೀಗಾಗಿ, ಮತ್ತೆ ತಿರುಪತಿಗೆ ಹೋಗೋಕೆ ಸಾಧ್ಯವಾಗಿರಲಿಲ್ಲ. ಈಗ ತಾರಾ ಅವರು ಬಿಡುವು ಮಾಡಿಕೊಂಡು ತಿರುಪತಿಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.

ತಿರುಪತಿಯಲ್ಲಿ ಅವರು ನಿಂತಿರುವ ಫೋಟೋ ಈಗ ವೈರಲ್​ ಆಗಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಸಂತಸ ಹೊರಹಾಕಿದ್ದಾರೆ. ದೇಶದಲ್ಲಿ ಮತ್ತೆ ಕೊರೊನಾ ಹೆಚ್ಚುತ್ತಿದೆ. ಇದರ ನಿಯಂತ್ರಣಕ್ಕೆ ಲಾಕ್​ಡೌನ್​ ಜಾರಿ ಮಾಡಿದರೆ ದೇವಸ್ಥಾನಗಳು ಬಂದ್​ ಆಗಲಿವೆ. ಆಗ ದೇವರ ದರ್ಶನ ಪಡೆಯೋಕೆ ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಅವರು ಈಗಲೇ ತಿರುಪತಿಗೆ ತೆರಳಿದ್ದಾರೆ ಎನ್ನಲಾಗಿದೆ.

ಈ ಮೊದಲು ಪ್ರವಾಹದ ಬಗ್ಗೆ ವಿವರಿಸಿದ್ದ ತಾರಾ, ‘ನಾನು ತಿರುಪತಿಯಲ್ಲಿದ್ದೆ. ಜೋರಾಗಿ ಮಳೆ ಬಂತು. ಅಲ್ಲಿ ಹೋಗುವಾಗ ನನಗೆ ಭಯ ಆಯ್ತು. ಯು-ಟರ್ನ್​ ತೆಗೆದುಕೊಂಡು ಮರಳಿ ಬಂದ್ವಿ. ಆಗ ಹೆದ್ದಾರಿ ಕಂಡ್ತು. ಅದು ಬೆಂಗಳೂರಿನ ಹೆದ್ದಾರಿ ಆಗಿತ್ತು. ನಾವು ಸುರಕ್ಷಿತವಾಗಿ ಬಂದು ತಲುಪಿದ್ದೇವೆ’ ಎಂದು ತಾರಾ ಹೇಳಿದ್ದರು. ‘ಅಲ್ಲಿಯವರೆಗೆ ಹೋದರೂ ದೇವರ ದರ್ಶನ ಮಾಡಲು ಆಗಿಲ್ಲ ಎನ್ನುವ ಬೇಸರ ಒಂದು ಕಡೆಯಾದರೆ, ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದೇವೆ ಎನ್ನುವ ಸಂತೋಷ ಮತ್ತೊಂದು ಕಡೆ’ ಎಂದಿದ್ದರು ಅವರು. ಈಗ ತಿರುಪತಿಗೆ ತೆರಳಿ ಅವರು ದೇವರ ದರ್ಶನ ಪಡೆದು ಬಂದಿದ್ದಾರೆ.

ಇದನ್ನೂ ಓದಿ: ಅಪ್ಪು ಕುಟುಂಬ ಅತೀವ ವೇದನೆ ಮತ್ತು ಸಂಕಟದಲ್ಲಿದೆ, ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡು ಸಂಕಟ ಹೆಚ್ಚಿಸಬೇಡಿ: ತಾರಾ ಅನುರಾಧ

‘ಕನ್ನಡತಿ’ ನಟಿ ರಂಜನಿ ರಾಘವನ್​ಗೆ ಕೊವಿಡ್​ ಪಾಸಿಟಿವ್​; ಬೇಗ ಗುಣಮುಖರಾಗಿ ಚಾಂಪ್​ ಎಂದ ಕಿರಣ್​ ರಾಜ್​

 

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada