ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್​; ಮಿಂಚಿದ ಮಂಜು ಪಾವಗಡ  

ಶುಭಾ ಪೂಂಜಾ ಮದುವೆ ವಿಡಿಯೋ ರಿಲೀಸ್​; ಮಿಂಚಿದ ಮಂಜು ಪಾವಗಡ  

TV9 Web
| Updated By: ರಾಜೇಶ್ ದುಗ್ಗುಮನೆ

Updated on: Jan 21, 2022 | 3:52 PM

ಶುಭಾ ಮದುವೆಯಲ್ಲಿ ಬಿಗ್ ಬಾಸ್ ವಿನ್ನರ್​ ಮಂಜು ಪಾವಗಡ ಸಖತ್​ ಆಗಿ ಮಿಂಚಿದ್ದಾರೆ. ಹಾಗಾದರೆ, ಶುಭಾ ಮದುವೆ ಹೇಗಿತ್ತು? ಆ ಪ್ರಶ್ನೆಗೆ ವಿಡಿಯೋದಲ್ಲಿದೆ ಉತ್ತರ.

ಸ್ಯಾಂಡಲ್​ವುಡ್ ನಟಿ, ಕನ್ನಡ ಬಿಗ್​ ಬಾಸ್​ 8ರ ಸ್ಪರ್ಧಿ ಶುಭಾ ಪೂಂಜ ಅವರು ಈ ತಿಂಗಳ ಆರಂಭದಲ್ಲಿ ಮದುವೆ ಆಗಿದ್ದರು. ದೀರ್ಘಕಾಲದ ಗೆಳೆಯ ಸುಮಂತ್ ಜತೆ ಅವರು ಸಪ್ತಪದಿ ತುಳಿದಿದ್ದರು. ಸುಮಂತ್ ಹಾಗೂ ಶುಭಾ ವಿವಾಹ ಸಮಾರಂಭ ಮಂಗಳೂರಿನಲ್ಲಿ ನಡೆದಿತ್ತು. ಸಿಂಪಲ್ ಆಗಿ ಈ ಮದುವೆ ನೆರವೇರಿತ್ತು. ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆದಿತ್ತು. ಈ ಮದುವೆಯ ವಿಡಿಯೋ ಈಗ ಲಭ್ಯವಾಗಿದೆ. ಶುಭಾ ಮದುವೆಯಲ್ಲಿ ಬಿಗ್ ಬಾಸ್ ವಿನ್ನರ್​ ಮಂಜು ಪಾವಗಡ ಸಖತ್​ ಆಗಿ ಮಿಂಚಿದ್ದಾರೆ. ಹಾಗಾದರೆ, ಶುಭಾ ಮದುವೆ ಹೇಗಿತ್ತು? ಆ ಪ್ರಶ್ನೆಗೆ ವಿಡಿಯೋದಲ್ಲಿದೆ ಉತ್ತರ. ಶುಭಾ ಹಾಗೂ ಸುಮಂತ್ ದೀರ್ಘಕಾಲದ ಸ್ನೇಹಿತರು.  ಬಿಗ್​ ಬಾಸ್​ಗೆ ತೆರಳಿದ ಹಿನ್ನೆಲೆಯಲ್ಲಿ ಇವರ ವಿವಾಹ ವಿಳಂಬವಾಗಿತ್ತು.

ಇದನ್ನೂ ಓದಿ: ಅಮೇಜಾನ್​ ಪ್ರೈಮ್​​ನಲ್ಲಿ ರಿಲೀಸ್​ ಆಗುತ್ತಿದೆ ಪುನೀತ್​ ನಿರ್ಮಾಣದ ಮೂರು ಸಿನಿಮಾಗಳು 

ಅಮೇಜಾನ್​ ಪ್ರೈಮ್​ನಿಂದ ಬಂಪರ್​ ಆಫರ್​; ಈ ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯ