‘ಲೀಲಾವತಿ ರೀತಿ ಅದಿತಿ ಪ್ರಭುದೇವಗೂ ಒಳ್ಳೆಯ ಗುಣ ಇದೆ’: ಹಿರಿಯ ನಟ ಬೆಂಗಳೂರು ನಾಗೇಶ್​

‘ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಭಾವನೆ ಲೀಲಾವತಿ ಅವರಿಗೆ ಇತ್ತು. ಅಂಥ ಭಾವನೆ ಎಲ್ಲ ನಟಿಯರಿಗೆ ಇರೋದಿಲ್ಲ’ ಎಂದು ಬೆಂಗಳೂರು ನಾಗೇಶ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Jan 21, 2022 | 10:08 AM

ನಟ ಬೆಂಗಳೂರು ನಾಗೇಶ್​ (Bangalore Nagesh) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವ ಇದೆ. ಡಾ. ರಾಜ್​ಕುಮಾರ್, ವಿಷ್ಣುವರ್ಧನ್​, ಲೀಲಾವತಿ (Leelavathi) ಮುಂತಾದ ಕಲಾವಿದರ ಜೊತೆ ಕೆಲಸ ಮಾಡಿದ್ದ ಅವರು ತಮ್ಮ ನೆನಪಿನ ಪುಟವನ್ನು ತೆರೆದಿದ್ದಾರೆ. ಬೆಂಗಳೂರು ನಾಗೇಶ್​ ಅವರು ತಮ್ಮ ಯೌವನದ ದಿನಗಳಲ್ಲಿ ಸಿಗರೇಟ್​ ಸೇದುವ ಅಭ್ಯಾಸ ಇಟ್ಟುಕೊಂಡಿದ್ದರು. ಅದನ್ನು ಗಮನಿಸಿದ ಲೀಲಾವತಿಯವರು ಬುದ್ಧಿಮಾತು ಹೇಳಿದ್ದರು. ಅಂದಿನಿಂದ ಇಂದಿನವರೆಗೆ ತಾವು ಸಿಗರೇಟ್​ ಸೇದಿಲ್ಲ ಎಂದಿದ್ದಾರೆ ಬೆಂಗಳೂರು ನಾಗೇಶ್​. ‘ಎಲ್ಲರಿಗೂ ಒಳ್ಳೆಯದಾಗಬೇಕು ಎಂಬ ಭಾವನೆ ಲೀಲಾವತಿ ಅವರಿಗೆ ಇತ್ತು. ಅಂಥ ಭಾವನೆ ಎಲ್ಲ ನಟಿಯರಿಗೆ ಇರೋದಿಲ್ಲ. ಈ ದಿನಗಳಲ್ಲಿ ಅದಿತಿ ಪ್ರಭುದೇವ (Aditi Prabhudeva) ಅವರು ಒಳ್ಳೆಯ ಮನೋಭಾವ ಹೊಂದಿದ್ದಾರೆ. ಅವರ ಜೊತೆ ‘ಓಲ್ಡ್​ ಮಾಂಕ್​’ ಸಿನಿಮಾದಲ್ಲಿ ನಟಿಸಿದ್ದೇನೆ. ಅವರ ರೀತಿಯ ವ್ಯಕ್ತಿತ್ವ ಇದ್ದರೆ ಎಲ್ಲರೂ ಖುಷಿಯಿಂದ ಕೆಲಸ ಮಾಡಬಹುದು’ ಎಂದು ಬೆಂಗಳೂರು ನಾಗೇಶ್​ ಹೇಳಿದ್ದಾರೆ.

ಇದನ್ನೂ ಓದಿ:

ಅದಿತಿ ಪ್ರಭುದೇವಗೆ ಹುಟ್ಟುಹಬ್ಬದ ಸಂಭ್ರಮ; ಸ್ಯಾಂಡಲ್​ವುಡ್​ ಸುಂದರಿಯ ಕ್ಯೂಟ್​ ಫೋಟೋ ಆಲ್ಬಂ

‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​-ವಿಷ್ಣುವರ್ಧನ್​ ಏಕೆ ಒಟ್ಟಾಗಿ ನಟಿಸಲಿಲ್ಲ? ಕಾರಣ ನೀಡಿದ ಹಿರಿಯ ನಟ

Follow us on

Click on your DTH Provider to Add TV9 Kannada