ಚಿತ್ರದುರ್ಗ: ಕೊವಿಡ್ ಪಾಸಿಟಿವ್ ಆಗಿದ್ದೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ; ತಹಶೀಲ್ದಾರ್ ದಾಳಿ, ಆಸ್ಪತ್ರೆ ಸೀಲ್ಡೌನ್
ಚಿತ್ರದುರ್ಗದ ಚಳ್ಳಕೆರೆಯ ಖಾಸಗಿ ಕ್ಲಿನಿಕ್ನ ವೈದ್ಯರೊಬ್ಬರು ಕೊವಿಡ್ ಪಾಸಿಟಿವ್ ಆಗಿದ್ದರೂ, ಸೋಂಕಿನ ಲಕ್ಷಣ ಇಲ್ಲವೆಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ತಹಶೀಲ್ದಾರ್ ಆಸ್ಪತ್ರೆಗೆ ದಾಳಿ ನಡೆಸಿ, ಸೀಲ್ಡೌನ್ ಮಾಡಿದ್ದಾರೆ.
ಚಿತ್ರದುರ್ಗ: ಸ್ವತಃ ಕೋವಿಡ್ ಸೋಂಕು ದೃಢಪಟ್ಟರೂ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯನಿಗೆ ತಹಶೀಲ್ದಾರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಚಿತ್ರದುರ್ಗದ ವೈದ್ಯನೊಬ್ಬನ ಕ್ಲಿನಿಕ್ಗೆ ಸಡನ್ ಭೇಟಿ ನೀಡಿದ ತಹಸೀಲ್ದಾರ್ ವೈದ್ಯನ ಮೇಲೆ ಗರಂ ಆಗಿದ್ದಾರೆ. ಚಳ್ಳಕೆರೆ ಖಾಸಗಿ ಆಸ್ಪತ್ರೆಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದ್ದರೂ ಕೂಡ ವೈದ್ಯ ವೀರೇಶ್ ಚಿಕಿತ್ಸೆ ನೀಡುತ್ತಿದ್ದರು. ತಹಶೀಲ್ದಾರ್ ರಘುಮೂರ್ತಿ ದಾಳಿ ನಡೆಸಿ, ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಗೆ ಬುಧವಾರ ಬೆಳಗ್ಗೆ 7 ಗಂಟೆಗೆ ಕೊವಿಡ್ ದೃಢವಾಗಿತ್ತು. ಹೋಂ ಐಸೊಲೇಷನ್ ಆಗಲು ವೈದ್ಯರಿಗೆ ಸೂಚನೆ ನೀಡಲಾಗಿತ್ತು. ಆದರೆ ಯಾವುದೇ ಲಕ್ಷಣವಿಲ್ಲವೆಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸದ್ಯ ಸೋಂಕಿತ ವೈದ್ಯ ಸಂಪರ್ಕದಲ್ಲಿದ್ದವರಿಗೆ ಸ್ವ್ಯಾಬ್ ಟೆಸ್ಟ್ಗೆ ಸೂಚನೆ ನೀಡಲಾಗಿದ್ದು, ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ.
ಇದನ್ನೂ ಓದಿ:
ದುಬೈ ಎಕ್ಸ್ಪೋ 2020ರ ಜಾಹೀರಾತಿನ ಚಿತ್ರೀಕರಣ ಹೇಗಿತ್ತು ಗೊತ್ತಾ? ತೆರೆಮರೆಯ ವಿಡಿಯೋ ಹಂಚಿಕೊಂಡ ದುಬೈ ಎಮಿರೇಟ್ಸ್
ಯಾದಗಿರಿ: ಮಂಜೂರಾದ ಮನೆಯ ಬಾಕಿ ಬಿಲ್ ಕೇಳಲು ಬಂದಿದ್ದ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಲ್ಲೆ