ಯಾದಗಿರಿ: ಮಂಜೂರಾದ ಮನೆಯ ಬಾಕಿ ಬಿಲ್ ಕೇಳಲು ಬಂದಿದ್ದ ವ್ಯಕ್ತಿಯ ಮೇಲೆ ಗ್ರಾಮ ಪಂಚಾಯಿತಿ ಸದಸ್ಯನಿಂದ ಹಲ್ಲೆ

ಮಂಜೂರಾದ ಮನೆಯ ಬಾಕಿ ಬಿಲ್ ಕೇಳಲು ಬಂದಿದ್ದ ವ್ಯಕ್ತಿಯೋರ್ವರ ಮೇಲೆ ಗ್ರಾಮ ಪಂಚಾಯಿತಿ ಆವರಣದಲ್ಲೇ ಹಲ್ಲೆ ನಡೆಸಲಾಗಿದೆ. ಈ ಸಂದರ್ಭದ ವಿಡಿಯೋ ಸೆರೆಯಾಗಿದ್ದು, ವೈರಲ್ ಆಗಿದೆ.

TV9kannada Web Team

| Edited By: shivaprasad.hs

Jan 21, 2022 | 7:49 AM

ಯಾದಗಿರಿ: ಗ್ರಾಮ ಪಂಚಾಯಿತಿ ಸದಸ್ಯರೋರ್ವರು ವ್ಯಕ್ತಿಯೋರ್ವರಿಗೆ ಹಲ್ಲೆ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಪಸ್ಪೂಲ್​ನ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಘಟನೆ ನಡೆದಿದೆ. ಮಂಜೂರಾದ ಮನೆಯ ಬಾಕಿ ಬಿಲ್ ಕೇಳಲು ಹನುಮಂತಪ್ಪ ಎನ್ನುವವರು ಬಂದಿದ್ದರು. ಅವರ ಮೇಲೆ ಪಂಚಾಯಿತಿ ಸದಸ್ಯ ಮರಿಲಿಂಗಪ್ಪ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ಇದು ವಿಡಿಯೋದಲ್ಲಿ ದಾಖಲಾಗಿದೆ.

ಇದನ್ನೂ ಓದಿ: Shocking Video: ಗರ್ಭಿಣಿಯಾಗಿದ್ದ ಫಾರೆಸ್ಟ್​ ರೇಂಜರ್​ ಕೂದಲು ಹಿಡಿದೆಳೆದು, ಥಳಿಸಿದ ದಂಪತಿ; ಶಾಕಿಂಗ್ ವಿಡಿಯೋ ವೈರಲ್

Viral Video: ಪಬ್​ನ ಒಳಗೆ ತಮ್ಮ ಪಾಡಿಗೆ ತಾವೇ ವಸ್ತುಗಳ ಚಲನೆ!; ಕುತೂಹಲಕಾರಿ ವಿಡಿಯೋ ನೋಡಿ

 

Follow us on

Click on your DTH Provider to Add TV9 Kannada