AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಬ್​ನ ಒಳಗೆ ತಮ್ಮ ಪಾಡಿಗೆ ತಾವೇ ವಸ್ತುಗಳ ಚಲನೆ!; ಕುತೂಹಲಕಾರಿ ವಿಡಿಯೋ ನೋಡಿ

ಅವರು ಘಟನೆಯನ್ನು ವಿವರಿಸಿದಾಗ ಪೊಲೀಸರಿಗೆ ಯಾವುದೇ ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಅವರು ಸ್ವತಃ ಸಿಸಿಟಿವಿ ಫೂಟೇಜ್ ಗಮನಿಸಿದಾಗ ಬಾರ್ ಮುಂಭಾಗ ಮಾನವನ ನೆರಳಿನಂತಹ ಆಕೃತಿ ನಡೆಯುವುದು ಕಂಡು ಬೆಚ್ಚಿಬಿದ್ದಿದ್ದಾರೆ.

Viral Video: ಪಬ್​ನ ಒಳಗೆ ತಮ್ಮ ಪಾಡಿಗೆ ತಾವೇ ವಸ್ತುಗಳ ಚಲನೆ!; ಕುತೂಹಲಕಾರಿ ವಿಡಿಯೋ ನೋಡಿ
ಪಬ್​ನ ಒಳಗೆ ತಮ್ಮ ಪಾಡಿಗೆ ತಾವೇ ವಸ್ತುಗಳ ಚಲನೆ
Follow us
TV9 Web
| Updated By: ganapathi bhat

Updated on: Jan 20, 2022 | 4:11 PM

ಪಬ್​ ಒಳಗಿನ ವಸ್ತುಗಳು ತಮ್ಮ ಪಾಡಿಗೆ ತಾವೇ ಸ್ಥಳಾಂತರ ಆಗಲು ತೊಡಗಿದಂತೆ ಪಬ್ ಓನರ್​ಗಳು ಇಬ್ಬರು ಅವಾಕ್ಕಾಗಿ ನಿಂತು ನೋಡಿದ್ದಾರೆ. ಡಾರ್ಲಿಂಗ್​ಟನ್​ನ ಮಾರ್ಪೆತ್ ಎಂಬಲ್ಲಿನ ಪಬ್ ಓನರ್​ಗಳು ಇಬ್ಬರು ಹೀಗೆ ವಸ್ತುಗಳು ತಮ್ಮ ಪಾಡಿಗೆ ತಾವೇ ಅಲುಗಾಡುವುದನ್ನು ನೋಡಿ ಶಾಕ್ ಆಗಿದ್ದಾರೆ. ರಿಚೆಲ್ಲೆ ಸ್ಟಾಕ್ಸ್ ಹಾಗೂ ಅಶ್ಲೆಘ್ ನೈಸ್​ಬಿಟ್ ಎಂಬ ಇಬ್ಬರ ಬ್ಲಾಕ್ ಅಂಡ್ ಗ್ರೇ ಪಬ್​ನಲ್ಲಿ ಘಟನೆ ನಡೆದಿದೆ. ಈ ಗಂಭೀರ ಘಟನೆಯ ಬಳಿಕ ಪೊಲೀಸರನ್ನು ಕೂಡ ಕರೆದು ಮಾಹಿತಿ ನೀಡಿದ್ದಾರೆ.

ಇದು ಬಹಳ ವರ್ಷಗಳಿಂದ ಏನಲ್ಲ. ಆದರೆ ತೀರಾ ಇತ್ತೀಚೆಗಿನ ಅವರ ಅನುಭವ ಆಗಿದೆ. ಕಳೆದ ಆಗಸ್ಟ್​ ತಿಂಗಳಿನಿಂದ ಇಂತಹ ಕುತೂಹಲಕಾರಿ ಘಟನೆಗಳನ್ನು ಅವರು ಗಮನಿಸುತ್ತಿದ್ದಾರೆ. ಪಬ್ ಒಳಗಿನ ಕೆಲ ವಸ್ತುಗಳು ಅವುಗಳಾಗಿಯೇ ಕದಲುತ್ತಿರುವುದನ್ನು ಅವರು ನೋಡುತ್ತಿದ್ದಾರೆ.

ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಘಟನೆಗಳು ಸೆರೆ ಆಗಿವೆ. ಪಬ್​ನಲ್ಲಿ ಒಂದು ಪೆನ್ ಸ್ಪಿನ್ ಆಗುತ್ತಿರುವುದು ಹಾಗೂ ಬ್ರಶ್ ಕದಲುತ್ತಾ ಇರುವುದನ್ನು ಅವರು ಸಿಸಿಟಿವಿ ಫೂಟೇಕ್ ಮೂಲಕವೂ ಕಂಡಿದ್ದಾರೆ. ಆ ಬಳಿಕ ಅಲ್ಲಿನ ಕೆಲಸಗಾರರು ಒಬ್ಬಂಟಿಗರಾಗಿ ಕೆಲಸ ಮಾಡಲು ಭಯಪಡುತ್ತಿದ್ದಾರೆ.

2021ರ ಸಪ್ಟೆಂಬರ್ ತಿಂಗಳಿನಲ್ಲಿ ಇಬ್ಬರು ಸಹೋದರಿಯರು ತಮ್ಮ ಕೆಳಗಿನ ಮಹಡಿಯಿಂದ ಜೋರಾದ ಸದ್ದು ಬರುವುದನ್ನು ಕೇಳಿದ್ದಾರೆ. ಅವರು ಘಟನೆಯನ್ನು ವಿವರಿಸಿದಾಗ ಪೊಲೀಸರಿಗೆ ಯಾವುದೇ ಸೂಕ್ತ ಸಾಕ್ಷಿ ಸಿಕ್ಕಿಲ್ಲ. ಅವರು ಸ್ವತಃ ಸಿಸಿಟಿವಿ ಫೂಟೇಜ್ ಗಮನಿಸಿದಾಗ ಬಾರ್ ಮುಂಭಾಗ ಮಾನವನ ನೆರಳಿನಂತಹ ಆಕೃತಿ ನಡೆಯುವುದು ಕಂಡು ಬೆಚ್ಚಿಬಿದ್ದಿದ್ದಾರೆ.

ಹಾಗೂ ಇದಿಷ್ಟೇ ಕುತೂಹಲಕಾರಿ ವಿಷಯ ಅಲ್ಲ. ಇದಕ್ಕಿಂತಲೂ ಹೆಚ್ಚಾಗಿ ಆ ಸಹೋದರಿಯರು ಇಬ್ಬರು ಈಗ ಆ ದೆವ್ವದ ಜೊತೆಗೂ ಮಾತನಾಡುತ್ತಾರೆ. ಅದನ್ನುಅವರಿಬ್ಬರು ಪೌಲ್ ಎಂದು ಕರೆಯುತ್ತಾರೆ. ಆದರೆ, ಪೊಲೀಸರಿಗೆ ಮಾತ್ರ ಈ ಪ್ರಕರಣ ಭೇದಿಸಲು ಸೂಕ್ತ ವಿವರಗಳು ಸಿಕ್ಕಿಲ್ಲ.

ಇದನ್ನೂ ಓದಿ: ದುಬೈ ಎಕ್ಸ್​ಪೋ 2020ರ ಜಾಹೀರಾತಿನ ಚಿತ್ರೀಕರಣ ಹೇಗಿತ್ತು ಗೊತ್ತಾ? ತೆರೆಮರೆಯ ವಿಡಿಯೋ ಹಂಚಿಕೊಂಡ ದುಬೈ ಎಮಿರೇಟ್ಸ್​

ಇದನ್ನೂ ಓದಿ: Shocking Video: ಕೊರೊನಾ ಲಸಿಕೆಯಿಂದ ಪಾರಾಗಲು ಮರವೇರಿ ಕುಳಿತ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್