Shocking Video: ಕೊರೊನಾ ಲಸಿಕೆಯಿಂದ ಪಾರಾಗಲು ಮರವೇರಿ ಕುಳಿತ ವ್ಯಕ್ತಿ; ವೈರಲ್ ವಿಡಿಯೋ ಇಲ್ಲಿದೆ
Viral Video: ಆರೋಗ್ಯ ಅಧಿಕಾರಿಯೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೊವಿಡ್ ಲಸಿಕೆಯಿಂದ ತಪ್ಪಿಸಿಕೊಳ್ಳಲು ಮರವನ್ನು ಹತ್ತುತ್ತಿರುವುದನ್ನು ನೋಡಬಹುದು.
ನವದೆಹಲಿ: ಭಾರತದಲ್ಲಿ ಕೊವಿಡ್ ರೂಪಾಂತರಿಗಳು (Covid Variant) ಹರಡುತ್ತಿರುವುದರಿಂದ ಕೊರೊನಾ ಲಸಿಕೆಯ ಅಭಿಯಾನ ಆರಂಭಿಸಲಾಗಿದೆ. ಆದರೆ, ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಜಾಗೃತಿ ಅಭಿಯಾನದಲ್ಲಿ ತೊಡಗಿರುವ ಅಧಿಕಾರಿಗಳ ತಂಡವು ಅಲ್ಲಿನ ಗ್ರಾಮಸ್ಥರಿಗೆ ಲಸಿಕೆ ಹಾಕಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಯಾವುದೇ ಕಾರಣಕ್ಕೂ ಕೊವಿಡ್ ಲಸಿಕೆ (Covid Vaccine) ಹಾಕಿಸಿಕೊಳ್ಳವುದಿಲ್ಲ ಎಂದು ಗಲಾಟೆ ಮಾಡಿದ ಗ್ರಾಮಸ್ಥರ ಮನವೊಲಿಸಿ, ಲಸಿಕೆ ಹಾಕುವುದೇ ಅಧಿಕಾರಿಗಳಿಗೆ ದೊಡ್ಡ ಸವಾಲಾಯಿತು. ಈ ವೇಳೆ ವ್ಯಕ್ತಿಯೊಬ್ಬರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂದು ಮರ ಹತ್ತಿ ಕುಳಿತ ಘಟನೆಯೂ ನಡೆಯಿತು.
ಆರೋಗ್ಯ ಅಧಿಕಾರಿಯೊಬ್ಬರು ಚಿತ್ರೀಕರಿಸಿದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಕೊವಿಡ್ ಲಸಿಕೆಯಿಂದ ತಪ್ಪಿಸಿಕೊಳ್ಳಲು ಮರವನ್ನು ಹತ್ತುತ್ತಿರುವುದನ್ನು ನೋಡಬಹುದು. ಅಧಿಕಾರಿಗಳು ಆ ವ್ಯಕ್ತಿಯ ಬಳಿಗೆ ಬಂದಾಗ ಆ ವ್ಯಕ್ತಿ ಸಣ್ಣ ಮರದ ಮೇಲೆ ಹತ್ತಿದ. ಅವನನ್ನು ಸಮಾಧಾನ ಮಾಡಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಅಧಿಕಾರಿಗಳು ಹೇಳಿದರು. ದಯವಿಟ್ಟು ಮರದಿಂದ ಕೆಳಗೆ ಇಳಿಯಿರಿ ಎಂದು ಅಧಿಕಾರಿಯೊಬ್ಬರು ಹೇಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
#WATCH | Ballia, Bihar: Atul Dubey, Block Development Officer, Reoti says, “A man climbed a tree as he didn’t want to take the vaccine, but agreed to take the jab after he was convinced by our team.”
(Source: Viral Video) pic.twitter.com/aI054zh9Y4
— ANI (@ANI) January 20, 2022
ಸಾಕಷ್ಟು ಪ್ರಯತ್ನಗಳ ನಂತರ, ಅವರು ಮರದಿಂದ ಕೆಳಗಿಳಿದು ಅಧಿಕಾರಿಗಳಿಂದ ಕೊರೊನಾ ಲಸಿಕೆಯನ್ನು ಪಡೆದರು. ವ್ಯಕ್ತಿಯೊಬ್ಬರು ಲಸಿಕೆ ತೆಗೆದುಕೊಳ್ಳಲು ಇಷ್ಟವಿಲ್ಲದ ಕಾರಣ ಮರವನ್ನು ಏರಿದರು. ಆದರೆ ನಮ್ಮ ತಂಡವು ಮನವರಿಕೆ ಮಾಡಿದ ನಂತರ ಲಸಕೆ ತೆಗೆದುಕೊಳ್ಳಲು ಒಪ್ಪಿಕೊಂಡರು ಎಂದು ಅಧಿಕಾರಿ ಅತುಲ್ ದುಬೆ ಹೇಳಿದ್ದಾರೆ.
बागी बलिया
वैक्सीन न लगवाने की जिद पर अड़े नाविक ने स्वास्थ्यकर्मी को पटक दिया pic.twitter.com/A0cktWIVe0
— Utkarsh Singh (@UtkarshSingh_) January 19, 2022
ಉತ್ತರ ಪ್ರದೇಶ ರಾಜ್ಯದಲ್ಲಿ ಬಲ್ಲಿಯಾವು ಒಟ್ಟಾರೆ ವ್ಯಾಕ್ಸಿನೇಷನ್‌ಗಳಲ್ಲಿ ಅತ್ಯಂತ ಕಡಿಮೆ ಶೇಕಡಾವಾರು ಪ್ರಮಾಣವನ್ನು ಹೊಂದಿದೆ. ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವ ಸಮಯದಲ್ಲಿ ಆರೋಗ್ಯ ಅಧಿಕಾರಿಗಳು ವೀಡಿಯೊಗಳನ್ನು ಚಿತ್ರೀಕರಿಸಿದ್ದಾರೆ. ಮರದ ಮೇಲೆ ಹತ್ತಿದ ವ್ಯಕ್ತಿ ಆರಂಭದಲ್ಲಿ ಹಿಂಜರಿದರು. ನಾವು ಅವರಿಗೆ ಮನವರಿಕೆ ಮಾಡಿ ಕೊರೊನಾ ಲಸಿಕೆ ನೀಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೊವ್ಯಾಕ್ಸಿನ್, ಕೊವಿಶೀಲ್ಡ್ ಲಸಿಕೆಗಳ ನಿಯಮಿತ ಮಾರುಕಟ್ಟೆ ಅನುಮೋದನೆಗಾಗಿ ಸಿಡಿಎಸ್ಸಿಒ ವಿಷಯ ತಜ್ಞರ ಸಮಿತಿಯಿಂದ ಶಿಫಾರಸ್ಸು
5 ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೆ ಕೊವಿಡ್-19 ವಿರುದ್ಧ ಲಸಿಕೆ ಹಾಕಬೇಕು: ತಜ್ಞ ಡಾ.ಫಹೀಮ್ ಯೂನಸ್