ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ಫೋಟೋ ವೈರಲ್
ಹುಟ್ಟಿದ ಮಗುವಿನ ಫೋಟೊಗಳನ್ನು ಹೆರಿಗೆ ಮಾಡಿಸಿದ ಕೆನಡಾದ ವೈದ್ಯೆ ಆಶೀಶಾ ಖತೀಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೋಹಾದಿಂದ ಉಗಾಂಡಾಕ್ಕೆ ಹೋಗುತ್ತಿದ್ದ ವಿಮಾನ (Flight)ವೊಂದರಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನದಲ್ಲಿದ್ದ ವೈದ್ಯರು, ವಿಮಾನ ಸಿಬ್ಬಂದಿ ಮತ್ತು ಸಹಪ್ರಯಾಣಿಕರ ಸಹಾಯದಿಂದ ಮಹಿಳೆ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ಆಗ ತಾನೆ ಹುಟ್ಟಿದ ಮಗುವಿನ ಫೋಟೊಗಳನ್ನು ಹೆರಿಗೆ ಮಾಡಿಸಿದ ಕೆನಡಾದ ವೈದ್ಯೆ (Doctor) ಆಶೀಶಾ ಖತೀಬ್ (Aisha Khatib) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನವರಿ 14 ರಂದು ಫೋಟೋಗಳನ್ನು ಹಂಚಿಕೊಂಡಿದ್ದು 17 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದಿದೆ. ಫೋಟೋಗಳನ್ನು ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Is there a doctor on the plane? ??♀️??⚕️Never thought I’d be delivering a baby on a flight! ✈️ @qatarairways Thanks to the airline crew who helped support the birth of this Miracle in the air! Mom and baby are doing well and healthy! #travelmedicine pic.twitter.com/4JuQWfsIDE
— Aisha Khatib, MD (@AishaKhatib) January 13, 2022
ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಿಮಾನ ಟೇಕ್ ಆಪ್ ಆದ ಬಳಿಕ ಮಹಿಳೆಗೆ ಹೆರಿಗೆ ನೋವು ಆರಂಭವಾಗಿದ್ದು, ವಿಮಾನದಲ್ಲಿ ಯಾರಾದರೂ ವೈದ್ಯರು ಇರಬಹುದೆಂದು ಭಾವಿಸಿ ಸಿಬ್ಬಿಂದಿ ಕೂಗಿದ್ದಾರೆ. ಈ ವೇಳೆ ಕನಡಾದ ವೈದ್ಯೆ ಆಶೀಶಾ ಖತೀಬ್ ತಕ್ಷಣ ಸ್ಪಂದಿಸಿ ಮಹಿಳೆಗೆ ಸಹಾಯ ಮಾಡಿದ್ದಾರೆ. ಈ ಕುರಿತು ಕತಾರ್ ಏರ್ಲೈನ್ಸ್ ಫೋಟೋ ಹಂಚಿಕೊಳ್ಳುವ ಮೂಲಕ ವೈದ್ಯರಿಗೆ ಮತ್ತು ಸಹ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದ್ದು, ವೈದ್ಯೆ ಆಶೀಶಾ ಅವರ ಉತ್ತಮ ಪ್ರತಿಕ್ರಿಯೆ ಮತ್ತು ಸಹಕಾರಕ್ಕೆ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಕತಾರ್ನ ವಿಮಾನ ಸಂಸ್ಥೆ ಹಂಚಿಕೊಂಡಿರುವ ಫೋಟೋಗಳಿಗೆ 62 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳಿಸಿದ್ದು,ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
View this post on Instagram
ಇದನ್ನೂ ಓದಿ:
Published On - 2:45 pm, Thu, 20 January 22