ಈ ವ್ಯಕ್ತಿಗೆ ಪ್ರಾಣಿಗಳೇ ಆಹಾರ, ಆರು ದಶಕಗಳಿಂದ ಸ್ನಾನವೂ ಇಲ್ಲ, ಆದರೂ ಆರೋಗ್ಯವಂತ; 87ರ ಈ ವೃದ್ಧನನ್ನು ಕಂಡು ದಂಗಾದ ವಿಜ್ಞಾನಿಗಳು
ಅದೃಷ್ಟ ಮರಳಿ ದೊರಕುತ್ತದೆ ಎಂದು 67 ವರ್ಷಗಳಿಂದ ಸ್ನಾನವನ್ನು ಮಾಡದೆ, ಕೊಚ್ಚೆ ನೀರು ಕುಡಿದುಕೊಂಡು ಎಲ್ಲೆಂದರಲ್ಲಿ ಸಿಕ್ಕ ಆಹಾರವನ್ನು ಸೇವಿಸಿಕೊಂಡು ಬದುಕುತ್ತಿದ್ದಾರೆ. ಅಂತಹ ವ್ಯಕ್ತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಕೆಲವೊಮ್ಮೆ ಎಷ್ಟೇ ದೇವರ ಪೂಜೆ ಮಾಡಿದರೂ, ಒಳ್ಳೆಯ ಕೆಲಸಗಳನ್ನು ಮಾಡಿದರೂ ಅದೃಷ್ಟ ಒಲಿಯುವುದಿಲ್ಲ. ಅಂತಹದ್ದರಲ್ಲಿ ಇಲ್ಲೊಬ್ಬ ವ್ಯಕ್ತಿ ಅದೃಷ್ಟ ಮರಳಿ ದೊರಕುತ್ತದೆ ಎಂದು 67 ವರ್ಷಗಳಿಂದ ಸ್ನಾನವನ್ನು ಮಾಡದೆ, ಕೊಚ್ಚೆ ನೀರು ಕುಡಿದುಕೊಂಡು ಎಲ್ಲೆಂದರಲ್ಲಿ ಸಿಕ್ಕ ಆಹಾರವನ್ನು ಸೇವಿಸಿಕೊಂಡು ಬದುಕುತ್ತಿದ್ದಾರೆ. ಅಂತಹ ವ್ಯಕ್ತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇಷ್ಟೊಂದು ಕೊಳಕಿನಲ್ಲಿ ಜೀವನ ನಡೆಸುತ್ತಿರುವ 87 ವರ್ಷ ವಯಸ್ಸಿನ ವ್ಯಕ್ತಿಯ ಆರೋಗ್ಯವನ್ನು ಕಂಡು ವಿಜ್ಞಾನಿಗಳೇ ದಂಗಾಗಿದ್ದಾರೆ. ಈ ವ್ಯಕ್ತಿಯ ಹೆಸರು ಅಮೌ ಜಾಜಿ ಎಂದಾಗಿದೆ. ಇರಾನ್ನಲ್ಲಿ ವಿಜ್ಞಾನಿಗಳು ಈ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ.
ಟೈಮ್ಸ್ ನೌ ವರದಿ ಪ್ರಕಾರ ಆರು ದಶಕಗಳ ಹಿಂದೆ ಮನೆಯನ್ನು ತೊರೆದು ಸಣ್ಣ ಗುಡಿಸಿಲಿನಲ್ಲಿ ವಾಸಿಸುವ ಅಮೌ ಜಾಜಿ ಮೊಲ ಮತ್ತು ಮುಳ್ಳುಹಂದಿಗಳನ್ನು ಆಹಾರವನ್ನಾಗಿಸಿಕೊಂಡಿದ್ದಾರೆ. ಸದಾ ಕಾಲ ಒಂಟಿಯಾಗಿರುವ ಇವರು ಕೊಚ್ಚೆ ನೀರನ್ನು ಸೇವಿಸುತ್ತಾರೆ. ಆದರೂ ಇವರ ದೇಹದಲ್ಲಿ ಬ್ಯಾಕ್ಟಿರಿಯಾಗಳು ಬೆಳವಣಿಗೆಯಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಲ್ಲದೆ ಅವರು ಯಾವುದೇ ಸೊಂಕಿಲ್ಲದೆ ಆರೋಗ್ಯವಾಗಿರುವುದನ್ನು ಕಂಡು ವಿಜ್ಞಾನಿಗಳೇ ತಬ್ಬಿಬ್ಬಾಗಿದ್ದಾರೆ. ಸದಾ ಕಾಲ ಒಂಟಿಯಾಗಿರುವ ಅಮೌ ಜಾಜಿ ಯಾರೋಬ್ಬರು ಸ್ನೇಹಿತರನ್ನು ಹೊಂದಿಲ್ಲ. ಹೀಗೆ ಒಬ್ಬಂಟಿಯಾಗಿ ಕುಳಿತ ಅವರು ಪ್ರಾಣಿಗಳ ಗೊಬ್ಬರವನ್ನು ಪೈಪ್ನಲ್ಲಿ ತುಂಬಿಸಿಕೊಂಡು ಧೂಮಪಾನದ ರೀತಿ ಸೇವಿಸುತ್ತಾರೆ. ವರದಿಯ ಪ್ರಕಾರ ಅದು ಅವರ ನೆಚ್ಚಿನ ಸಮಯವಾಗಿದೆ.
87 ವರ್ಷದ ಈ ವ್ಯಕ್ತಿ ಇರಾನ್ನ ದೇಜ್ಗಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಭೂಮಿಯಲ್ಲಿ ರಂಧ್ರವನ್ನು ಕೊರೆದು ವಾಸಿಸುತ್ತಿದ್ದರು ಎನ್ನಲಾಗಿದ್ದು, ಅವರ ಪರಿಸ್ಥಿತಿ ಕಂಡು ಸ್ಥಳೀಯರು ಗುಡಿಸಲನ್ನು ನಿರ್ಮಿಸಿಕೊಟ್ಟಿದ್ದಾರೆ. ದೇಜ್ಗಾ ಗ್ರಾಮಕ್ಕೆ ಭೇಟಿ ನೀಡಿದ ಪರಾವಲಂಬಿ ಶಾಸ್ತ್ರದ ಸಹ ಪ್ರಾಧ್ಯಾಪಕರೊಬ್ಬರು ಟೆಹ್ರಾನ್‌ನಲ್ಲಿರುವ ಸ್ಕೂಲ್ ಆಫ್ ಪಬ್ಲಿಕ್ ಶಾಲೆಯಲ್ಲಿ ಅಮೌ ಜಾಜಿ ಆರೋಗ್ಯ ಪರೀಕ್ಷೆ ಮಾಡಿದ್ದರು. ಈ ವೇಳೆ ಯಾವುದೇ ರೋಗವಾಗಲೀ, ಬ್ಯಾಕ್ಟೀರಿಯಾಗಳಾಗಲೀ ಕಂಡುಬಂದಿಲ್ಲ ಎಂದಿದ್ದಾರೆ. ಆರು ದಶಕಗಳ ಕಾಲ ಸ್ನಾನ ಮಾಡದೆ, ಸರಿಯಾದ ಆಹಾರವನ್ನೂ ತೆಗೆದುಕೊಳ್ಳದೇ ಇರುವ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಪರಾವಲಂಬಿ ಬ್ಯಾಕ್ಟೀರಿಯಾಗಳ ಅಧ್ಯಯನ ಮಾಡಲು ವಿಜ್ಞಾನಿಗಳು ನಿರ್ಧರಿಸಿದ್ದರು. ಆದರೆ 87 ವರ್ಷದ ಈ ವ್ಯಕ್ತಿಯಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಕಾಣದ ಹಿನ್ಲೆಯಲ್ಲಿ ವಿಜ್ಞಾನಗಳೇ ದಂಗಾಗಿದ್ದಾರೆ.
ಇದನ್ನೂ ಓದಿ:
Published On - 1:30 pm, Thu, 20 January 22