AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: 90 ಕೆಜಿಯ ಐಸ್​ಕ್ರೀಮ್​ ರೋಲರ್​ ನೋಡಿ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು

ರೋಬ್ಬರಿ 90 ಕೆಜಿ ತೂಕವುಳ್ಳ ಐಸ್​ಕ್ರೀಮ್​ ಅನ್ನು ರೋಲರ್​ ನಲ್ಲಿ ತಯಾರಿಸಿ ಸರ್ವ್​ ಮಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video: 90 ಕೆಜಿಯ ಐಸ್​ಕ್ರೀಮ್​ ರೋಲರ್​ ನೋಡಿ ಬಾಯಲ್ಲಿ ನೀರೂರಿಸಿಕೊಂಡ ನೆಟ್ಟಿಗರು
ಐಸ್​ಕ್ರೀಮ್​ ರೋಲರ್
TV9 Web
| Edited By: |

Updated on:Jan 20, 2022 | 10:05 AM

Share

ಸಾಮಾನ್ಯವಾಗಿ ಎಲ್ಲರೂ ಸ್ಟ್ರೀಟ್​​ ಫುಡ್​  (Street Food) ಗಳ  ಪ್ರಿಯರೇ ಆಗಿರುತ್ತಾರೆ. ಬೀದಿ ಬದಿಯಲ್ಲಿ ಸಿಗುವ ಪಾನಿ ಪುರಿ, ಗೋಲಗಪ್ಪಗಳನ್ನು ಎಲ್ಲರೂ ತಿಂದಿರುತ್ತಾರೆ. ಆದರೆ ಎಂದಾದರೂ ​ ರೋಲರ್​ನಲ್ಲಿನ ಐಸ್​ ಕ್ರೀಮ್​ ಅನ್ನು ಎಂದಾದರೂ ತಿಂದಿದ್ದೀರಾ? ಹೌದು ಬರೋಬ್ಬರಿ 90 ಕೆಜಿ ತೂಕವುಳ್ಳ ಐಸ್​ಕ್ರೀಮ್​ ರೋಲರ್ (Ice cream Roler)​ ಅನ್ನು ತಯಾರಿಸಿ ಸರ್ವ್​ ಮಾಡುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೆಹಲಿಯ ಕಮಲಾ ನಗರ್​ ಎನ್ನುವಲ್ಲಿ ತಯಾರಿಸಿದ ಈ ಐಸ್​ಕ್ರೀಮ್​ ಅನ್ನು ಫುಡ್​ ಬ್ಲಾಗರ್ (food Blogger)​ ಒಬ್ಬರು ಟೇಸ್ಟ್​ ಮಾಡಿದ್ದು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ಸಖತ್​ ವೈರಲ್​ ಆಗಿದೆ.

ವಿಡಿಯೋದಲ್ಲಿ ಮೊದಲು ಐಸ್​ಕ್ಯೂಬ್​ ಒಂದನ್ನು ರೋಲರ್​ ಒಳಗೆ ಹಾಕಿ ನಂತರ ಅದರ ಮೇಲೆ ವಿವಿಧ ಪ್ಲೇವರ್​ಗಳ ದ್ರವವನ್ನು ಹಾಕುವುದನ್ನು ಕಾಣಬಹುದು. ನಂತರ ಅದನ್ನು ಒಂದು ಪಲ್ಏಠ್​ಗೆ ಹಾಕಿ ನೀಡುತ್ತಾರೆ.  ಲಕ್ಷಯ್​ ತರ್ಲೇಜಾ ಎನ್ನುವ ಫುಡ್​ ಬ್ಲಾಗರ್​ ಇದರ ವಿಡಿಯೋವನ್ನು ಹಂಚಿಕೊಂಡಿದ್ದು ವಿಭಿನ್ನ ರುಚಿಯ ತಿನಿಸು ಎಂದಿದ್ದಾರೆ.  ವಿಡಿಯೋದಲ್ಲಿ ಒಂದು ಪ್ಲೇಟ್​ ಐಸ್​ ಕ್ರೀಮ್​ ಬೆಲೆ ಕೇವಲ 60 ರೂ. ಅವಶ್ಯವಾಗಿ ತಿನ್ನಬಹುದಾದ ತಿನಿಸು ಎಂದು ಫುಡ್​​ ಬ್ಲಾಗರ್​ ಮಾಹಿತಿ ಹಂಚಿಕೊಂಡಿದ್ದಾರೆ. ವೈರಲ್​​ ಆಗಿರುವ ವಿಡಿಯೋಗೆ 25 ಸಾವಿರಕ್ಕೂ ಹೆಚ್ಚು ಲೈಕ್ಸ್​ ಬಂದಿದ್ದು, ನೆಟ್ಟಿಗರು ಹೊಸ ತಿನಿಸನ್ನು ಮೆಚ್ಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ಐಸ್​ಕ್ರೀಮ್​ ಮಸಾಲಾ ದೋಸೆಯ ವಿಡಿಯೋವನ್ನು ಫುಡ್​ ಬ್ಲಾಗರ್​ ಒಬ್ಬರು ಹಂಚಿಕೊಂಡಿದ್ದರು. ಅದನ್ನು ನೋಡಿ ನೆಟ್ಟಿಗರು ಇದೆಂತಹ ತಿನಿಸು ಎಂದು ಮೂಗು ಮುರಿದಿದ್ದರು. ಇದೀಗ ಐಸ್​ ಕ್ರೀಮ್​ ರೋಲರ್​ ನೋಡಿ ಮೆಚ್ಚಿಕೊಂಡಿದ್ದು, ಒಂದು ಬಾರಿಯಾದರೂ ಟೇಸ್ಟ್​ ನೋಡಬೇಕು ಎನ್ನುತ್ತಿದ್ದಾರೆ.

ಇದನ್ನೂ ಓದಿ:

Viral Video: ಮಸಾಲಾ ದೋಸೆ ಐಸ್​ಕ್ರೀಮ್​ ಕಂಡು ಮೂಗುಮುರಿದ ನೆಟ್ಟಿಗರು

Published On - 10:03 am, Thu, 20 January 22

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ