ದುಬೈ ಎಕ್ಸ್ಪೋ 2020ರ ಜಾಹೀರಾತಿನ ಚಿತ್ರೀಕರಣ ಹೇಗಿತ್ತು ಗೊತ್ತಾ? ತೆರೆಮರೆಯ ವಿಡಿಯೋ ಹಂಚಿಕೊಂಡ ದುಬೈ ಎಮಿರೇಟ್ಸ್
ದುಬೈ ಎಕ್ಸ್ಪೋ 2020ರ ಪ್ರಮೋಷನಲ್ ವಿಡಿಯೋ ಇದಾಗಿದ್ದು, ವಿಡಿಯೋ ತಯಾರಿಯ ತೆರೆಮರೆಯ ದೃಶ್ಯಗಳನ್ನು ಒಂದುಗೂಡಿಸಿ ಎಮಿರೇಟ್ಸ್ ಏರ್ಲೈನ್ಸ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಯುನೈಟೆಡ್ ಅರಬ್ ಎಮಿರೆಟ್ಸ್ (United Arab Emirates)ನ ಅತಿದೊಡ್ಡ ಏರ್ಲೈನ್ ಎಮಿರೆಟ್ (Emirates) ಕೆಲವು ದಿನಗಳ ಹಿಂದೆ ಸಿಬ್ಬಂದಿಯಾದ ನಿಕೋಲ್ ಸ್ಮಿತ್ ಲುಡ್ವಿಕ್ ಅವರನ್ನು ಬುರ್ಜ್ ಖಲೀಫಾದ (Burj Khalifa) ತುತ್ತತುದಿಯಲ್ಲಿ ನಿಲ್ಲಿಸಿ ವಿಡಿಯೋವೊಂದನ್ನು ಚಿತ್ರೀಕರಿಸಿ ವಿಡಿಯೋ ಜಾಹೀರಾತೊಂದನ್ನು ಬಿಡುಗಡೆ ಮಾಡಿತ್ತು. ವಿಭಿನ್ನ ವಿಡಿಯೋ ಮೂಲಕ ಜಗತ್ತಿನ ಗಮನ ಸೆಳೆದಿದ್ದ ಎಮಿರೇಟ್ಸ್ ಇದೀಗ ಜಾಹೀರಾತನ್ನು ಚಿತ್ರೀಕರಣ ಮಾಡಿದ ಹಿಂದಿನ ಕೆಲಸದ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದೆ. ದುಬೈ ಎಕ್ಸ್ಪೋ 2020ರ ಪ್ರಮೋಷನಲ್ ವಿಡಿಯೋ ಇದಾಗಿದೆ. ವಿಡಿಯೋ ತಯಾರಿಯ ತೆರೆಮರೆಯ ದೃಶ್ಯಗಳನ್ನು ( Behind-the-scenes) ಒಂದುಗೂಡಿಸಿ ಎಮಿರೇಟ್ಸ್ ಏರ್ಲೈನ್ಸ್ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
We did it again…only better! Watch behind the scenes to see how we took our A380 for a spin around the @BurjKhalifa for the making of our new advertisement. pic.twitter.com/cnjeeHc7VO
— Emirates Airline (@emirates) January 17, 2022
ಝೀ ನ್ಯೂಸ್ ವರದಿಯ ಪ್ರಕಾರ ಈ ಕುರಿತು ಎಮಿರೆಟ್ಸ್, ಜಾಹೀರಾತಿನ ಶೂಟ್ಗಾಗಿ ಸಾಕಷ್ಟು ತಯಾರಿಗಳನ್ನು ನಡೆಸಲಾಗಿತ್ತು. ವಿಮಾನವು ಯಾವ ದಿಕ್ಕಿನಲ್ಲಿ ಹಾರಾಟ ನಡೆಸುತ್ತದೆ. ಸ್ಟಂಟ್ಅನ್ನು ಯಾವಾಗ ಮಾಡಬೇಕು, ಮುಖ್ಯವಾಗಿ ಇತರ ವಿಮಾನಗಳಿಗೆ ಹಾರಾಟ ನಡೆಸಲು ಯಾವುದೇ ರೀತಿಯ ತೊಂದರೆ ಆಗದಂತೆ ಶೂಟಿಂಗ್ ಮಾಡಲು ಯೋಜನೆ ರೂಪಿಸಲಾಗಿತ್ತು. ಒಂದು ಬಾರಿ ಎಲ್ಲ ರೀತಿಯ ಪ್ಲಾನಿಂಗ್ಗಳನ್ನು ಮಾಡಿಕೊಂಡ ನಂತರ ಅಗತ್ಯವಿರುವ ಅನುಮತಿಗಳನ್ನು ಪಡೆಯಲಾಯಿತು ನಂತರ 2021ರ ಅಕ್ಟೋಬರ್ 13 ಮತ್ತು 14 ರಂದು ದುಬೈನಲ್ಲಿ ವಿಮಾನವನ್ನು ಹಾರಾಟ ನಡೆಸಿ ಚಿತ್ರೀಕರಣ ಮಾಡಲಾಗಿದೆ. A380 ವಿಮಾನವನ್ನು ಒಟ್ಟು 11 ಹಾರಿಸಿ ಈ ಅದ್ಭುತವಾದ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಬುರ್ಜ್ ಖಲೀಪಾ ಮೇಲೆ ವಿಮಾನ ಸಿಬ್ಬಂದಿ ನಿಕೋಲ್ ಸ್ಮಿತ್ ಲುಡ್ವಿಕ್ ಅವರನ್ನು ನಿಲ್ಲಿಸಿ ವಿಮಾನವನ್ನು ಹಾರಿಸಲಾಯಿತು, ವಿಮಾನವು ಬುರ್ಜ್ ಖಲೀಪಾದಿಂದ ಅರ್ಧ ಮೈಲಿಯಷ್ಟು ದೂರದಲ್ಲಿ ಹಾರಾಟ ನಡೆಸುತ್ತಿತ್ತು. ವಿಮಾನವು 2,700 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿತ್ತು. ವಿಮಾನವು ತಾಸಿಗೆ 269 ಕಿಮೀ ವೇಗದಲ್ಲಿ ಹಾರಾಟ ನಡೆಸುತ್ತಿತ್ತು. ಸಾಮಾನ್ಯವಾಗಿ ವಿಮಾನವು ಇದಕ್ಕಿಂತ ವೇಗದಲ್ಲಿ ಹಾರಾಟ ನಡೆಸುತ್ತದೆ. ವಿಮಾನದ ಲ್ಯಾಂಡಿಂಗ್ ವೇಳೆಯಲ್ಲಿ ಮಾತ್ರ ಇಷ್ಟು ನಿಧಾನವಾಗಿ ಇಳಿಯುತ್ತದೆ ಎಂದು ಹೇಳಿದೆ.
ವಿಡಿಯೋ ಜಾಹೀರಾತಿನಲ್ಲಿ ನಿಕೋಲ್ ಸ್ಮಿತ್ ಬುರ್ಜ್ ಖಲೀಫಾ ಮೇಲೆ ನಿಂತು ಕೈಯಲ್ಲಿ ಸಂದೇಶದ ಕಾರ್ಡ್ಗಳನ್ನು ಹಿಡಿದಿದ್ದಾರೆ.‘ನಾನಿನ್ನೂ ಇಲ್ಲಿಯೇ ಇದ್ದೇನೆ, ನನಗೆ ಇಲ್ಲಿಂದ ದುಬೈ ಎಕ್ಸ್ಪೋ ಕಾಣಿಸುತ್ತಿದೆ ಎಂಬ ಬೋರ್ಡ್ ತೋರಿಸುತ್ತಾರೆ. ಅಂದರೆ ವಿಶ್ವದ ಮಹಾನ್ ಶೋ ದುಬೈ ಎಕ್ಸ್ಪೋಕ್ಕೆ ಎಮಿರೇಟ್ಸ್ ಎ 380 ಎಂಬ ವಿಮಾನ ಹಾರಾಟ ನಡೆಸುತ್ತದೆ. ಅದರ ಅವಕಾಶ ಉಪಯೋಗಿಸಿಕೊಳ್ಳಬಹುದು ಎಂದು ಜಾಹೀರಾತು ಆಗಿದೆ. ನಿಕೋಲ್ ಒಂದು ಕಡೆ ಸಂದೇಶದ ಬೋರ್ಡ್ಗಳನ್ನು ತೋರಿಸುತ್ತಿದ್ದರೆ, ಅಲ್ಲಿಯೇ ದುಬೈ ಎಕ್ಸ್ಪೋ ಎಂದು ಬರೆಯಲ್ಪಟ್ಟ, ವಿಮಾನ ಹಾರುವುದನ್ನು ವಿಡಿಯೋದಲ್ಲಿ ನೋಡಬಹುದು.
ಇದನ್ನೂ ಓದಿ:
ವಿಮಾನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ: ಫೋಟೋ ವೈರಲ್
Published On - 3:36 pm, Thu, 20 January 22