‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​-ವಿಷ್ಣುವರ್ಧನ್​ ಏಕೆ ಒಟ್ಟಾಗಿ ನಟಿಸಲಿಲ್ಲ? ಕಾರಣ ನೀಡಿದ ಹಿರಿಯ ನಟ

ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಬೆಂಗಳೂರು ನಾಗೇಶ್ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ. ‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​ ಹಾಗೂ ವಿಷ್ಣುವರ್ಧನ್​ ಏಕೆ ಮತ್ತೆ ಒಟ್ಟಾಗಿ ನಟಿಸಿಲ್ಲ ಎನ್ನುವುದನ್ನು ವಿವರಿಸಿದ್ದಾರೆ.

TV9kannada Web Team

| Edited By: Madan Kumar

Jan 21, 2022 | 8:12 AM

ರಾಜ್​ಕುಮಾರ್​ (Raj Kumar) ಹಾಗೂ ವಿಷ್ಣುವರ್ಧನ್ (Vishnuvardhan)​ ಅವರು ‘ಗಂಧದ ಗುಡಿ’ (Gandhada Gudi) ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ವಿಷ್ಣುವರ್ಧನ್​ ಅವರದ್ದು ನೆಗೆಟಿವ್​ ಪಾತ್ರ. ರಾಜ್​ಕುಮಾರ್​ ಫಾರೆಸ್ಟ್​ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ತೆರೆಕಂಡ ಬಳಿಕ ಮತ್ತೆ ಇಬ್ಬರೂ ಒಟ್ಟಾಗಿ ನಟಿಸಿಲ್ಲ. ಇದಕ್ಕೆ ಕಾರಣವೇನು? ಆ ಪ್ರಶ್ನೆಗೆ ಹಿರಿಯ ನಟ ಬೆಂಗಳೂರು ನಾಗೇಶ್ ಉತ್ತರ ನೀಡಿದ್ದಾರೆ. ‘ಗಂಧದ ಗುಡಿ’, ‘ಮಯೂರ’ ಮೊದಲಾದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ನಾಗೇಶ್​ ಅವರು ಕೆಲಸ ಮಾಡಿದ್ದರು. ‘ಗುರು ಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದರು. ಚಿತ್ರರಂಗಕ್ಕೆ ಸಾಕಷ್ಟು ಸೇವೆಯನ್ನ ಸಲ್ಲಿಸಿರುವ ಬೆಂಗಳೂರು ನಾಗೇಶ್ ತಮ್ಮ ಸಿನಿ ಜೀವನವನ್ನು ಮೆಲುಕು ಹಾಕಿದ್ದಾರೆ. ‘ಗಂಧದ ಗುಡಿ’ ಬಳಿಕ ರಾಜ್​ಕುಮಾರ್​ ಹಾಗೂ ವಿಷ್ಣುವರ್ಧನ್​ ಏಕೆ ಮತ್ತೆ ಒಟ್ಟಾಗಿ ನಟಿಸಿಲ್ಲ ಎನ್ನುವುದನ್ನು ವಿವರಿಸಿದ್ದಾರೆ.

ಇದನ್ನೂ ಓದಿ: ಫಿಲ್ಮ್​ ಫೆಸ್ಟಿವಲ್​ ಸಲಹಾ ಸಮಿತಿಯಲ್ಲಿ ಪುನೀತ್ ರಾಜ್​ಕುಮಾರ್​ ಪತ್ನಿ ಅಶ್ವಿನಿ

ಸಂಕ್ರಾಂತಿ ಹಬ್ಬದಲ್ಲಿ ಪುನೀತ್​ ರಾಜ್​ಕುಮಾರ್​ ನೆನಪು; ಫ್ಯಾನ್ಸ್​ ಜೊತೆ ಹೊಸ ಸುದ್ದಿ ಹಂಚಿಕೊಂಡ ಶಿವಣ್ಣ

Follow us on

Click on your DTH Provider to Add TV9 Kannada