ಅಪ್ಪು ನಿಧನದ ಬಳಿಕ ಮತ್ತೆ ಸಿನಿಮಾ ಕೆಲಸದಲ್ಲಿ ಬ್ಯುಸಿ ಆದ ವಿನಯ್​ ರಾಜ್​ಕುಮಾರ್​; ಇಲ್ಲಿದೆ ಮೇಕಿಂಗ್​ ವಿಡಿಯೋ

ರಾಘವೇಂದ್ರ ರಾಜ್​ಕುಮಾರ್​ ಪುತ್ರ ವಿನಯ್​ ರಾಜ್​ಕುಮಾರ್​ ಅವರು ‘ಅಂದೊಂದಿತ್ತು ಕಾಲ’ ಚಿತ್ರದ ಕೆಲಸಗಳಲ್ಲಿ ಈಗ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ.

TV9kannada Web Team

| Edited By: Madan Kumar

Jan 21, 2022 | 4:24 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ನಿಧನದಿಂದ ಡಾ. ರಾಜ್​ಕುಮಾರ್​ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣ ಆಗಿತ್ತು. ಕಳೆದ ವರ್ಷ ಅ.29ರಂದು ಹೃದಯಾಘಾತದಿಂದ ಅಪ್ಪು ಕೊನೆಯುಸಿರು ಎಳೆದ ಬಳಿಕ ದೊಡ್ಮನೆಯ ಸಿನಿಮಾ ಚಟುವಟಿಕೆಗಳು ಕೂಡ ನಿಂತಿದ್ದವು. ಆದರೆ ಜೀವನ ಮುಂದುವರಿಯಲೇಬೇಕು. ಹಾಗಾಗಿ ಡಾ. ರಾಜ್​ ಕುಟುಂಬದ ಹೀರೋಗಳು ಮತ್ತೆ ಕ್ಯಾಮೆರಾ ಎದುರಿಸುತ್ತಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಪುತ್ರ ವಿನಯ್​ ರಾಜ್​ಕುಮಾರ್ (Vinay Rajkumar)​ ಅವರು ‘ಅಂದೊಂದಿತ್ತು ಕಾಲ’ ಚಿತ್ರದ ಕೆಲಸಗಳಲ್ಲಿ ಈಗ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ಶೂಟಿಂಗ್​ ಮುಗಿದಿದೆ. ಅದರ ಮೇಕಿಂಗ್​ ವಿಡಿಯೋ ಇಲ್ಲಿದೆ. ಪ್ರಸ್ತುತ ‘ಅಂದೊಂದಿತ್ತು ಕಾಲ’ ಸಿನಿಮಾಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅತ್ತ ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಮತ್ತು ಶಿವರಾಜ್​ಕುಮಾರ್​ ಅವರು ಜೊತೆಯಾಗಿ ‘ಜೇಮ್ಸ್​’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಎಲ್ಲ ಸುದ್ದಿಗಳಿಂದಾಗಿ ಸಿನಿಪ್ರಿಯರು ಖುಷ್​ ಆಗಿದ್ದಾರೆ.

ಇದನ್ನೂ ಓದಿ:

ಅಮೇಜಾನ್​ ಪ್ರೈಮ್​​ನಲ್ಲಿ ರಿಲೀಸ್​ ಆಗುತ್ತಿದೆ ಪುನೀತ್​ ನಿರ್ಮಾಣದ ಮೂರು ಸಿನಿಮಾಗಳು

‘ಜೇಮ್ಸ್’​ ಚಿತ್ರದಲ್ಲಿ ಪುನೀತ್​, ಶಿವಣ್ಣ, ರಾಘಣ್ಣ; ​ಫ್ಯಾನ್ಸ್​ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್​

Follow us on

Click on your DTH Provider to Add TV9 Kannada