ಅಮೇಜಾನ್ ಪ್ರೈಮ್ನಿಂದ ಬಂಪರ್ ಆಫರ್; ಈ ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯ
ಒಟಿಟಿ ವ್ಯಾಪ್ತಿ ದಿನೇದಿನೇ ಹೆಚ್ಚುತ್ತಿದೆ. ವೀಕ್ಷಕರನ್ನು ಸೆಳೆಯೋಕೆ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳು ನಾನಾ ತಂತ್ರ ಉಪಯೋಗಿಸುತ್ತಿವೆ. ಅದೇ ರೀತಿ ಅಮೇಜಾನ್ ಪ್ರೈಮ್ ವಿಡಿಯೋ ಕೂಡ ಈಗ ವೀಕ್ಷಕರಿಗೆ ಬಂಪರ್ ಆಫರ್ ನೀಡಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದೊಡ್ಡ ನಷ್ಟ. ನಟನಾಗಿ ಹಲವು ಸಿನಿಮಾಗಳಲ್ಲಿ ಅವರು ನಟಿಸುವವರಿದ್ದರು. ನಿರ್ಮಾಪಕನಾಗಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಬೇಕಿತ್ತು. ಆದರೆ, ಯಾವುದನ್ನೂ ಮಾಡೋಕೆ ಆ ದೇವರು ಅವಕಾಶ ನೀಡಿಲ್ಲ. ಸಣ್ಣ ವಯಸ್ಸಿನಲ್ಲೇ ಪುನೀತ್ ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಪುನೀತ್ ಅವರನ್ನು ನಾನಾ ರೀತಿಯಲ್ಲಿ ನೆನಪು ಮಾಡಿಕೊಳ್ಳುವ ಕಾರ್ಯ ಎಲ್ಲರಿಂದಲೂ ಆಗುತ್ತಿದೆ. ಈಗ ಅಮೇಜಾನ್ ಪ್ರೈಮ್ ವಿಡಿಯೋ (Amazon Prime Video) ಬಂಪರ್ ಆಫರ್ ಒಂದನ್ನು ನೀಡಿದೆ. ಪುನೀತ್ ನಿರ್ಮಾಣದ ಹಾಗೂ ಅವರು ನಟಿಸಿದ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶ ಮಾಡಿ ಕೊಡುತ್ತಿದೆ. ಈ ವಿಚಾರ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.
ಒಟಿಟಿ ವ್ಯಾಪ್ತಿ ದಿನೇದಿನೇ ಹೆಚ್ಚುತ್ತಿದೆ. ವೀಕ್ಷಕರನ್ನು ಸೆಳೆಯೋಕೆ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳು ನಾನಾ ತಂತ್ರ ಉಪಯೋಗಿಸುತ್ತಿವೆ. ಅದೇ ರೀತಿ ಅಮೇಜಾನ್ ಪ್ರೈಮ್ ವಿಡಿಯೋ ಕೂಡ ಈಗ ವೀಕ್ಷಕರಿಗೆ ಬಂಪರ್ ಆಫರ್ ನೀಡಿದೆ. ಪುನೀತ್ಗೆ ಸಂಬಂಧಿಸಿದ ಐದು ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸೋಕೆ ಅವಕಾಶ ನೀಡಿದೆ. ಒಂದು ತಿಂಗಳ ಕಾಲ ಈ ಆಫರ್ ಇರಲಿದೆ. ಈ ಮೂಲಕ ಪುನೀತ್ ಅವರಿಗೆ ಭಿನ್ನವಾಗಿ ಗೌರವ ಸೂಚಿಸಲಾಗುತ್ತಿದೆ.
ಪುನೀತ್ ನಿರ್ಮಾಣದ ‘ಕವಲುದಾರಿ’, ‘ಮಾಯಾ ಭಜಾರ್’, ‘ಲಾ’, ‘ಫ್ರೆಂಚ್ ಬಿರಿಯಾನಿ’ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಅವರ ನಟನೆಯ ‘ಯುವರತ್ನ’ ಕೂಡ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರೀಮಿಯರ್ ಆಗಿದೆ. ಈ ಐದೂ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಫೆಬ್ರವರಿ 1ರಿಂದ ಉಚಿತ ವೀಕ್ಷಣೆಗೆ ಅವಕಾಶ ಸಿಗಲಿದ್ದು, ಫೆಬ್ರವರಿ 28ರವರೆಗೆ ಈ ಅವಕಾಶ ಇರಲಿದೆ.
ಪುನೀತ್ ರಾಜ್ಕುಮಾರ್ ಹಾಗೂ ಅಮೇಜಾನ್ ಪ್ರೈಮ್ ವಿಡಿಯೋ ನಡುವೆ ಒಳ್ಳೆಯ ನಂಟಿತ್ತು. ಅವರ ನಿರ್ಮಾಣದ ಎಲ್ಲಾ ಚಿತ್ರಗಳು ಅಮೇಜಾನ್ ಪ್ರೈಮ್ ವಿಡಿಯೋದಲ್ಲಿಯೇ ವೀಕ್ಷಣೆಗೆ ಲಭ್ಯವಿದೆ. ಅವರ ನಿರ್ಮಾಣದ ‘ಒನ್ ಕಟ್ ಟೂ ಕಟ್’, ‘ಫ್ಯಾಮಿಲಿ ಪ್ಯಾಕ್’, ‘ಮ್ಯಾನ್ ಆಫ್ ದಿ ಮ್ಯಾಚ್’ ಸಿನಿಮಾಗಳು ಪ್ರೈಮ್ನಲ್ಲಿ ಬಿಡುಗಡೆ ಆಗುತ್ತಿದೆ. ಇದರ ಜತೆಗೆ ಐದು ಸಿನಿಮಾಗಳು ಉಚಿತ ವೀಕ್ಷಣೆಗೆ ಲಭ್ಯವಾಗುತ್ತಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.
ಇದನ್ನೂ ಓದಿ: ‘ಜೇಮ್ಸ್’ ಚಿತ್ರದಲ್ಲಿ ಪುನೀತ್, ಶಿವಣ್ಣ, ರಾಘಣ್ಣ; ಫ್ಯಾನ್ಸ್ ಕನಸು ಈಡೇರಿಸಲು ನಿರ್ದೇಶಕರ ಪ್ಲ್ಯಾನ್
ಅಮೇಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿದೆ ಪುನೀತ್ ನಿರ್ಮಾಣದ ಮೂರು ಸಿನಿಮಾಗಳು