AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಚಿತ್ರದ ಹಸಿಬಿಸಿ ದೃಶ್ಯಗಳ ಬಗ್ಗೆ ಬಾಯ್ಬಿಟ್ಟ ದೀಪಿಕಾ; ವೈಯಕ್ತಿಕ ಬದುಕಿಗೆ ಇದೆ ಕನೆಕ್ಷನ್​

Gehraiyaan Movie Trailer: ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ‘ಗೆಹರಾಯಿಯಾ’ ಸಿನಿಮಾ ನೇರವಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ದೀಪಿಕಾ ಪಡುಕೋಣೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೊಸ ಚಿತ್ರದ ಹಸಿಬಿಸಿ ದೃಶ್ಯಗಳ ಬಗ್ಗೆ ಬಾಯ್ಬಿಟ್ಟ ದೀಪಿಕಾ; ವೈಯಕ್ತಿಕ ಬದುಕಿಗೆ ಇದೆ ಕನೆಕ್ಷನ್​
ದೀಪಿಕಾ ಪಡುಕೋಣೆ, ಸಿದ್ಧಾಂತ್​ ಚತುರ್ವೇದಿ
TV9 Web
| Edited By: |

Updated on: Jan 21, 2022 | 8:06 AM

Share

ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಹೊಸ ಸಿನಿಮಾ ‘ಗೆಹರಾಯಿಯಾ’ ಟ್ರೇಲರ್​ ಸಖತ್​ ಸದ್ದು ಮಾಡುತ್ತಿದೆ. ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ 90 ಲಕ್ಷಕ್ಕೂ ಅಧಿಕ ಮಂದಿ ಈ ಟ್ರೇಲರ್​ ನೋಡಿದ್ದಾರೆ. ‘ಗೆಹರಾಯಿಯಾ’ (Gehraiyaan Movie) ಟ್ರೇಲರ್​ ಬಗ್ಗೆ ಈ ಪರಿ ಆಕರ್ಷಣೆ ಮೂಡಲು ಕಾರಣ ಕೂಡ ಇದೆ. ಇದರಲ್ಲಿ ದೀಪಿಕಾ ಪಡುಕೋಣೆ ಅವರು ಸಖತ್​ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಸಹ ನಟ ಸಿದ್ಧಾಂತ್​ ಚತುರ್ವೇದಿ (Siddhant Chaturvedi) ಜೊತೆ ಅವರು ಹಸಿಬಿಸಿ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಅನೇಕ ಲಿಪ್​ ಲಾಕ್​ ಸೀನ್​ಗಳು ಈ ಟ್ರೇಲರ್​ನಲ್ಲಿ ಇವೆ. ಅದನ್ನು ನೋಡಿ ಫ್ಯಾನ್ಸ್​ ಅಚ್ಚರಿಪಟ್ಟಿದ್ದಾರೆ. ಈ ಹಿಂದೆ ಟೀಸರ್​ನಲ್ಲಿಯೂ ಇದೇ ಅಂಶಗಳು ಹೈಲೈಟ್​ ಆಗಿದ್ದವು. ಈಗ ಆ ಎಲ್ಲ ವಿಚಾರಗಳ ಬಗ್ಗೆ ದೀಪಿಕಾ ಪಡುಕೋಣೆ ಮೌನ ಮುರಿದಿದ್ದಾರೆ. ‘ಗೆಹರಾಯಿಯಾ’ ಸಿನಿಮಾದಲ್ಲಿ ಯಾಕೆ ಅಂಥ ದೃಶ್ಯಗಳಿವೆ ಎಂಬುದನ್ನು ಅವರು ವಿವರಿಸಿದ್ದಾರೆ. ಈ ಚಿತ್ರಕ್ಕೆ ಶಕುನ್​ ಬಾತ್ರಾ ನಿರ್ದೇಶನ ಮಾಡಿದ್ದಾರೆ. ಅನನ್ಯಾ ಪಾಂಡೆ, ಧೈರ್ಯ ಕರ್ವ ಮುಂತಾದವರು ಅಭಿನಯಿಸಿದ್ದಾರೆ. 

ಸಂಬಂಧಗಳ ಸಂಕೀರ್ಣತೆಯ ಬಗ್ಗೆ ಈ ಸಿನಿಮಾ ಬೆಳಕು ಚೆಲ್ಲಲಿದೆ. ಆಧುನಿಕ ಜಗತ್ತಿನಲ್ಲಿ ಸಂಬಂಧಗಳು ಯಾವ ರೀತಿ ಮಾರ್ಪಾಡು ಹೊಂದಿವೆ ಎಂಬುದನ್ನು ಈ ಚಿತ್ರ ತೋರಿಸಲಿದೆ. ಆ ಕಾರಣಕ್ಕಾಗಿ ಈ ಸಿನಿಮಾದಲ್ಲಿ ಇಂಥ ದೃಶ್ಯಗಳು ಸ್ಥಾನ ಪಡೆದುಕೊಂಡಿವೆ. ಎಂಗೇಜ್​ ​ಮೆಂಟ್​ ಮಾಡಿಕೊಂಡ ಯುವಕ, ಮದುವೆಯಾದ ಪರಸ್ತ್ರೀ ಜೊತೆ ಸಂಬಂಧ ಬೆಳೆಸುವ ಕಥೆ ಈ ಸಿನಿಮಾದಲ್ಲಿದೆ. ಈ ಪಾತ್ರವನ್ನು ನಿಭಾಯಿಸಲು ತಮ್ಮ ವೈಯಕ್ತಿಕ ಬದುಕಿನ ಕೆಲವು ಅಹಿತಕರ ಸಂದರ್ಭಗಳನ್ನು ನೆನಪು ಮಾಡಿಕೊಳ್ಳಬೇಕಾಯಿತು ಎಂದು ದೀಪಿಕಾ ಹೇಳಿದ್ದಾರೆ.

ರಣವೀರ್​ ಸಿಂಗ್​ ಅವರನ್ನು ಪ್ರೀತಿಸುವುದಕ್ಕೂ ಮುನ್ನ ನಟ ರಣಬೀರ್​ ಕಪೂರ್ ಜೊತೆ ದೀಪಿಕಾ ಡೇಟಿಂಗ್​ ಮಾಡುತ್ತಿದ್ದರು. ಆ ರಿಲೇಷನ್​ಶಿಪ್​ನಲ್ಲಿ ಅವರಿಗೆ ಹಲವು ಕಹಿ ಅನುಭವಗಳಾಗಿದ್ದುಂಟು. ಆ ಕಾರಣದಿಂದ ಅದು ಬ್ರೇಕಪ್​ನಲ್ಲಿ ಅಂತ್ಯವಾಯ್ತು. ನಿರ್ದಿಷ್ಟವಾಗಿ ಈ ಯಾವ ವಿಚಾರವನ್ನೂ ದೀಪಿಕಾ ಪ್ರಸ್ತಾಪ ಮಾಡಿಲ್ಲ. ಆದರೂ ಕೂಡ ‘ಗೆಹರಾಯಿಯಾ’ ಟ್ರೇಲರ್​ ಬಗ್ಗೆ ಮಾತಾಡುವಾಗ ವೈಯಕ್ತಿಕ ಬದುಕಿನ ಕುರಿತು ನೆನಪಿಸಿಕೊಂಡಿದ್ದಾರೆ.

ಅಮೇಜಾನ್​ ಪ್ರೈಮ್​ ವಿಡಿಯೋ ಮೂಲಕ ‘ಗೆಹರಾಯಿಯಾ’ ಸಿನಿಮಾ ನೇರವಾಗಿ ಬಿಡುಗಡೆ ಆಗಲಿದೆ. ಈ ಸಿನಿಮಾ ಬಗ್ಗೆ ದೀಪಿಕಾ ಪಡುಕೋಣೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫೆ.11ರಂದು ವೀಕ್ಷಣೆಗೆ ಲಭ್ಯವಾಗಲಿದ್ದು, ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ ಹಾಗೂ ಸಿದ್ದಾರ್ಥ್​ ನಡುವೆ ಸಾಕಷ್ಟು ಕಿಸ್ಸಿಂಗ್​ ದೃಶ್ಯಗಳಿವೆ. ದೀಪಿಕಾ ಸಿನಿಮಾದಲ್ಲಿ ತುಂಬ ಬೋಲ್ಡ್​​ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ, ಟ್ರೇಲರ್​ ಸಾಕಷ್ಟು ವೈರಲ್​ ಆಗುತ್ತಿದೆ. ದೀಪಿಕಾ ನಟನೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Deepika Padukone: ವೈರಲ್ ಆಗುತ್ತಿದೆ ದೀಪಿಕಾ-ಸಿದ್ದಾರ್ಥ್ ಕಿಸ್ಸಿಂಗ್ ದೃಶ್ಯ; ಇಲ್ಲಿವೆ ಫೋಟೋಗಳು

ಕಿಸ್ಸಿಂಗ್​ ದೃಶ್ಯಗಳಲ್ಲಿ ಮಿಂಚಿದ ದೀಪಿಕಾ ಪಡುಕೋಣೆ; ‘ಗೆಹರಾಯಿಯಾ’ ಟ್ರೇಲರ್​ನಲ್ಲಿ ಹೈಲೈಟ್​ ಆಯ್ತು ಸಂಬಂಧಗಳ​ ವಿಚಾರ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ