ಶರ್ಟ್, ಲಿಲ್ಯಾಕ್ ಕ್ಯಾಪ್, ಮಾಸ್ಕ್ ಮತ್ತು ಮಾಸ್ಕ್​ಗಿಂತ ಕೊಂಚ ದೊಡ್ಡ ಡೆನಿಮ್ ಶಾರ್ಟ್ ತೊಟ್ಟ ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ಕಂಡರು!

ಭಾನುವಾರ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡಿದ್ದು ಹೀಗೆ. ಮೇಲೆ ಒಂದು ದೊಗಳೆ ಶರ್ಟ್ ಧರಿಸಿದ್ದಾರೆ ಕೆಳಗೆ ಒಂದು ತುಂಡು ಚೆಡ್ಡಿ! ಈ ಡೆನಿಮ್ ಶಾರ್ಟ್ ಎಷ್ಟು ಶಾರ್ಟ್ ಆಗಿದೆಯೆಂದರೆ, ಅವರು ತೊಟ್ಟಿರುವ ಶರ್ಟ್ ಅದನ್ನು ಸಂಪೂರ್ಣವಾಗಿ ಕವರ್ ಮಾಡಿದೆ!

TV9kannada Web Team

| Edited By: shivaprasad.hs

Jan 27, 2022 | 7:00 AM

ರಶ್ಮಿಕಾ ಮಂದಣ್ಣ ಇನ್ನು ಕನ್ನಡಿಗರ ಕೈಗೆ ಸಿಗಲಾರರು ಮಾರಾಯ್ರೇ. ‘ಪುಷ್ಪ’ ಚಿತ್ರದ ಪ್ರಚಂಡ ಯಶಸ್ಸು ಅವರನ್ನು ಭಾರತೀಯ ಚಿತ್ರರಂಗದ ಅತ್ಯಂತ ಬ್ಯೂಸಿ ತಾರೆಯನ್ನಾಗಿ ಮಾಡಿದೆ. ತೆಲುಗಿನಲ್ಲಂತೂ ಅವರು ಸೂಪರ್ ಸ್ಟಾರಿಣಿ. ಅವರ ಕೈಯಲ್ಲೀಗ ಈಗ 4 ಚಿತ್ರಗಳಿಗೆ. ‘ಪುಷ್ಪಂ’ ಚಿತ್ರದ ಎರಡನೇ ಭಾಗದ ಶೂಟಿಂಗ್ ಇಷ್ಟರಲ್ಲೇ ಆರಂಭಗೊಳ್ಳಲಿದೆ. ‘ಆಡವಾಳ್ಳು ಮೀಕು ಜೊಹರ್ಲು’ ಚಿತ್ರದ ಬಿಡುಗಡೆಗೆ ಸಿದ್ಧವಾಗಿದೆ. ‘ಮಿಶನ್ ಮಜ್ನು’ ಹಿಂದಿ ಚಿತ್ರದಲ್ಲಿ ಅವರು ಸಿದ್ದಾರ್ಥ್ ಮಲ್ಹೋತ್ರಾ ಜೊತೆ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ರಶ್ಮಿಕಾ, ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ‘ಗುಡ್ ಬೈ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ನೀವೇ ಹೇಳಿ ಅವರು ಕನ್ನಡಿಗರ ಕೈಗೆ ಸಿಕ್ಕಾರೆಯೇ? ರಶ್ಮಿಕಾ ಬೆಳಗ್ಗೆ ಹೈದರಾಬಾದ್ ನಲ್ಲಿದ್ದರೆ ಸಾಯಂಕಾಲ ಮುಂಬೈನಲ್ಲಿರುತ್ತಾರೆ. ಅದನ್ನು ಹೇಳುವುದಕ್ಕಾಗಿಯೇ ನಾವು ಇದನ್ನೆಲ್ಲ ಹೇಳಬೇಕಾಯಿತು ಮಾರಾಯ್ರೇ.

ಭಾನುವಾರ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಡಿದ್ದು ಹೀಗೆ. ಮೇಲೆ ಒಂದು ದೊಗಳೆ ಶರ್ಟ್ ಧರಿಸಿದ್ದಾರೆ ಕೆಳಗೆ ಒಂದು ತುಂಡು ಚೆಡ್ಡಿ! ಈ ಡೆನಿಮ್ ಶಾರ್ಟ್ ಎಷ್ಟು ಶಾರ್ಟ್ ಆಗಿದೆಯೆಂದರೆ, ಅವರು ತೊಟ್ಟಿರುವ ಶರ್ಟ್ ಅದನ್ನು ಸಂಪೂರ್ಣವಾಗಿ ಕವರ್ ಮಾಡಿದೆ!

ಅವರ ಸಹಾಯಕ ಎರಡೆರಡು ಸೂಟ್​ಕೇಸ್ ತಳ್ಳಿಕೊಂಡು ಚೆಕ್ ಔಟ್ ಆಗುತ್ತಿದ್ದರೆ, ರಶ್ಮಿಕಾ ಮೊಬೈಲ್ ನೋಡುತ್ತಾ ನಿಧಾನಕ್ಕೆ ನಡೆದು ಬರುತ್ತಿದ್ದಾರೆ. ಮಾಧ್ಯಮದವರಿಗೆ ಫೋಟೋ ಬೇಡ ಅನ್ನುವುದು ವಿಡಿಯೋನಲ್ಲಿ ಕಾಣುತ್ತದೆ. ಅವರ ತಲೆ ಮೇಲೆ ಲಿಲ್ಯಾಕ್ ಟೋಪಿ ಇದೆ ಮತ್ತು ಮುಖಕ್ಕೆ ಮಾಸ್ಕ್.

ರಶ್ಮಿಕಾ ಅವರ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಆದ ತಕ್ಷಣ ನೆಟ್ಟಿಗರು ಅವರು ಧರಿಸಿರುವ ಡ್ರೆಸ್ ಮೇಲೆ ಕಾಮೆಂಟ್ ಮಾಡಲಾರಂಭಿಸಿದ್ದಾರೆ. ‘ಇವರಿಗೆ ಚಳಿಯಾಗುವುದಿಲ್ಲವೇ?’ ಅಂತ ಒಬ್ಬ ಕೇಳಿದರೆ ಇನ್ನೊಬ್ಬ, ‘ಪ್ಯಾಂಟ್ ಧರಿಸುವುದು ಮರೆತು ಬಿಟ್ಟಿದ್ದಾರೆ ಅನಿಸುತ್ತೆ,’ ಅಂತ ಕಾಮೆಂಟ್ ಮಾಡಿದ್ದಾನೆ!

ಇದನ್ನೂ ಓದಿ:   ಟಾಲಿವುಡ್​ನಲ್ಲಿ ಹೆಚ್ಚುತ್ತಿದೆ ಕನ್ನಡತಿ ಶ್ರೀಲೀಲಾ ಹವಾ; ರಶ್ಮಿಕಾ ಮಂದಣ್ಣಗೆ ಎದುರಾಗುತ್ತಾ ಟಫ್​ ಸ್ಪರ್ಧೆ 

Follow us on

Click on your DTH Provider to Add TV9 Kannada