ಸಚಿವ ಉಮೇಶ ಕತ್ತಿ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅಯೋಗ್ಯರೆಂದರು ವಿಜಯಪುರದ ರೈತರು!
ಯತ್ನಾಳ್ ವಿರುದ್ಧ ಕಿಡಿಕಾರಿದ ರೈತರು, ಅವರು ನಾಯಕ ಅನಿಸಿಕೊಳ್ಳುವುದಕ್ಕೆ ನಾಲಾಯಕ್ಕು ಮತ್ತು ಅಯೋಗ್ಯ, ಜಾತಿಗಳ ನಡುವೆ ದ್ವೇಷದ ಕಿಡಿ ಹೊತ್ತಿಸಿವುದನ್ನು ಬಿಟ್ಟರೆ ಅವರಿಗೆ ಬೇರೇನೂ ಗೊತ್ತಿಲ್ಲ. ಕಳೆದ 6 ವರ್ಷಗಳಿಂದ ರಸ್ತೆ ಬೇಕೆಂದು ಯತ್ನಾಳ್ ಅವರಿಗೆ ಬಹಳ ದಿನಗಳಿಂದ ಹೇಳುತ್ತಿದ್ದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಅಯೋಗ್ಯರೇ ಎಂದು ರೈತರು ದೂರಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ (Umesh Katti) ಅವರು ಮತ್ತೇ ಸುದ್ದಿಯಲ್ಲಿದ್ದಾರೆ. ಎಂಟು ಬಾರಿ ಶಾಸಕರಾಗಿ ಅಯ್ಕೆಯಾಗಿರುವ ಕತ್ತಿ ಅವರಿಗೆ ಸುದ್ದಿಯಲ್ಲಿರೋದು ಅಭ್ಯಾಸವಾಗಿಬಿಟ್ಟಿದೆ. ಓಕೆ ವಿಜಯಪುರ (Vijayapura) ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಕತ್ತಿ ಗಣರಾಜ್ಯೋತ್ಸವ ದಿನದಂದು (Republic Day) ಯಾವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ಅಂತ ತಿಳಿದುಕೊಳ್ಳುವ. ಬುಧವಾರ ಅವರು ಕಾರಲ್ಲಿ ಎಲ್ಲಿಂದ ಎಲ್ಲಿಗೆ ಹೊರಟಿದ್ದರು ಅನ್ನೋದು ಗೊತ್ತಾಗಿಲ್ಲ. ಅದರೆ, ಕೆಲವು ರೈತರಿಗೆ ಅವರು ಆ ದಾರಿಯಿಂದ ಹಾದು ಹೋಗಲಿದ್ದಾರೆ ಅಂತ ಗೊತ್ತಿತ್ತು. ಹಾಗಾಗೇ, ತಮ್ಮ ಅಹವಾಲನ್ನು ಹಿಡಿದು ಅವರು ಮಂತ್ರಿಗಳ ಕಾರು ನಿಲ್ಲಿಸಿದರು. ಕಾರು ನಿಂತ ಬಳಿಕ ರೈತ ಮುಖಂಡರು ಅವರಿಗೆ ದಯವಿಟ್ಟು ಕಾರಿನಿಂದ ಹೊರಬಂದು ತಮ್ಮ ಮನವಿ ಸ್ವೀಕರಿಸಿ ಅಂತ ಕೋರುತ್ತಾರೆ. ಆದರೆ ಕತ್ತಿ ಇಳಿಯುವುದಿಲ್ಲ. ಏನ್ ಹೇಳಬೇಕಾಗ್ಯದ ಹೇಳ್ರೀ, ಅಂತ ಕಾರಲ್ಲಿ ಕೂತೇ ಹೇಳುತ್ತಾರೆ. ರೈತರು ಮತ್ತೊಮ್ಮೆ ಮನವಿ ಮಾಡಿದರೂ ಅವರು ಸಚಿವರು ಹೊರಗೆ ಬರಲೊಲ್ಲರು. ಕೊನೆಗೆ ಅವರಿಗೆ ಕಾರಲ್ಲೇ ಮನವಿ ಪತ್ರ ಸಲ್ಲಿಸಿ ರೈತರು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಾರೆ.
ಅವರ ಸಮಸ್ಯೆ ಕೇಳಿಸಿಕೊಂಡು ಮಂತ್ರಿಗಳು ಅಲ್ಲಿಂದ ಹೊರಡುತ್ತಾರೆ. ಅವರು ಕಾರಿನಿಂದ ಇಳಿಯದ ಕಾರಣ ಕೋಪಗೊಂಡಿದ್ದ ರೈತರು ಮಾಧ್ಯಮದವರ ಮುಂದೆ ಕತ್ತಿ ಅವರಲ್ಲದೆ, ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತು ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಯತ್ನಾಳ್ ವಿರುದ್ಧ ಕಿಡಿಕಾರಿದ ರೈತರು, ಅವರು ನಾಯಕ ಅನಿಸಿಕೊಳ್ಳುವುದಕ್ಕೆ ನಾಲಾಯಕ್ಕು ಮತ್ತು ಅಯೋಗ್ಯ, ಜಾತಿಗಳ ನಡುವೆ ದ್ವೇಷದ ಕಿಡಿ ಹೊತ್ತಿಸಿವುದನ್ನು ಬಿಟ್ಟರೆ ಅವರಿಗೆ ಬೇರೇನೂ ಗೊತ್ತಿಲ್ಲ. ಕಳೆದ 6 ವರ್ಷಗಳಿಂದ ರಸ್ತೆ ಬೇಕೆಂದು ಯತ್ನಾಳ್ ಅವರಿಗೆ ಬಹಳ ದಿನಗಳಿಂದ ಹೇಳುತ್ತಿದ್ದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ, ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಅಯೋಗ್ಯರೇ ಎಂದು ರೈತರು ದೂರಿದರು.
ಕತ್ತಿ ಅವರನ್ನು ಮೊದಲ ಬಾರಿ ಭೇಟಿಯಾಗಿದ್ದರಿಂದ ಸಮ್ಮನಿದ್ದೇವೆ, ಮುಂದಿನ ಬಾರಿಯೂ ಇದೇ ರೀತಿಯ ವರ್ತನೆ ತೋರಿದರೆ ಮತ್ತು ರೈತರ ಕಾಳಜಿ ತೋರದೆ ಅವಮಾನಿಸುವುದು ಮುಂದುವರಿಸಿದರೆ ಕತ್ತಿ ಮತ್ತು ಯತ್ನಾಳ್ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸುತ್ತೇನೆ ಮತ್ತು ಅವರನ್ನು ಕೂಡಿ ಹಾಕುತ್ತೇವೆ ಅಂತ ರೈತ ಮುಖಂಡ ಎಚ್ಚರಿಸಿದರು.