Hardik Pandya: ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ; ಫ್ಯಾನ್ಸ್ ಮನಗೆದ್ದ ವಿಡಿಯೋ ಇಲ್ಲಿದೆ

Hardik Pandya: ಅಜ್ಜಿ ಜತೆ ಶ್ರೀವಲ್ಲಿ ಹಾಡಿಗೆ ಮಸ್ತ್ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ; ಫ್ಯಾನ್ಸ್ ಮನಗೆದ್ದ ವಿಡಿಯೋ ಇಲ್ಲಿದೆ
ತಮ್ಮ ಅಜ್ಜಿಯೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ಹಾರ್ದಿಕ್ ಪಾಂಡ್ಯ (ಎಡ ಚಿತ್ರ), ಅಲ್ಲು ಅರ್ಜುನ್ (ಬಲ ಚಿತ್ರ)

Allu Arjun | Pushpa: ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ: ದಿ ರೈಸ್’ ದೊಡ್ಡ ಸೆನ್ಸೇಶನ್ ಹುಟ್ಟುಹಾಕಿದೆ. ಚಿತ್ರದ ಹಾಡುಗಳಿಗೆ ಖ್ಯಾತ ಕ್ರಿಕೆಟ್ ತಾರೆಯರು ಈಗಾಗಲೇ ಸ್ಟೆಪ್ಸ್ ಹಾಕಿದ್ದು ವೈರಲ್ ಆಗಿದೆ. ಈ ಸಾಲಿಗೆ ಹಾರ್ದಿಕ್ ಪಾಂಡ್ಯ ಕೂಡ ಸೇರ್ಪಡೆಯಾಗಿದ್ದಾರೆ.

TV9kannada Web Team

| Edited By: shivaprasad.hs

Jan 26, 2022 | 3:48 PM

ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ: ದಿ ರೈಸ್’ ಚಿತ್ರ ಬಾಕ್ಸಾಫೀಸ್​ನಲ್ಲಿ ದೊಡ್ಡ ಹಿಟ್ ಆಗಿದ್ದಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಹುಟ್ಟುಹಾಕಿದೆ. ಈಗಾಗಲೇ ತಾರೆಯರು ‘ಪುಷ್ಪ’ದ ಹಾಡುಗಳಿಗೆ ಸ್ಟೆಪ್ಸ್​ ಹಾಕಿದ್ದಾರೆ. ಇದೀಗ ಖ್ಯಾತ ಕ್ರಿಕೆಟ್ ಆಟಗಾರರು ಈ ಟ್ರೆಂಡ್​ ಮೋಡಿಗೆ ಸಿಕ್ಕಿದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಡೇವಿಡ್ ವಾರ್ನರ್ ‘ಶ್ರೀವಲ್ಲಿ’ ಹಾಡಿಗೆ ಹೆಜ್ಜೆಹಾಕಿದ್ದರು. ಸುರೇಶ್ ರೈನಾ ಹಾಗೂ ಡ್ವೇನ್ ಬ್ರಾವೋ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇದೀಗ ಭಾರತ ಕ್ರಿಕೆಟ್ ತಂಡದ ಮತ್ತೋರ್ವ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ (Hardik Pandya) ‘ಶ್ರೀವಲ್ಲಿ’ ಮೋಡಿಗೆ ಬಿದ್ದಿದ್ದಾರೆ. ವಿಶೇಷವೆಂದರೆ ಹಾರ್ದಿಕ್ ಪಾಂಡ್ಯಗೆ ಅವರ ಅಜ್ಜಿ ಭರ್ಜರಿ ಸಾಥ್ ನೀಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿತಮ್ಮ ಅಜ್ಜಿಯೊಂದಿಗೆ  ‘ಶ್ರೀವಲ್ಲಿ’ ಹಾಡಿಗೆ ಹೆಜ್ಜೆಹಾಕುತ್ತಿರುವ ರೀಲ್ಸ್​​ಅನ್ನು ಹಾರ್ದಿಕ್ ಪಾಂಡ್ಯ ಹಂಚಿಕೊಂಡಿದ್ದಾರೆ. ಮಸ್ತ್​ ಸ್ಟೆಪ್ಸ್ ಮೂಲಕ ಹಾರ್ದಿಕ್ ಹಾಗೂ ಅವರ ಅಜ್ಜಿ ನೋಡುಗರ ಮನಗೆದ್ದಿದ್ದಾರೆ. ಹಾಡಿನ ನಂತರ ‘ತಗ್ಗೆದೆ ಲೆ’ ಎಂದು ಖಡಕ್ ಆಗಿ ಪೋಸ್ ನೀಡಿರುವ ಈರ್ವರು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಶನ್ ಮೂಡಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಹಾಗೂ ಅವರ ಅಜ್ಜಿ ‘ಶ್ರೀವಲ್ಲಿ’ ಹಾಡಿಗೆ ಹೆಜ್ಜೆ ಹಾಕಿದ್ದು ಹೀಗೆ:

ಟ್ರೆಂಡ್ ಹುಟ್ಟುಹಾಕಿದ್ದ ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಬ್ಯಾಟರ್ ಡೇವಿಡ್ ವಾರ್ನರ್​ಗೆ ಭಾರತದಲ್ಲಿ ಅತ್ಯಂತ ದೊಡ್ಡ ಅಭಿಮಾನಿ ಬಳಗವಿದೆ. ಟಾಲಿವುಡ್ ಹಾಗೂ ದಕ್ಷಿಣ ಭಾರತ ಚಿತ್ರಗಳ ಹಿಟ್ ಹಾಡು ಹಾಗೂ ದೃಶ್ಯಗಳನ್ನು ಮರುಸೃಷ್ಟಿ ಮಾಡುತ್ತಾ ಡೇವಿಡ್ ವಾರ್ನರ್ ಸಖತ್ ಸುದ್ದಿಯಾಗುತ್ತಿರುತ್ತಾರೆ. ಇತ್ತೀಚೆಗಷ್ಟೇ ಅವರು ‘ಶ್ರೀವಲ್ಲಿ’ ಹಾಡಿಗೆ ಹೆಜ್ಜೆಹಾಕಿದ್ದರು. ಜತೆಗೆ ‘ಪುಷ್ಪ’ ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯವನ್ನು ಹಾಡಿಹೊಗಳಿದ್ದ ಅವರು, ಅದಕ್ಕೆ ತಮ್ಮ ಮುಖವನ್ನು ಹೊಂದಿಸಿ, ‘ನಟನೆ ಎಷ್ಟು ಸುಲಭ!’ ಎಂದು ಹಾಸ್ಯ ಚಟಾಕಿ ಹಾರಿಸಿದ್ದರು. ಆ ವಿಡಿಯೋಗಳು ವೈರಲ್ ಆಗಿದ್ದವು.

ಡೇವಿಡ್ ವಾರ್ನರ್ ಹುಟ್ಟುಹಾಕಿದ್ದ ಟ್ರೆಂಡ್ ಮುಂದುವರೆಸಿದ್ದ ಭಾರತದ ಖ್ಯಾತ ಕ್ರಿಕೆಟ್ ತಾರೆ ಸುರೇಶ್ ರೈನಾ ಕೂಡ ‘ಶ್ರೀವಲ್ಲಿ’ ಹಾಡಿಗೆ ಭರ್ಜರಿ ಹೆಜ್ಜೆ ಹಾಕಿದ್ದರು. ಇದನ್ನು ನೋಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ತಾವೂ ಕೂಡ ಮಸ್ತ್ ಸ್ಟೆಪ್ ಹಾಕಿ ಎಲ್ಲರ ಮನಗೆದ್ದಿದ್ದರು. ಇದೀಗ ಆ ಟ್ರೆಂಡ್​ಅನ್ನು ಹಾರ್ದಿಕ್ ಪಾಂಡ್ಯ ಮುಂದುವರೆಸಿದ್ದಾರೆ.

View this post on Instagram

A post shared by Suresh Raina (@sureshraina3)

ಭಾರತ ಕ್ರಿಕೆಟ್ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ಅಲ್ಲು ಅರ್ಜುನ್ ಲುಕ್ ಹೋಲುವಂತೆ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಅದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನೂ ಓದಿ:

ಕತ್ರಿನಾ ಬಿಕಿನಿ ಫೋಟೋಗೆ ಪಡ್ಡೆಗಳು ಫಿದಾ

Kareena Kapoor: ಗಣರಾಜ್ಯೋತ್ಸವಕ್ಕೆ ತೈಮೂರ್ ಶುಭಕೋರಿದ್ದು ಹೇಗೆ? ಕರೀನಾ ಹಂಚಿಕೊಂಡ ಫೋಟೋ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada