Puneeth Rajkumar: ಪಟಾಕಿ ಸಿಡಿಸಿ, ಹಾಲಿನ ಅಭಿಷೇಕ ಮಾಡಿ ‘ಜೇಮ್ಸ್’ ಸ್ವಾಗತಿಸಿದ ಅಭಿಮಾನಿಗಳು
James Poster Release: ಗಣರಾಜ್ಯೋತ್ಸವದ ಸಂಭ್ರಮದ ಜತೆಜತೆಗೆ ಪುನೀತ್ ಅಭಿಮಾನಿಗಳು ‘ಜೇಮ್ಸ್’ನ ಹೊಸ ಪೋಸ್ಟರ್ಅನ್ನು ಕೂಡ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಪಟಾಕಿ ಸಿಡಿಸಿ, ಹಾಲಿನ ಅಭಿಷೇಕ ಮಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬೆಂಗಳೂರು: ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಈ ಸಂದರ್ಭದಲ್ಲಿ ಅವರನ್ನು ಫ್ಯಾನ್ಸ್ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ನೋವಿನಲ್ಲೂ ‘ಜೇಮ್ಸ್’ ಮೂಲಕ ಪುನೀತ್ ಮರುಆಗಮನವನ್ನು ಅಭಿಮಾನಿಗಳು ಬಹಳ ಪ್ರೀತಿಯಿಂದ ಎದುರುಗೊಂಡಿದ್ದಾರೆ. ರಾಜ್ಯಾದ್ಯಂತ ಕಂಡುಬಂದ ಸಂಭ್ರಮವೇ ಇದಕ್ಕೆ ಸಾಕ್ಷಿ. ಮಕ್ಕಳ ಕೈಯಿಂದ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಪೋಸ್ಟರ್ ರಿಲೀಸ್ ಆಗಿದ್ದು, ಅಭಿಮಾನಿಗಳು ಪಟಾಕಿ ಸಿಡಿಸಿ, ಪೋಸ್ಟರ್ಗೆ ಹಾರ ಹಾಕಿ, ಹಾಲಿನ ಅಭಿಷೇಕ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಈ ಸಂದರ್ಭದ ವಿಡಿಯೋಗಳು ವೈರಲ್ ಆಗಿವೆ.
ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಹಾಗೂ ಪ್ರಿಯಾ ಆನಂದ್ ನಟಿಸಿದ್ದಾರೆ. ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ವಿಶೇಷ ಪಾತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ಪುನೀತ್ ಜನ್ಮದಿನವಾದ ಮಾರ್ಚ್ 17ರಂದು ಚಿತ್ರ ತೆರೆಕಾಣುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಈ ಕುರಿತು ಅಧಿಕೃತ ಘೋಷಣೆಯನ್ನು ಚಿತ್ರತಂಡ ಇನ್ನಷ್ಟೇ ಮಾಡಬೇಕಿದೆ.
ಇದನ್ನೂ ಓದಿ:
James Special Poster: ‘ಜೇಮ್ಸ್’ ಹೊಸ ಪೋಸ್ಟರ್ ರಿಲೀಸ್; ಪುನೀತ್ ಫ್ಯಾನ್ಸ್ಗೆ ಗಣರಾಜ್ಯೋತ್ಸವದ ಗಿಫ್ಟ್
ರಿಲೀಸ್ ಡೇಟ್ ಮುಂದೂಡಿಕೊಂಡ ‘ಗಜಾನನ ಆ್ಯಂಡ್ ಗ್ಯಾಂಗ್’; ಚಿತ್ರತಂಡ ನೀಡಿದ ಕಾರಣ ಏನು?