ಶಕ್ತಿಧಾಮದಲ್ಲಿ ಶಿವರಾಜ್​ಕುಮಾರ್​ ಧ್ವಜಾರೋಹಣ; ಮಕ್ಕಳ ಜತೆ ಗಣರಾಜ್ಯೋತ್ಸವ ಆಚರಣೆ

Shivarajkumar: ಶಕ್ತಿಧಾಮವನ್ನು ಡಾ. ರಾಜ್​ಕುಮಾರ್​ ಕುಟುಂಬ ನೋಡಿಕೊಳ್ಳುತ್ತಿದೆ. ಇಂದು (ಜ.26) ಅಲ್ಲಿನ ಮಕ್ಕಳ ಜೊತೆ ಸೇರಿ ಶಿವರಾಜ್​ಕುಮಾರ್​ ಅವರು ಗಣರಾಜ್ಯೋತ್ಸವ ಆಚರಿಸಿದ್ದಾರೆ.

TV9kannada Web Team

| Edited By: Madan Kumar

Jan 26, 2022 | 12:11 PM

ದೇಶದೆಲ್ಲಡೆ ಇಂದು (ಜ.26) ಗಣರಾಜ್ಯೋತ್ಸವ (73rd Republic Day) ಆಚರಣೆ ಮಾಡಲಾಗಿದೆ. ಧ್ವಜಾರೋಹಣ ಮಾಡಿ, ರಾಷ್ಟ್ರ ಗೀತೆ ಹಾಡಿ, ದೇಶಕ್ಕಾಗಿ ಶ್ರಮಿಸಿದ ಎಲ್ಲರನ್ನೂ ಸ್ಮರಿಸಿಕೊಳ್ಳಲಾಗಿದೆ. ನಟ ಶಿವರಾಜ್​ಕುಮಾರ್​ ಅವರು ಮೈಸೂರಿನ ಶಕ್ತಿಧಾಮದಲ್ಲಿ 73ನೇ ವರ್ಷದ ಗಣರಾಜ್ಯೋತ್ಸವ ಆಚರಿಸಿದ್ದಾರೆ. ಪತ್ನಿ ಗೀತಾ ಶಿವರಾಜ್​ಕುಮಾರ್​ (Shivarajkumar) ಜೊತೆ ಸೇರಿ ಅವರು ಧ್ವಜಾರೋಹಣ ಮಾಡಿದ್ದಾರೆ. ಬಳಿಕ ಆಶ್ರಮದ ಮಕ್ಕಳಿಗೆ ಸಿಹಿ ಹಂಚಿ, ಅವರ ಜೊತೆ ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ ಶಿವಣ್ಣ. ಅನೇಕ ಸಿನಿಮಾಗಳಲ್ಲಿ ‘ಹ್ಯಾಟ್ರಿಕ್​ ಹೀರೋ’ ಬ್ಯುಸಿ ಇದ್ದಾರೆ. ಆದರೆ ಇಂದು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುವು ಮಾಡಿಕೊಂಡು ಮಕ್ಕಳಿಗಾಗಿ ದಿನವನ್ನು ಮೀಸಲಿದ್ದಾರೆ. ಮಕ್ಕಳ ಜೊತೆ ಶಿವಣ್ಣ ಜಾಲಿ ರೈಡ್​ ಮಾಡಿದರು. ಅವರ ಜೊತೆ ಬೆರೆತ ಶಕ್ತಿಧಾಮದ (Shakthidhama) ಮಕ್ಕಳು ಖುಷಿಖುಷಿಯಾಗಿ ಕಾಲ ಕಳೆದರು.

ಇದನ್ನೂ ಓದಿ:

‘ನನಗೆ ಲೀಡರ್​ ಪಟ್ಟ ಬೇಡ; ನಿಮ್ಮ ಜತೆ ನಾನೂ ಒಬ್ಬನಾಗಿ ಇರುತ್ತೇನೆ’: ಶಿವರಾಜ್​ಕುಮಾರ್​

James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್

Follow us on

Click on your DTH Provider to Add TV9 Kannada